ಕೊಡಗಿನ ಹತಾಶೆ ಪ್ರೀತಿಗೆ ಎರಡು ಬಲಿ: ಯುವತಿ ಬರ್ಬರ ಕೊಲೆ; ಹಂತಕನ ಶವ ಕೆರೆಯಲ್ಲಿ ಪತ್ತೆ

ಕೊಡಗು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಯುವತಿ ಆರತಿಯ ಕೊಲೆ ಪ್ರಕರಣದ ಆರೋಪಿ ತಿಮ್ಮಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ಜೀವಗಳ ಸಾವಿಗೆ ಹತಾಶೆ, ನಿರಾಸೆ ಜೊತೆಗೆ ಅಸಹಾಯಕತೆ ಕಾರಣವಾಯಿತಾ.

ಕೊಡಗಿನ ಹತಾಶೆ ಪ್ರೀತಿಗೆ ಎರಡು ಬಲಿ: ಯುವತಿ ಬರ್ಬರ ಕೊಲೆ; ಹಂತಕನ ಶವ ಕೆರೆಯಲ್ಲಿ ಪತ್ತೆ
ಕೊಲೆಯಾದ ಆರತಿ, ಮೃತ ಆರೋಪಿ ತಿಮ್ಮಯ್ಯ
Follow us
| Updated By: ವಿವೇಕ ಬಿರಾದಾರ

Updated on: Jan 18, 2023 | 12:26 PM

ಮಡಿಕೇರಿ: ಕೊಡಗು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಯುವತಿ ಆರತಿಯ ಕೊಲೆ ಪ್ರಕರಣದ ಆರೋಪಿ ತಿಮ್ಮಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಹತಾಶ ಪ್ರೀತಿ ಎರಡು ಜೀವವನ್ನ ಬಲಿಪಡೆದಂತಾಗಿದೆ. ಹೌದು ಇದೇ ಭಾನುವಾರ ಅಂದರೆ ಜನವರಿ 16ರಂದು ಸಂಜೆ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಲ ಗ್ರಾಮದಲ್ಲಿ ಸಂಜೆ 7.30ರ ಸುಮಾರಿಗೆ ಯುವತಿಯೋರ್ವಳ ಬರ್ಬರ ಕೊಲೆಯಾಗಿತ್ತು. ಬುಟ್ಟಿಯಂಡ ಮಾದಪ್ಪ ಅವರ ಪುತ್ರಿ 23 ವರ್ಷದ ಆರತಿ ಆಕೆಯ ಮನೆಯ ಸಮೀಪದ ರಸ್ತೆಯಲ್ಲೇ ಭೀಕರವಾಗಿ ಕೊಲೆಯಾಗಿದ್ದಾಳೆ. ಹಂತಕ ಮಚ್ಚಿನಿಂದ ಆರತಿಯನ್ನ ಹಲವು ಬಾರಿ ಕೊಚ್ಚಿ ಕೊಲೆ ಮಾಡಿದ್ದನು.

ಆರತಿ ಕಳೆದವರ್ಷವಷ್ಟೇ ವಿರಾಜಪೇಟೆಯಲ್ಲಿ ಡಿಗ್ರಿ ಮುಗಿಸಿದ್ದಳು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕಾಗಿ ಇಂಟರ್ವ್ಯೂ ಕೊಟ್ಟು ಬಂದಿದ್ದಳು. ಎಲ್ಲವೂ ಸರಿಯಾಗಿದ್ದಿದ್ದಲ್ಲಿ ಆರತಿ ಇಂದು ತನ್ನ ಮೊದಲ ದಿನದ ಉದ್ಯೋಗದ ಖುಷಿಯನ್ನ ಅನುಭವಿಸಬೇಕಾಗಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ಆಕೆಯ ಬದುಕನ್ನೇ ಮುಗಿಸಿದ್ದು ಆ ಒಂದು ಫೋನ್ ಕರೆ. ಭಾನುವಾರ ಸಂಜೆ ಸುಮಾರು 7.30ರ ಸಮಯ. ಆರತಿ ಮೊಬೈಲ್ ರಿಂಗ್ ಆಗುತ್ತದೆ. ಫೋನ್ ರಿಸೀವ್ ಮಾಡಿ ಮಾತನಾಡುತ್ತಾಳೆ. ಬಳಿಕ ಅಪ್ಪನ ಜೊತೆ, ತಿಮ್ಮಯ್ಯ ಫೋನ್ ಮಾಡಿದ್ದಾನೆ, ಇಲ್ಲೇ ರೋಡ್​ವರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ ಅಷ್ಟೇ. ಮತ್ತೆ ಜೀವಂತವಾಗಿ ಬರಲೇ ಇಲ್ಲ. ಹೊರಗೆ ಹೋದ ಮಗಳು ಬಹಳ ಹೊತ್ತಾದರೂ ಬರಲೇ ಇಲ್ಲ ಅಂತ ಅಪ್ಪ ಮಾದಪ್ಪ ಹುಡುತ್ತಾ ರಸ್ತೆಗೆ ಬಂದಿದ್ದಾರೆ. ಆದರೆ ಅಲ್ಲಿ ಕಂಡಿದ್ದು ಭೀಬತ್ಸ್ಯ ದೃಶ್ಯ. ಆರತಿ ರಕ್ತ ಮಡುವಿನಲ್ಲಿ ಸತ್ತು ಬಿದ್ದಿದ್ದಳು. ಮುಖ, ಕುತ್ತಿಗೆ, ಭುಜ, ಕೈ ಎಲ್ಲವೂ ಕತ್ತರಿಸಿ ಹೋಗಿತ್ತು.

ಆರತಿಯನ್ನ ಮನಸೋ ಇಚ್ಚೆ ಕೊಚ್ಚಿದ ಆ ಹಂತಕ ಬೇರಾರು ಅಲ್ಲ. ನಾಂಗಾಲ ಗ್ರಾಮದಿಂದ ಕೇವಲ 4 ಕೀಮಿ ದೂರದ ಕಂಡಂಗಾಲ ಗ್ರಾಮದ ಯುವಕ ತಿಮ್ಮಯ್ಯ. ಇವರಿಬ್ಬರಿಗೂ ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ. ಇಬ್ಬರು ಕಾರು, ಬೈಕಿನಲ್ಲಿ ಒಟ್ಟೊಟ್ಟಿಗೆ ಉರೂರು ಸುತ್ತಿದ್ದಾರೆ ಎಂದು ತಿಮ್ಮಯ್ಯನ ಅಕ್ಕ ಕಾವೇರಮ್ಮ ಹೇಳಿದ್ದಾರೆ.

ತಿಮ್ಮಯ್ಯ ಇತ್ತೀಚೆಗೆ ಆರತಿಗೆ ವಿವಾಹದ ಪ್ರಸ್ತಾಪವನ್ನೂ ಇಟ್ಟಿದ್ದನಂತೆ. ಆದರೆ ಆರತಿ ಮಾತ್ರ ಈತನನ್ನು ಸ್ವಷ್ಟವಾಗಿ ನಿರಾಕರಣೆ ಮಾಡಿದ್ದಳು. ಆದರೂ ಆಕೆಯನ್ನು ಒಲಿಸಿಕೊಳ್ಳಲು ಈತ ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದ. ಈ ಸೋಲೇ ಆತನನ್ನ ಹತಾಶ ಸ್ಥಿತಿಗೆ ನೂಕಿ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಆರತಿ ತಿಮ್ಮಯ್ಯನನ್ನ ನಿರಾಕರಣೆ ಮಾಡಿದ್ದೂ ಅಲ್ಲದೆ, ತನ್ನದೇ ಆದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಹೊರಟು ನಿಂತಿದ್ದಳು. ಇವಳು ಬೆಂಗಳೂರು ಬಸ್ ಹತ್ತಿದರೆ ಇನ್ನು ತನಗೆ ಸಿಗಲ್ಲ ಎಂಬ ಹತಾಶೆ, ನಿರಾಸೆ ಜೊತೆಗೆ ಏನೂ ಮಾಡಲಾಗದ ಅಸಹಾಯಕತೆ ಈತನನ್ನು ಹುಚ್ಚನನ್ನಾಗಿಸಿತ್ತು. ಇಂತಹ ಪರಿಸ್ಥಿತಿಯಲ್ಲೇ ಆತ ಭಯಾನಕ ನಿರ್ಧಾರ ಕೈಗೊಂಡುಬಿಡುತ್ತಾನೆ.

ಆರತಿಗೆ ಫೋನ್ ಮಾಡಿದ ಆತ ಆರತಿಯನ್ನು ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾನೆ. ಆರತಿ ಬಂದ ನಂತರ ಅದೇನು ಮಾತನಾಡಿದನೊ ಏನು ಮೊದಲೆ ಸಂಚು ರೂಪಿಸಿಕೊಂಡು ಬಂದಂತೆ ಕತ್ತಿಯಿಂದ ಆಕೆಯನ್ನು ಬರ್ಬರವಗಿ ಕೊಲೆ ಮಾಡಿದ್ದಾನೆ. ಕೃತ್ಯವೆಸಗಿದ ತಿಮ್ಮಯ್ಯ ಸೀದಾ ಬೈಕ್ ಹತ್ತಿ ಕಂಡಂಗಾಲ ಗ್ರಾಮದ ತನ್ನ ಮನೆಗೆ ಬಂದಿದ್ದಾನೆ. ಮನೆಯ ಬಳಿ ಬೈಕ್ ನಿಲ್ಲಿಸಿ ಮನೆಯೊಳಗೆ ಹೋಗಿ ಮದ್ಯದ ಬಾಟಲಿ ತೆಗೆದುಕೊಂಡು ಸೀದಾ ಕೆರೆಯತ್ತ ಹೆಜ್ಜೆ ಹಾಕಿದ್ದಾನೆ.

ಯಾವತ್ತೂ ಕುಡಿಯದ ಮಗ ಇವತ್ತೇಕೆ ಕುಡಿಯಲು ಹೊರಟ ಅಂತ ತಿಮ್ಮಯ್ಯನ ಅಪ್ಪ-ಅಮ್ಮ ಯೋಚಿಸಿದ್ದಾರೆ. ಆದರೆ ಅದನ್ನು ಕೇಳುವ ಗೋಜಿಗೆ ಹೋಗಲಿಲ್ಲ. ತಿಮ್ಮಯ್ಯ ಈ ಹಿಂದೆ ಬೆಂಗಳೂರಿನಲ್ಲಿದ್ದಾಗ 2011ರಲ್ಲಿ ಆಭರಣ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಹಾಕಿಂಡಿದ್ದ. ಅಲ್ಲದೆ ಆತನ ಕ್ಯಾರೆಕ್ಟರ್ ಕೂಡ ಅಷ್ಟಕಷ್ಟೆ. ಹೀಗಾಗಿ ತಿಮ್ಮಯ್ಯ ಪೋಷಕರ ಜೊತೆ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಆ ದಿನ ತಿಮ್ಮಯ್ಯ ಬಂದು ಹೋಗುವವರೆಗೂ ಆತನ ಪೋಷಕರಿಗೆ ಏನು ಘಟನೆ ನಡೆದಿದೆ ಎಂಬ ಅರಿವು ಕೂಡ ಇರಲ್ಲ. ಇದಾಗಿ ಸ್ವಲ್ಪವೇ ಹೊತ್ತಿನಲ್ಲಿ ಪೊಲಿಸ್ ಜೀಪ್ ಇವರ ಮನೆಗೆ ಆಗಮಿಸುತ್ತದೆ. ಅವರು ಹೇಳಿದ ಘಟನೆ ಕೇಳಿ ತಿಮ್ಮಯ್ಯನ ಪೋಷಕರು ಗಾಬರಿಯಾಗುತ್ತಾರೆ.

ಆರೋಪಿ ತಿಮ್ಮಯ್ಯನ ಸಾವು

ನಂತರ ಎಲ್ಲರೂ ಸೇರಿ ತಿಮ್ಮಯ್ಯನ ಹುಡುಕಿಕೊಂಡು ತೋಟ, ಗದ್ದೆ ಕೆರೆಯತ್ತ ತೆರಳುತ್ತಾರೆ. ಹೀಗೆ ಹೋದಾಗ ಮನೆಯ ಪಕ್ಕದ ಕೆರೆಯ ಬಳಿ ತಿಮ್ಮಯ್ಯನ ಚಪ್ಪಲಿ ಕಾಣಿಸುತ್ತದೆ. ಜೊತೆಗೆ ಪಕ್ಕದಲ್ಲೇ ಮದ್ಯದ ಬಾಟಲಿ ಹಾಗೂ ಕ್ರಿಮಿನಾಶಕ ಡಬ್ಬಿಯೂ ಪತ್ತೆಯಾಗುತ್ತದೆ. ಅಲ್ಲಿಗೆ, ಈತ ಕೊಲೆ ಮಾಡಿ ಬಂದು ಇಲ್ಲಿ ವಿಷ ಕುಡಿದು ಕೆರೆಗೆ ಹಾರಿದ್ದಾನೆ ಎಂದು ಎಲ್ಲರೂ ನಂಬುತ್ತಾರೆ. ಹೀಗಾಗಿ ಮರದಿನ ದಿನವಿಡೀ ಅಗ್ನಿಶಾಮಕ ದಳ, ಪೊಲಿಸರು ಮತ್ತು ಸ್ಥಳೀರು ಮುಳುಗುತಜ್ಞರ ನೆರವಿನಿಂದ ಶೋಧ ಕಾರ್ಯ ನಡೆಸುತ್ತಾರೆ. ಆದರೆ 24 ಗಂಟೆ ಕಳೆದರೂ ಕೆರೆಯಲ್ಲಿ ತಿಮ್ಮಯ್ಯನ ಸುಳಿವು ಸಿಗುವುದಿಲ್ಲ.

ಮಂಗಳವಾರ ಸಂಜೆಯವರೆಗೂ ಆತನ ದೇಹವೂ ಸಿಗುವುದಿಲ್ಲ, ಅತ್ತ ನೀರನಲ್ಲಿ ಆತನ ಶವವೂ ತೇಲುವುದಿಲ್ಲ. ಹಾಗಾಗಿ ತಿಮ್ಮಯ್ಯ ಇಲ್ಲಿ ಮಾಡಿರುವುದೆಲ್ಲವೂ ನಾಟಕ. ಕೆರೆಗೆ ಹಾರಿದಂತೆ ಸನ್ನಿವೇಶ ಸೃಷ್ಟಿ ಮಾಡಿ ಆತ ಪರಾರಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತದೆ. ಹೀಗಾಗಿ ಪೊಲಿಸರ ಒಂದು ತಂಡ ತನಿಖೆಯ ದಿಕ್ಕು ಬದಲಿಸಿ ಕಾರ್ಯಾಚರಣೆ ಕೈಗೊಳ್ಳುತ್ತದೆ. ಆದರೆ ಮತ್ತೊಂದು ತಂಡ ಕೆರೆಯಲ್ಲೇ ಮತ್ತೆ ಜಾಲಾಡಲು ಶುರುಮಾಡುತ್ತದೆ. ಅಂತೂ ಸತತ ಎರಡು ದಿನಗಳ ಪ್ರಯತ್ನದ ಬಳಿಕ ಇದೀಗ ತಿಮ್ಮಯ್ಯನ ದೇಹ ಕೆರೆಯಲ್ಲಿ ಪತ್ತೆಯಾಗಿದೆ. ಈ ಮೂಲಕ ಇಡೀ ಪ್ರಕರಣದ ಕುತೂಹಲದ ಕೇಂದ್ರಬಿಂದುವಾಗಿದ್ದ ತಿಮ್ಮಯ್ಯನ ಪ್ರಹಸನಕ್ಕೂ ಅಂತ್ಯಬಿದ್ದಿದೆ. ಪ್ರೀತಿ ನಿರಾಕರಣೆ, ಹತಾಶೆ ಮತ್ತು ಅಸಹಾಯಕತೆ ಎಲ್ಲವೂ ಸೇರಿ ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ಅನ್ಯಾಯವಾಗಿ ಕೊನೆಯಾಗಿದ್ದು ಮಾತ್ರ ದುರಂತ.

ಗೋಪಾಲ್ ಸೋಮಯ್ಯ ಟಿವಿ9 ಕೊಡಗು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು