AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ 13 ವರ್ಷದ ನಂತರ ಪತ್ನಿಯ ರಹಸ್ಯ ಬಯಲು; ಕಬೋರ್ಡ್​ ತೆರೆದು ನೋಡಿದ ಗಂಡ ಶಾಕ್

Shocking News: ಗಂಡ-ಹೆಂಡತಿಯ ನಡುವೆ ಸಾಮಾನ್ಯವಾಗಿ ಯಾವ ಗುಟ್ಟೂ ನಿಲ್ಲುವುದಿಲ್ಲ. ಆದರೆ, ಒಂದೇ ಮನೆಯಲ್ಲಿ 13 ವರ್ಷಗಳಿಂದ ಒಟ್ಟಾಗಿ ವಾಸವಾಗಿದ್ದರೂ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಗಂಡನೊಬ್ಬನಿಗೆ ತನ್ನ ಹೆಂಡತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ, ಬೇರೊಬ್ಬನೊಂದಿಗೆ ನಿಕಾಹ್ ಆಗಿದ್ದಾಳೆ ಎಂಬ ವಿಷಯವೇ ಗೊತ್ತಾಗಿರಲಿಲ್ಲ. ಇಷ್ಟು ವರ್ಷಗಳ ಬಳಿಕ ಅವಳ ಈ ರಹಸ್ಯ ಬಯಲಾಗಿದ್ದು ಹೇಗೆಂದು ಗೊತ್ತಾದರೆ ನೀವು ಕೂಡ ಅಚ್ಚರಿ ಪಡುತ್ತೀರಿ.

ಮದುವೆಯಾದ 13 ವರ್ಷದ ನಂತರ ಪತ್ನಿಯ ರಹಸ್ಯ ಬಯಲು; ಕಬೋರ್ಡ್​ ತೆರೆದು ನೋಡಿದ ಗಂಡ ಶಾಕ್
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jun 28, 2024 | 4:09 PM

Share

ಪ್ರಯಾಗ್​ರಾಜ್: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಅಲಹಾಬಾದ್​ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್​ ಆಗಿದ್ದ ಹಿಂದೂ ವ್ಯಕ್ತಿಯೊಬ್ಬರು ತನ್ನ ಹೆಂಡತಿ ಪ್ರತಿಭಾ ತಿವಾರಿ ಜೊತೆ 13 ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ಇವರಿಗೆ ಮಕ್ಕಳು ಕೂಡ ಇದ್ದಾರೆ. ಆದರೆ, 13 ವರ್ಷಗಳ ನಂತರ ಅವರಿಗೆ ತನ್ನ ಹೆಂಡತಿಯ ಅಸಲಿ ಮುಖ ಗೊತ್ತಾಗಿ ಶಾಕ್​ಗೆ ಒಳಗಾಗಿದ್ದಾರೆ. ಪ್ರೊಫೆಸರ್​​ನ ಪತ್ನಿ ಪ್ರತಿಭಾ ತಿವಾರಿ ಸುಮಾರು 17 ವರ್ಷಗಳ ಹಿಂದೆಯೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಮತ್ತೊಬ್ಬನೊಂದಿಗೆ ನಿಕಾಹ್ ಮಾಡಿಕೊಂಡಿದ್ದಾಳೆ. ತನ್ನ ಹೆಸರನ್ನು ಮೆಹನಾಜ್ ಹಸನ್ ಎಂದು ಬದಲಾಯಿಸಿಕೊಂಡು ಮಹ್ರೂಫ್ ಹಸನ್ ಎಂಬ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ.

ಮೇ 13ರಂದು ಪ್ರೊಫೆಸರ್ ಅವರು ನಿಕಾಹ್ನಾಮಾ ಮತ್ತು ಅಫಿಡವಿಟ್ ಅನ್ನು ಪಕ್ಕದ ಟೇಬಲ್‌ನಲ್ಲಿ ಇರಿಸಿದಾಗ ಅನಿರೀಕ್ಷಿತವಾಗಿ ಈ ವಿಷಯ ಬಹಿರಂಗಗೊಂಡಿತು. ಪ್ರತಿಭಾ ಅವರು ಹೆಸರು ಮತ್ತು ಧರ್ಮವನ್ನು ಬದಲಾಯಿಸಲು ಏಪ್ರಿಲ್ 23, 2007ರಂದು ಮಹಾರಾಷ್ಟ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ದಾಖಲೆಗಳು ಬಹಿರಂಗಪಡಿಸಿದವು.

ದಾಖಲೆಗಳ ಪ್ರಕಾರ, ಮೇ 26, 2007ರಂದು ಮುಂಬೈನ ಭೆಂಡಿ ಬಜಾರ್‌ನಲ್ಲಿರುವ ವಜೀರ್ ಭವನದಲ್ಲಿ ಕ್ವಾಜಿ ಫರೀದ್ ಅಹ್ಮದ್ ಖಾನ್ ಅವರ ಸಮ್ಮುಖದಲ್ಲಿ ಪ್ರತಿಭಾ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಅಲ್ಲದೆ ಮೆಹನಾಜ್ ಹಸನ್ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾಳೆ. ಜೂನ್ 22, 2007ರಂದು ಮಹ್ರೂಫ್ ಹಸನ್ ಅವರೊಂದಿಗೆ ವಿವಾಹ ಕೂಡ ಆಗಿದ್ದಾಳೆ. ವಿಚಿತ್ರವೆಂದರೆ, ಆಕೆಯ ಪೋಷಕರಾದ ರಾಧೇಶ್ಯಾಮ್ ಮತ್ತು ಊರ್ಮಿಳಾ ತಿವಾರಿಗೆ ಕೂಡ ಈ ಘಟನೆಗಳ ಬಗ್ಗೆ ತಿಳಿದಿತ್ತು. ಆದರೆ, ಅವರು ತಮ್ಮ ಅಳಿಯ ಹಾಗೂ ಅವರ ಕುಟುಂದವರಿಗೆ ಈ ವಿಷಯ ಹೇಳಿರಲಿಲ್ಲ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ನಡೆಸಿ 13 ವರ್ಷದ ಬಾಲಕಿಯ ಕೊಲೆ; ಹರಿದ್ವಾರ ಹೆದ್ದಾರಿಯಲ್ಲಿ ಶವ ಪತ್ತೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಆ ಪ್ರೊಫೆಸರ್ ಜೂನ್ 27, 2011ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಪ್ರತಿಭಾ ಅವರನ್ನು ವಿವಾಹವಾಗಿದ್ದರು. ಅಸ್ಸಾಂನ ಗುವಾಹಟಿ ಮೂಲದ ಪ್ರತಿಭಾ ಮದುವೆಯಾದ ನಂತರ ತನ್ನ ಗಂಡನ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಇತರ ಅಪರಾಧಗಳನ್ನು ಹೊರಿಸಿ ನಿಂದಿಸುತ್ತಿದ್ದರು. ಆದರೆ, ಪ್ರೊಫೆಸರ್ ಇದನ್ನೆಲ್ಲ ಸಹಿಸಿಕೊಂಡು ಇಷ್ಟು ವರ್ಷ ಸುಮ್ಮನಿದ್ದರು.

ಇದೀಗ ಪ್ರಯಾಗ್‌ರಾಜ್‌ನಲ್ಲಿರುವ ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ತಮ್ಮ ಪತ್ನಿಯ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. 13 ವರ್ಷಗಳ ಹಿಂದೆ ಪತ್ನಿ ತನಗೆ ಸುಳ್ಳು ಹೇಳಿ ಮದುವೆಯಾಗಿದ್ದಳು ಎಂದು ಹೇಳಿದ್ದಾರೆ. ಆಕೆಗೆ ಆಗಲೇ ಮದುವೆಯಾಗಿತ್ತು. ಇಷ್ಟು ವರ್ಷ ಆಕೆ ಹಾಗೂ ಆಕೆಯ ಮನೆಯವರು ಈ ವಿಷಯ ಮುಚ್ಚಿಟ್ಟಿದ್ದಾರೆ. ನನಗೆ ಆಕೆಯಿಂದ ವಿಚ್ಛೇದನ ಬೇಕೆಂದು ದೂರು ನೀಡಿದ್ದಾರೆ.

ನನ್ನ ಹೆಂಡತಿ ತನ್ನ ಮೊದಲ ಪತಿಗಾಗಿ ತನ್ನ ಧರ್ಮವನ್ನು ಸಹ ಪರಿವರ್ತಿಸಿಕೊಂಡಿದ್ದಾಳೆ. ಹೀಗಿದ್ದರೂ 13 ವರ್ಷಗಳ ಹಿಂದೆ ಸುಳ್ಳು ಹೇಳಿ ನನ್ನನ್ನು ಎರಡನೇ ಮದುವೆಯಾಗಿದ್ದಳು. ಮನೆಯಲ್ಲಿ ಗಲಾಟೆ ಸೃಷ್ಟಿಸುವ ಮೂಲಕ ಪತ್ನಿ ನನ್ನನ್ನು ನನ್ನ ತಾಯಿಯಿಂದ ಬೇರ್ಪಡಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಕೇವಲ ನನ್ನ ಪತ್ನಿಯಲ್ಲದೆ, ಅತ್ತಿಗೆ ಮತ್ತು ಅತ್ತೆ ಕೂಡ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಾಧ್ಯಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆಯಾದ 13 ವರ್ಷಗಳ ನಂತರ, ಅವರು ತಮ್ಮ ಪತ್ನಿ ಮತ್ತು ಅತ್ತೆಯ ವಿರುದ್ಧ ವಂಚನೆ ಮತ್ತು ಕಿರುಕುಳಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಲಿಂಗ ವಿವಾಹ; ಮೇಕಪ್ ಮಾಡಲು ಬಂದ ಯುವತಿಯನ್ನೇ ಪ್ರೀತಿಸಿ ಮದುವೆಯಾದ ನಟಿ

ಆಕೆ ಮತ್ತು ನನ್ನ ಮದುವೆಯ ವಿಚಾರದಲ್ಲಿ ಆಕೆಯ ಕುಟುಂಬಸ್ಥರೂ ಶಾಮೀಲಾಗಿದ್ದಾರೆ ಎಂಬ ಆರೋಪ ಪ್ರೊಫೆಸರ್​ನದ್ದು. ಆಕೆಯ ಮೊದಲ ಮದುವೆಯ ಸಂಗತಿಯನ್ನು ಮರೆಮಾಚಿ ಅವರೆಲ್ಲರೂ ವಿವಾಹಮಾಡಿಕೊಟ್ಟಿದ್ದಾರೆ. ಮದುವೆಯಾದಂದಿನಿಂದ ನನ್ನ ಮತ್ತು ಪತ್ನಿಯ ಬಾಂಧವ್ಯ ಚೆನ್ನಾಗಿರಲಿಲ್ಲ. ನನ್ನ ತಾಯಿಯ ಜೊತೆ ನನ್ನ ಹೆಂಡತಿ ಸದಾ ಜಗಳವಾಡುತ್ತಿದ್ದಳು. ಇದರಿಂದ ಅಮ್ಮನಿಂದ ದೂರವಾಗಿ ನಾನು ಜೀವಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ವಿಷಯ ಬಯಲಾಗಿದ್ದು ಹೇಗೆ?:

ಒಂದು ತಿಂಗಳ ಹಿಂದೆ ಪತ್ನಿಯ ಕಪಾಟಿನಲ್ಲಿ ಸಿಕ್ಕ ಕೆಲವು ದಾಖಲೆಗಳಿಂದ ಪ್ರೊಫೆಸರ್​​ಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ ಈ ಬಗ್ಗೆ ಮಾತನಾಡಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸತ್ತ ಪ್ರಾಧ್ಯಾಪಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!