ವೃದ್ಧ ದಂಪತಿ ಕೊಲೆ ಪ್ರಕರಣದ ರಹಸ್ಯ ಬಯಲು, 12 ವರ್ಷದ ಚಿಂದಿ ಆಯುವ ಬಾಲಕನ ಕೃತ್ಯಕ್ಕೆ ಪೊಲೀಸರೇ ಶಾಕ್

ಉತ್ತರಪ್ರದೇಶದಲ್ಲಿ ನಡೆದಿದ್ದ ವೃದ್ಧ ದಂಪತಿಯ ಕೊಲೆ ಹಿಂದಿನ ರಹಸ್ಯ ಬಯಲಾಗಿದ್ದು, ಪ್ರಕರಣ ಹಿಂದಿನ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ ಎಂದು ತನಿಖೆ ವೇಳೆ ತಿಳಿದುಬಂದಿದೆ. ಬಾಲಕ ಕೃತ್ಯದಿಂದ ಪೊಲೀಸರೇ ಶಾಕ್ ಆಗಿದ್ದಾರೆ.

ವೃದ್ಧ ದಂಪತಿ ಕೊಲೆ ಪ್ರಕರಣದ ರಹಸ್ಯ ಬಯಲು, 12 ವರ್ಷದ ಚಿಂದಿ ಆಯುವ ಬಾಲಕನ ಕೃತ್ಯಕ್ಕೆ ಪೊಲೀಸರೇ ಶಾಕ್
ಸಾಂದರ್ಭಿಕ ಚಿತ್ರ
Edited By:

Updated on: Dec 25, 2022 | 10:09 PM

ಗಾಜಿಯಾಬಾದ್‌: ಉತ್ತರಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ(Ghaziabad) ನವೆಂಬರ್ 22 ರಂದು ನಡೆದಿದ್ದ ವೃದ್ಧ ದಂಪತಿಯ ಕೊಲೆ ಪ್ರಕಣದ ತನಿಖೆ ವೇಳೆ ಸಿಕ್ಕ ಸತ್ಯಾಂಶದಿಂದ ಪೊಲೀಸರೇ ದಂಗಾಗಿದ್ದಾರೆ. ವೃದ್ಧ ದಂಪತಿಯ ಕೊಲೆ (Elderly couple Murder) ಹಿಂದಿನ ಮಾಸ್ಟರ್ ಮೈಂಡ್​ 12 ವರ್ಷದ ಬಾಲಕ. ಈ ಕೃತ್ಯದ ಹಿಂದೆ ಇದ್ದ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ವೃದ್ಧ ದಂಪತಿಯ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಹೊಳೆನರಸೀಪುರ: ಮಹಿಳೆಯನ್ನು ಬರ್ಬರ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ನವೆಂಬರ್ 22 ರಂದು 60 ವರ್ಷದ ವೃದ್ಧ ಇಬ್ರಾಹಿಂ ಹಾಗೂ ಅವರ ಪತ್ನಿ 55 ವರ್ಷದ ಹಜ್ರಾ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಇಬ್ಬರ ಕುತ್ತಿಗೆಯನ್ನು ಬಟ್ಟೆಯಲ್ಲಿ ಹಿಸುಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು ವೃದ್ಧರಿಗೆ ಪರಿಚಯವಿರುವ ವ್ಯಕ್ತಿಗಳು ಮನೆಗೆ ಬಂದು ಹೋಗುವವರ ವಿಚಾರಣೆ ನಡೆಸಿದ್ದರು. ಈ ವೇಳೆ ಇವರನ್ನು ಹತ್ಯೆ ಮಾಡಿದ್ದು 12 ವರ್ಷದ ಬಾಲಕ ಎಂಬುದು ಬೆಳಕಿಗೆ ಬಂದಿದ್ದು, ಆತನೊಂದಿಗೆ ಆತನ ಈ ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಬಾಲಕ ಕೊಲೆಯ ಬಳಿಕ ತಲೆಮರೆಸಿಕೊಂಡಿದ್ದ, ಈ ಹಿನ್ನೆಲೆಯಲ್ಲಿ ಅನುಮಾನದಿಂದ ಆತನ ಹಿಂದೆ ಬಿದ್ದ ಪೊಲೀಸರು ಆತನೊಂದಿಗೆ ಇನ್ನಿಬ್ಬರನ್ನು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ

ಈತ ಈ ವೃದ್ಧ ದಂಪತಿ ಬಳಿ ಬೇಕಾದಷ್ಟು ಹಣವಿದೆ ಎಂದು ಭಾವಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಚರ್ಚಿಸಿ  ಮನೆ ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ ನಂತರ ನವೆಂಬರ್ 22ರಂದು ಮಧ್ಯರಾತ್ರಿ ತನ್ನ ಸಹಚರರ ಜೊತೆ ವೃದ್ಧರು ವಾಸವಿದ್ದ ಮನೆಗೆ ನುಗ್ಗಿ ಇಬ್ಬರನ್ನು ಉಸಿರುಗಟ್ಟಿಸಿ ಕೊಂದಿದ್ದರು.

ಬಳಿಕ ಮನೆಯಲ್ಲಿದ್ದ 54 ಸಾವಿರ ರೂ. ಹಣ, ಬೆಳ್ಳಿ ಸರ, ಮೊಬೈಲ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಮಾಡಿ ಪರಾರಿಯಾಗಿದ್ದರು. ಬೆಳಗ್ಗೆ ಮಗಳು ರಿಹಾನಾ ಎದ್ದ ನೋಡಿದಾಗ ತಮ್ಮ ತಂದೆ ತಾಯಿ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು, ಬಾಲಕ ಹಾಗೂ ಆತನ ಜೊತೆಗಾರರಾದ ಶಿವಂ, ಮುಕೇಶ್ ಎಂಬುವವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಪ್ರಕರಣದ ಮಾಸ್ಟರ್ ಮೈಂಡ್​ ಆಗಿರುವ A1 ಆರೋಪಿ 12 ವರ್ಷದ ಬಾಲಕ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:05 pm, Sun, 25 December 22