Crime News: ದೆಹಲಿಯಲ್ಲಿ 10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರ ಹತ್ಯೆ

ದೆಹಲಿಯ ನರೇಲಾದಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕ್ರೈಂ ಬ್ರಾಂಚ್ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಕೂಡ ಅಪರಾಧ ಸ್ಥಳಕ್ಕೆ ತಲುಪಿದೆ. ಅಪರಾಧ ತಂಡ ಫೋಟೋಗಳನ್ನು ತೆಗೆದುಕೊಂಡಿದೆ.

Crime News: ದೆಹಲಿಯಲ್ಲಿ 10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರ ಹತ್ಯೆ
ಅತ್ಯಾಚಾರ
Image Credit source: istock

Updated on: Jun 28, 2024 | 10:16 PM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನರೇಲಾ ಪ್ರದೇಶದಲ್ಲಿ ಇಂದು (ಶುಕ್ರವಾರ) 10 ವರ್ಷದ ಬಾಲಕಿಯನ್ನು ಕ್ರೂರವಾಗಿ ಆಕೆಯ ತಲೆ ಒಡೆದು ಕೊಲೆ ಮಾಡಲಾಗಿದೆ. ಭೀಕರ ಸ್ಥಿತಿಯಲ್ಲಿ ಆಕೆಯ ಶವವು ಪತ್ತೆಯಾಗಿದೆ. ನರೇಲಾ ಪೊಲೀಸ್ ಠಾಣೆಯಲ್ಲಿ 12.29ರ ಸುಮಾರಿಗೆ ಪಿಸಿಆರ್ ಕರೆಯನ್ನು ಸ್ವೀಕರಿಸಲಾಯಿತು. ನರೇಲಾದಲ್ಲಿ ನಿನ್ನೆಯಷ್ಟೇ ಈ ಬಾಲಕಿಯ ನಾಪತ್ತೆ ಪ್ರಕರಣ ದಾಖಲಾಗಿತ್ತು.

ದುರಂತವೆಂದರೆ, ಪೊಲೀಸರಿಗೆ ಕರೆ ಮಾಡಿದ ಸ್ವಲ್ಪ ಸಮಯದ ನಂತರ, ಹುಡುಗಿಯ ಶವವು ಪತ್ತೆಯಾಗಿದೆ. ಆಕೆಯ ತಲೆಯನ್ನು ಕ್ರೂರವಾಗಿ ಒಡೆದು ಕೊಲೆ ಮಾಡಲಾಗಿತ್ತು. ಆಕೆ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತ ಎಸೆಯಲಾಗಿತ್ತು. ಪೊಲೀಸ್ ತಂಡವು ಅಪರಾಧದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಅಪರಾಧ ತಂಡ ಮತ್ತು ಎಫ್‌ಎಸ್‌ಎಲ್ (ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ತಂಡ ಕೂಡ ಅಪರಾಧ ಸ್ಥಳಕ್ಕೆ ತಲುಪಿದೆ.

ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್​ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ

ಬಾಲಕಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಮೃತ ಬಾಲಕಿಯ ತಂದೆಯ ಪ್ರಕಾರ, ರಾತ್ರಿ 9.45 ರ ಸುಮಾರಿಗೆ ರಾತ್ರಿ ಊಟ ಮಾಡಿದ ನಂತರ ಅವರ ಮಗಳು ಆಟವಾಡಲು ಹೋಗಿದ್ದಳು. ಅವಳು ಮನೆಗೆ ವಾಪಾಸ್ ಹಿಂತಿರುಗದಿದ್ದಾಗ, ಕುಟುಂಬವು ಎಲ್ಲ ಕಡೆ ಹುಡುಕಾಟವನ್ನು ಪ್ರಾರಂಭಿಸಿತು. ಜೂನ್ 28ರಂದು (ಶುಕ್ರವಾರ) 12.29ರ ಸುಮಾರಿಗೆ PCR ಕರೆ ಮಾಡಲಾಗಿತ್ತು. ಅದಾದ ಸ್ವಲ್ಪ ಹೊತ್ತಿನಲ್ಲೇ ಶವ ಪತ್ತೆಯಾಗಿದೆ.

ಕೆಲವು ಸ್ಥಳೀಯರು ತಮ್ಮ ನೆರೆಹೊರೆಯವರಾದ ರಾಹುಲ್ ಆ ಬಾಲಕಿಯನ್ನು ಶವ ಪತ್ತೆಯಾದ ಜಾಗದ ಕಡೆಗೆ ಕರೆದೊಯ್ಯುವುದನ್ನು ನೋಡಿದ್ದಾರೆ ಎಂದು ಬಾಲಕಿಯ ಪೋಷಕರು ಹೇಳಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Crime News: ಕುಡಿದು ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಬರ್ಬರ ಹತ್ಯೆ; ಪೊಲೀಸರೆದುರು ತಾನೇ ಶರಣಾದ ಮಹಿಳೆ

ತಂದೆಯ ಹೇಳಿಕೆಯನ್ನು ಆಧರಿಸಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 363 (ಅಪಹರಣ), 302 (ಕೊಲೆ), ಮತ್ತು 376D (ಗ್ಯಾಂಗ್ ಅತ್ಯಾಚಾರ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಜೊತೆಗೆ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. (ಪೋಕ್ಸೊ) ಕಾಯಿದೆ. ಇಬ್ಬರು ಶಂಕಿತರಾದ ರಾಹುಲ್ (20) ಮತ್ತು ದೇವದತ್ (30) ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ರಬ್ಬರ್ ಸಿಲಿಂಡರ್ ಟ್ಯೂಬ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಾಹುಲ್ ಮತ್ತು ನರೇಲಾದಲ್ಲಿ ಛತ್ರಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿರುವ ದೇವದತ್ ಇಬ್ಬರೂ ಒಂದೇ ಪ್ರದೇಶದ ನಿವಾಸಿಗಳು. ಈ ಭೀಕರ ಕೊಲೆಯ ವಿವರಗಳನ್ನು ಪೊಲೀಸರು ಇನ್ನೂ ಕಲೆಹಾಕುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Fri, 28 June 24