ಮುಂಬರುವ ಅರೆ- ವಾರ್ಷಿಕ ಸೂಚ್ಯಂಕ ಪರಿಶೀಲನೆಯಲ್ಲಿ ಹೊಸದಾಗಿ ಲಿಸ್ಟ್ ಆದ ಝೊಮ್ಯಾಟೋ, ಒನ್97 ಕಮ್ಯುನಿಕೇಷನ್ಸ್ (ಪೇಟಿಎಂ), ಎಫ್ಎಸ್ಎನ್ ಇ-ಕಾಮರ್ಸ್ ವೆಂಚರ್ಸ್ (ನೈಕಾ) ಅನ್ನು ನಿಫ್ಟಿ (Nifty) ಮುಂದಿನ 50ರ ಸೂಚ್ಯಂಕದಲ್ಲಿ ಸೇರ್ಪಡೆ ಮಾಡಲಾಗುವುದು. ಪರಿಷ್ಕೃತ ಪಟ್ಟಿಯು ಮಾರ್ಚ್ 31ರಿಂದ ಅನ್ವಯ ಆಗುತ್ತದೆ. ಎಸ್ಆರ್ಎಫ್, ಇಂಡಿಯನ್ ಆಯಿಲ್ ಮತ್ತು ಮೈಂಡ್ಟ್ರೀ ಸಹ ಒಳಗೊಳ್ಳಲಿದೆ. ಇವುಗಳು ಕ್ರಮವಾಗಿ 4.7 ಕೋಟಿ ಡಾಲರ್, 4 ಕೋಟಿ ಡಾಲರ್ ಮತ್ತು 3.3 ಕೋಟಿ ಡಾಲರ್ ಒಳಹರಿವು ಕಾಣಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ವಿನಿಮಯ ಕೇಂದ್ರದಿಂದ ಘೋಷಣೆ ಮಾಡಿದ ಪ್ರಕಾರ, ಹೊಸದಾದ ಅರ್ಹತಾ ಮಾನದಂಡಗಳ ಮಾರ್ಪಾಟಿನ ನಂತರ, ಕಳೆದ ವರ್ಷ ಲಿಸ್ಟ್ ಆದಂಥ ಈ ಸ್ಟಾಕ್ಗಳು ಸೂಚ್ಯಂಕಕ್ಕೆ ಸೇರ್ಪಡೆ ಆಗಿವೆ.
ಎನ್ಎಸ್ಇ ಸೂಚ್ಯಂಕ ಲಿಮಿಟೆಡ್ನ ಸೂಚ್ಯಂಕ ನಿರ್ವಹಣೆ ಉಪ-ಸಮಿತಿ- ಈಕ್ವಿಟಿ (IMSC) ಸ್ಟಾಕ್ಗಳ ನಿಫ್ಟಿ ಈಕ್ವಿಟಿ ಸೂಚ್ಯಂಕ ಮತ್ತು ಬದಲಿಯನ್ನು ನಿಯಮಿತವಾಗಿ ಮಾಡುವುದಕ್ಕೆ ನಿಯಮಾವಳಿಯಲ್ಲಿ ಬದಲಾಯಿಸುವುದಕ್ಕೆ ನಿರ್ಧರಿಸಿದೆ. ಮಾರ್ಚ್ 31, 2022ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗುರುವಾರದಂದು ಎನ್ಎಸ್ಇ ಸುತ್ತೋಲೆಯಲ್ಲಿ ತಿಳಿಸಿದೆ. ಅರ್ಹತಾ ಮಾನದಂಡ ಎಂದು ನಿಗದಿ ಮಾಡಿರುವುದರಲ್ಲಿ ಕಟ್-ಆಫ್ ದಿನಾಂಕದಂದು ಕನಿಷ್ಠ ಒಂದು ಕ್ಯಾಲೆಂಡರ್ ತಿಂಗಳು ಲಿಸ್ಟಿಂಗ್ ಇತಿಹಾಸವನ್ನು ಹೊಂದಿರಬೇಕು. ಈ ಹಿಂದೆ ಅದು ಮೂರು ತಿಂಗಳಿತ್ತು. ಇದರಿಂದಾಗಿ ನೈಕಾ, ಪೇಟಿಎಂ, ಪಾಲಿಸಿಬಜಾರ್ ಮತ್ತು ಲೇಟೆಂಟ್ ವ್ಯೂ ಇವೆಲ್ಲ 2021ರ ಅಕ್ಟೋಬರ್ನಲ್ಲಿ ಲಿಸ್ಟ್ ಆಗಿದ್ದವು.
ನೈಕಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಮೈಂಡ್ಟ್ರೀ ಲಿ., ಪೇಟಿಎಂ, ಎಸ್ಆರ್ಎಫ್ ಲಿಮಿಟೆಡ್ ಮತ್ತು ಝೊಮ್ಯಾಟೋ ಲಿಮಿಟೆಡ್ ಈ ಆರು ಸ್ಟಾಕ್ಗಳು ನಿಫ್ಟಿ- 50ಯಲ್ಲಿ ಸೇರ್ಪಡೆ ಆಗಲಿದೆ. ಅಪೋಲೋ ಹಾಸ್ಪಿಟಲ್ ಎಂಟರ್ಪ್ರೈಸ್, ಅರಬಿಂದೋ ಫಾರ್ಮಾ, ಎಚ್ಪಿಸಿಎಲ್, ಐಜಿಎಲ್, ಜಿಂದಾಲ್ ಸ್ಟೀಲ್ ಅಂಡ್ ಪವರ್, ಯೆಸ್ ಬ್ಯಾಂಕ್ ಇವುಗಳಿಗೆ ಬದಲಿಯಾಗಿ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವನ್ನು ಸೇರಲಿದೆ.
ನಿಫ್ಟಿ-50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರ ಲಾಭ ಏನು?:
ಹೀಗೆ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರೊಂದಿಗೆ ಸಾಕಷ್ಟು ಇಂಡೆಕ್ಸ್ ಫಂಡ್ಗಳು ಮತ್ತು ಇಟಿಎಫ್ಗಳು ಈ ಸ್ಟಾಕ್ಗಳನ್ನು ತಮ್ಮ ಪೋರ್ಟ್ಫೋಲಿಯೋದಲ್ಲಿ ಸೇರಿಸಿಕೊಳ್ಳುತ್ತವೆ. ಹೀಗೆ ಮಾಡುವುದರಿಂದ ಈ ಹೊಸ ತಲೆಮಾರಿನ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ಅಗತ್ಯ ಇರುವ ಬೆಂಬಲ ದೊರಕಿಸುತ್ತದೆ. ಮುಂಬರುವ ವರ್ಷಗಳಲ್ಲಿ ಇಂಥದ್ದೇ ಕಂಪೆನಿಗಳು ನಿಫ್ಟಿಯಲ್ಲಿ ಸೇರ್ಪಡೆ ಆಗುವ ಮೂಲಕ ಸಾಂಪ್ರದಾಯಿಕ ಉದ್ಯಮದ ಮಾದರಿಗೆ ಪರ್ಯಾಯ ದೊರೆತಂತಾಗುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಸೂಚ್ಯಂಕದಲ್ಲಿ ಸೇರ್ಪಡೆ ಮಾಡಿದ ಕಾರಣಕ್ಕೆ ಯಾವಾಗ ಇಟಿಎಫ್ಗಳ ಮ್ಯಾನೇಜರ್ಗಳು ಈ ಷೇರುಗಳನ್ನು ಖರೀದಿಸಲು ಆರಂಭ ಮಾಡುತ್ತಾರೋ ಆಗ ವಾಲ್ಯೂಮ್ ಹೆಚ್ಚುತ್ತದೆ. ಮರು ಸಮತೋಲನ ಆಗುವಾಗ ಬೆಲೆ ಮೇಲ್ಮುಖವಾಗಿ ಸಾಗುತ್ತದೆ. ಆದರೆ ಈಗ ಕೂಡ ಈ ಸ್ಟಾಕ್ನಲ್ಲಿ ಅಪಾಯ ಇದ್ದೇ ಇದೆ. ಒಟ್ಟು ಪೋರ್ಟ್ಫೋಲಿಯೋದ ಪೈಕಿ ಶೇ 2ರಿಂದ ಶೇ 4ರಷ್ಟನ್ನು ಮಾತ್ರ ಇವುಗಳಿಗೆ ಮೀಸಲಿಡಬಹುದು. ಅದು ಕೂಡ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ಅಡಿಯಲ್ಲಿ ಹೂಡಿಕೆ ಮಾಡಬಹುದು ಎಂದು ಪರಿಣತರು ಅಭಿಪ್ರಾಯ ಪಡುತ್ತಾರೆ. ಈಗ ಬೆಲೆ ಇಳಿಕೆ ಆಗಿರುವಾಗ ಖರೀದಿಗೆ ಉತ್ತಮ ಸಮಯ ಇದು ಎಂಬುದನ್ನು ಸೇರಿಸುತ್ತಾರೆ.
ಇದನ್ನೂ ಓದಿ: NSE Scam: ಎನ್ಎಸ್ಇ ಹಗರಣದಲ್ಲಿ ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ರನ್ನು ಬಂಧಿಸಿದ ಸಿಬಿಐ