ಹಾಡಹಗಲೇ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ ಪ್ರಕರಣ: 7 ಆರೋಪಿಗಳ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2023 | 9:12 PM

ಹವಾ ಮೆಂಟೇನ್ ಮಾಡಲು ಹಾಡಹಗಲೇ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಂದ 7 ಆರೋಪಿಗಳನ್ನು ಬಂಧಿಸಲಾಗಿದೆ.

ಹಾಡಹಗಲೇ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ ಪ್ರಕರಣ: 7 ಆರೋಪಿಗಳ ಬಂಧನ
ವಿದ್ಯಾರ್ಥಿ ಮೇಲೆ ಲಾಂಗ್ ನಿಂದ ಹಲ್ಲೆ
Follow us on

ಬೆಂಗಳೂರು: ಹಾಡಹಗಲೇ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಂದ 7 ಆರೋಪಿಗಳನ್ನು ಬಂಧಿಸಲಾಗಿದೆ (arrested) . ಸತ್ಯ, ಜೀವನ್, ಅಭಿಷೇಕ್, ರವಿಕುಮಾರ್, ಚಂದನ, ಗೌತಮ್ ಗೌಡ, ಸೂರ್ಯ ಬಂಧಿತ ಆರೋಪಿಗಳು. ಹವಾ ಮೆಂಟೇನ್ ಮಾಡಲು ಆರೋಪಿಗಳು ಕೃತ್ಯ ಎಸಗಿದ್ದಾರೆ. ಅನ್ನಪೂರ್ಣೆಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಬಾವಿಯ ಖಾಸಗಿ ಕಾಲೇಜುನ ವಿದ್ಯಾರ್ಥಿ ದರ್ಶನ್ ಮೇಲೆ ಹಲ್ಲೆ ಮಾಡಲಾಗಿತ್ತು.

21 ವರ್ಷ ದರ್ಶನ್ ಬಿಬಿಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಜೂನ್ 5 ರಂದು ಕಾಲೇಜಿನ ಮುಂದೆ ಸ್ನೇಹಿತರೊಂದಿಗೆ ದರ್ಶನ್ ನಿಂತಿದ್ದ. ಬೈಕ್​ನಲ್ಲಿ ಬಂದಿದ್ದ ಯುವಕರು ದರ್ಶನ್ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಿದ್ದಾರೆ. ಘಟನೆ ದೃಶ್ಯಾವಳಿ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿತ್ತು.

ಕೂದಲೆಳೆ ಅಂತರದಲ್ಲಿ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದ. ಏರಿಯಾದ ಸಿಸಿ ಕ್ಯಾಮಾರ ಆಧರಿಸಿ ಆರೋಪಿಗಳಿಗೆ ಶೋಧ ನಡೆಸಿದ್ದ ಪೊಲೀಸರು ಸದ್ಯ 7 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕೋಲಾರ: ಪ್ರೀತಿಸಿದ ಮಗಳ ಮರ್ಯಾದ ಹತ್ಯೆ; ಯುವತಿ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ಪ್ರಿಯಕರ

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಜೆಡಿಎಸ್ ಘಟಕದ ಅಧ್ಯಕ್ಷ ಪುತ್ರ ಸೇರಿದಂತೆ ಮೂವರಿಗೆ ಗಾಯ 

ಹಾಸನ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಶಿವಯೋಗಿಪುರ ಗ್ರಾಮದ ಬಳಿ ನಡೆದಿದೆ. ಚಿಕ್ಕಮಗಳೂರು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಪುತ್ರ ವಿಶಾಲ್‌ ಸುಜಯ್‌ ಕುಮಾರ್‌, ಮದನ್‌‌, ಮೋಹನ್, ಅನಿರುದ್ದಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಬೇಲೂರಿನ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಬೆನ್ನಟ್ಟಿ ಮೂವರು ಗಾಂಜಾ ಪೆಡ್ಲರ್ಸ್​​ ಸೆರೆ

ನೆಲಮಂಗಲ: 2 ಕಿ.ಮೀ. ದೂರ ವಾಹನ ಬೆನ್ನಟ್ಟಿ ಮೂವರು ಗಾಂಜಾ ಪೆಡ್ಲರ್ಸ್​ನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸೆಟ್ಲರ್ ಅಕ್ತರ್, ಮದನ್ ಕುಮಾರ್, ಸೈಯದ್ ಫಯಾಜ್​ ಬಂಧಿತರು. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದರು. ಮಧ್ಯಪ್ರದೇಶ, ಮಹಾರಾಷ್ಟ್ರದ ಬೂಸಾಲ್‌ನಿಂದ ಗಾಂಜಾ ತರುತ್ತಿದ್ದರು.

ಇದನ್ನೂ ಓದಿ: Hassan News: ಗುಂಡಿಕ್ಕಿ ಜಾನುವಾರು ಹತ್ಯೆ, ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಅರೆಸ್ಟ್​

ಖಚಿತ ಮಾಹಿತಿ ಮೇರೆಗೆ ವಾಹನ ಅಡ್ಡಗಟ್ಟಿದ್ದ ಪೊಲೀಸರು, ಈ ವೇಳೆ ವಾಹನದ ಸಮೇತ ಪರಾರಿಯಾಗಲು ಯತ್ನಿಸಿದ್ದಾರೆ. 20 ಕೆಜಿ ಗಾಂಜಾ, 1 ಚಾಕು, ಬ್ಯಾಟ್, ಕ್ವಾಲಿಸ್ ಕಾರು ಜಪ್ತಿ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.