ಮೈಸೂರು: ಕೈಗೆ ಸಿಗದ ಬೆಳೆ, ಏರಿದ ಸಾಲ; ಹುಣಸೂರಿನಲ್ಲಿ ರೈತ ಆತ್ಮಹತ್ಯೆ

| Updated By: shivaprasad.hs

Updated on: Oct 16, 2021 | 8:05 AM

ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬರದ ಹಿನ್ನೆಲೆಯಲ್ಲಿ ನೊಂದು ಹುಣಸೂರಿನಲ್ಲಿ ರೈತರೋವರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ದಸರಾ ಪಾರ್ಟಿ ವೇಳೆ ಜಗಳದಲ್ಲಿ ಯುವಕನೊಬ್ಬ ಕೊಲೆಯಾಗಿದ್ದಾನೆ.

ಮೈಸೂರು: ಕೈಗೆ ಸಿಗದ ಬೆಳೆ, ಏರಿದ ಸಾಲ; ಹುಣಸೂರಿನಲ್ಲಿ ರೈತ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ಸಾಲಬಾಧೆಯ ಕಾರಣದಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತ ರೈತನನ್ನು ರವಿಗೌಡ ಎಂದು ಗುರುತಿಸಲಾಗಿದ್ದು, ಅವರಿಗೆ 44 ವರ್ಷ ವಯಸ್ಸಾಗಿತ್ತು. ರವಿಗೌಡ ಸುಮಾರು 15 ಲಕ್ಷ ರೂಗಳನ್ನು ಸಾಲ ಮಾಡಿದ್ದರು. ಆದರೆ 2 ವರ್ಷದಿಂದ ಬೆಳೆ ಕೈಗೆ ಸಿಗದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರವಿಗೌಡ ಅವರು ತಮ್ಮ 7 ಎಕರೆ ಜಮೀನಿನಲ್ಲಿ ತಂಬಾಕು ಹಾಗೂ ಶುಂಠಿ ಬೆಳೆ ಬೆಳೆದಿದ್ದರು. ಕಂಪ್ಲಾಪುರ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ 6 ಲಕ್ಷ, ಫೈನಾನ್ಸ್​ ಒಂದರಲ್ಲಿ 9 ಲಕ್ಷ ಟ್ರ್ಯಾಕ್ಟರ್ ಸಾಲ ಪಡೆದಿದ್ದರು. ಎರಡು ವರ್ಷದಿಂದ ಬೆಳೆ ಕೈಕೊಟ್ಟು, ಬೆಲೆ ಪಾತಾಳಕ್ಕಿಳಿದಿದ್ದರಿಂದ ರವಿ ಕಂಗಾಲಾಗಿದ್ದರು. ಸಕಾಲದಲ್ಲಿ ಮಳೆಯೂ ಇಲ್ಲದೆ ತಂಬಾಕು ಬೆಳೆ ಸಾಧಾರಣವಾಗಿತ್ತು. ಇದರಿಂದ ನೊಂದು ರವಿ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ.

ಮಂಗಳೂರು: ದಸರಾ ಪಾರ್ಟಿ ವೇಳೆ ಜಗಳದಲ್ಲಿ ಯುವಕನ ಕೊಲೆ
ದಸರಾ ಪಾರ್ಟಿ ವೇಳೆ ಜಗಳದಲ್ಲಿ ಯುವಕನೊಬ್ಬ ಕೊಲೆಗೀಡಾಗಿದ್ದಾನೆ. ಪಚ್ಚನಾಡಿ ನಿವಾಸಿ ಧನುಷ್(20) ಹತ್ಯೆಗೀಡಾದ ಯುವಕ. ಮಂಗಳೂರಿನ ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ಪಾರ್ಟಿ ವೇಳೆ ಜೇಸನ್ ಹಾಗೂ ಧನುಷ್ ಎಂಬಾತನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಹರಿತವಾದ ವಸ್ತುವಿನಿಂದ ಜೇಸನ್ ಧನುಷ್‌ಗೆ ಇರಿದಿದ್ದಾನೆ. ಕೂಡಲೇ ಧನುಷ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಧನುಷ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ:

ಸಿಂಘು ಗಡಿಯಲ್ಲಿ ಗುಂಪು ಹಲ್ಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ

ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಭೆ; ಪ್ರಮುಖವಾಗಿ ಮುಂಬರುವ ಚುನಾವಣೆಗಳ ಕುರಿತು ಚರ್ಚೆಯ ನಿರೀಕ್ಷೆ