ಮಂಗಳೂರಿನ ಲಾಡ್ಜ್​ನಲ್ಲಿ ಕೇರಳ ಮೂಲದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 08, 2023 | 5:17 PM

ಲಾಡ್ಜ್​ನಲ್ಲಿ ಕೇರಳ ಮೂಲದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಮಂಗಳೂರಿನ ಫಳ್ನೀರು ನ್ಯೂ ಬ್ಲೂಸ್ಟಾರ್ ಲಾಡ್ಜ್​ನಲ್ಲಿ ನಡೆದಿದೆ.

ಮಂಗಳೂರಿನ ಲಾಡ್ಜ್​ನಲ್ಲಿ ಕೇರಳ ಮೂಲದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ
Image Credit source: financialexpress.com
Follow us on

ದಕ್ಷಿಣ ಕನ್ನಡ: ಲಾಡ್ಜ್​ನಲ್ಲಿ ಕೇರಳ ಮೂಲದ ದಂಪತಿ (couple) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಮಂಗಳೂರಿನ ಫಳ್ನೀರು ನ್ಯೂ ಬ್ಲೂಸ್ಟಾರ್ ಲಾಡ್ಜ್​ನಲ್ಲಿ ನಡೆದಿದೆ. ರವೀಂದ್ರ(55), ಸುಧಾ(50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೃತ ದಂಪತಿ ಕೇರಳದ ಕಣ್ಣೂರಿನ ತಳೀಪುರಂ ನಿವಾಸಿಗಳಾಗಿದ್ದು, ಫೆ.6ರಂದು ಲಾಡ್ಜ್​ಗೆ ಬಂದು ರೂಮ್​ ಬುಕ್ ಮಾಡಿದ್ದರು. ಸೋಮವಾರ ರಾತ್ರಿಯೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ದಂಪತಿ ಮೂಲತಃ ಬಟ್ಟೆ ವ್ಯಾಪಾರಿಗಳು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದೇನು?

ಪ್ರಕರಣ ಕುರಿತಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದು, ಇದೇ 6ರಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಲಾಡ್ಜ್​ಗೆ ಬಂದಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಹಿತಿಯಂತೆ ಅವರಿಬ್ಬರು ಗಂಡ ಹೆಂಡತಿ ಅಂತಾ ಗೊತ್ತಾಗಿದೆ. ಐಡೆಂಟಿಟಿ ಫ್ರೂಫ್ ಕೊಟ್ಟು ರೂಂ ಪಡೆದಿದ್ದಾರೆ. ಅದೇ ದಿನ ರಾತ್ರಿ ಕೊನೆಯದಾಗಿ‌ ಅವರು ರೂಂ ಒಳಗೆ ಇದ್ದಿದ್ದನ್ನು ಲಾಡ್ಜ್ ಸಿಬ್ಬಂದಿಗಳು ನೋಡಿದ್ದಾರೆ. ಆದಾದ ಬಳಿಕ‌ ರೂಂನಿಂದ ಹೊರ ಬಂದಿಲ್ಲ. ಇಂದು ಬೆಳಗ್ಗೆ ಮಾತನಾಡಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಬೈಕ್​ ಸವಾರ ಸ್ಥಳದಲ್ಲೇ ಸಾವು: ಮತ್ತಿಬ್ಬರಿಗೆ ಗಾಯ

ಆ ಬಳಿಕ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಚರ ಸಮಕ್ಷಮ ಬಾಗಿಲು ಒಡೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿಸಲಾಗಿದೆ. ಇವರು ಮೂಲತಃ ಕೇರಳ ರಾಜ್ಯದ ಕಣ್ಣೂರು ಭಾಗಕ್ಕೆ ಸೇರಿದವರಾಗಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಬಟ್ಟೆ ವ್ಯಾಪಾರಿಗಳೆಂದು ಗೊತ್ತಾಗಿದೆ. ಕುಟುಂಬ ಸದಸ್ಯರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ ಎಂದು ಹೇಳಿದರು.

ನೀರಿನ ತೊಟ್ಟಿಯಲ್ಲಿ ಬಿದ್ದು 3 ವರ್ಷದ ಹೆಣ್ಣು ಮಗು‌ ಸಾವು

ಬೀದರ್: ನೀರಿನ ತೊಟ್ಟಿಯಲ್ಲಿ ಬಿದ್ದು ಹೆಣ್ಣು ಮಗು‌ ಸಾವನ್ನಪ್ಪಿರುವಂತಹ ಘಟನೆ ಔರಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ನಡೆದಿದೆ. ಸ್ಫೋರ್ತಿ ತಂದೆ ಜೀವನ್ (3) ನೀರಿನ ತೊಟ್ಟಿಯಲ್ಲಿ ಬಿದ್ದು ಸಾವಿಗೀಡಾದ ಬಾಲಕಿ. ಅಂಗನವಾಡಿಗೆ ಹೋಗಿದ್ದಾಗ ಘಟನೆ ನಡೆದಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಂಕ್ರದನ ಮುಗಿಲು‌ ಮುಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಔರಾದ್ ಪಟ್ಟಣದ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಕಾರವಾರ: ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು

ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವು

ತುಮಕೂರು: ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವನ್ನಪ್ಪಿದ್ದು, ಸವಾರನಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಯುವತಿ, ಗಾಯಾಳು ಯುವಕನ ಹೆಸರು ತಿಳಿದುಬಂದಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Wed, 8 February 23