ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರೊಫೆಸರ್ ನೇಣಿಗೆ ಶರಣು

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರೊಫೆಸರ್ ನೇಣಿಗೆ ಶರಣು
ಸಾಂಧರ್ಬಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jul 18, 2022 | 10:53 PM

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕದಂಬ ಲೇಔಟ್‌ನ ಮನೆಯಲ್ಲಿ ಪ್ರೊಫೆಸರ್ ಚೈತ್ರಾ(41) ನೇಣಿಗೆ ಶರಣಾಗಿದ್ದಾರೆ. ಡೆತ್‌ನೋಟ್ ಬರೆದಿಟ್ಟು ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಗ್ಗಾವಿಯಲ್ಲಿ ಜಾನಪದ ವಿಶ್ವವಿದ್ಯಾನಿಲಯದಲ್ಲಿ ರಿಜಿಸ್ಟ್ರಾರ್‌ ಆಗಿರುವ ಗುರುಪ್ರಸಾದ್ ಅವರ ಪತ್ನಿ ಪ್ರೊಫೆಸರ್ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಗುರುಪ್ರಸಾದ್ 23 ವರ್ಷದ ಹಿಂದೆ ಚೈತ್ರಾರನ್ನು ಮದುವೆಯಾಗಿದ್ದರು. ಪತಿ ಕರೆ ಮಾಡಿದಾಗ ಪತ್ನಿ ಚೈತ್ರಾ ಕರೆ ಸ್ವೀಕರಿಸಿಲ್ಲ. ಪತಿ ಗುರುಪ್ರಸಾ ಕೂಡಲೇ ಚೈತ್ರಾ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.  ನಂತರ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡಿರಿವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

Published On - 10:53 pm, Mon, 18 July 22