ಕಂಬಿ ಕದಿಯಲು ಹೋಗಿದ್ದ ಕಳ್ಳನ ಸಾವಿಗೆ ಟ್ವಿಸ್ಟ್, ಆರೋಪಿಗಳು ಅರೆಸ್ಟ್
ಬೆಂಗಳೂರು: ಶ್ರೀರಾಂಪುರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮೇ 31ರಂದು ಜಗನ್(23) ಎಂಬಾತನ ಅನುಮಾನಾಸ್ಪದ ಸಾವು ಸಂಭವಿಸಿತ್ತು. ನಂತರ ತನಿಖೆ ವೇಳೆ ಜಗನ್ ಕೊಲೆಯಾಗಿರುವ ವಿಷಯ ಬಯಲಾಗಿದೆ. ಕದಿಯಲು ಬಂದಿದ್ದ ಕಳ್ಳನನ್ನು ಕೊಲೆ ಮಾಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜಗನ್, ಶ್ರೀರಾಮಪುರದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ಸಾಕಷ್ಟು ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಬಳಿಕವೂ ಅದೇ ಮಾದರಿಯ ಕೃತ್ಯ ಎಸಗಲು ಹೋಗಿದ್ದ. ಮೇ 31ರಂದು ರಾತ್ರಿ […]
ಬೆಂಗಳೂರು: ಶ್ರೀರಾಂಪುರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮೇ 31ರಂದು ಜಗನ್(23) ಎಂಬಾತನ ಅನುಮಾನಾಸ್ಪದ ಸಾವು ಸಂಭವಿಸಿತ್ತು. ನಂತರ ತನಿಖೆ ವೇಳೆ ಜಗನ್ ಕೊಲೆಯಾಗಿರುವ ವಿಷಯ ಬಯಲಾಗಿದೆ. ಕದಿಯಲು ಬಂದಿದ್ದ ಕಳ್ಳನನ್ನು ಕೊಲೆ ಮಾಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜಗನ್, ಶ್ರೀರಾಮಪುರದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ಸಾಕಷ್ಟು ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಬಳಿಕವೂ ಅದೇ ಮಾದರಿಯ ಕೃತ್ಯ ಎಸಗಲು ಹೋಗಿದ್ದ.
ಮೇ 31ರಂದು ರಾತ್ರಿ ಖಾಸಗಿ ಅಪಾರ್ಟ್ಮೆಂಟ್ನ ಕಂಬಿ ಕದಿಯಲು ಜಗನ್ ಹೋಗಿದ್ದ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕೈಗೆ ಸಿಕ್ಕಿ ಜಗನ್ ಸಿಕ್ಕಿಬಿದ್ದಿದ್ದ. ಆಗ ಬನಬಂದಂತೆ ಥಳಿಸಿ ಸೆಕ್ಯೂರಿಟಿ ಗಾರ್ಡ್ಗಳು ಹೊರತಳ್ಳಿದ್ದರು. ನಂತರ ಮನೆಗೆ ತೆರಳುವಾಗ ಮನೆಯ ಮುಂದೆ ಮೋರಿಗೆ ಬಿದ್ದು ಮೃತಪಟ್ಟಿದ್ದಾನೆ.
ತನಿಖೆ ವೇಳೆ ಅಸಹಜ ಸಾವಲ್ಲ ಕೊಲೆ ಎಂಬುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ ಪಶ್ಚಿಮ ಬಂಗಾಳ ಮೂಲದ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Published On - 11:53 am, Fri, 5 June 20