ಮಗು ಮಾಡಿಕಕೊಳ್ಳುವ ವಿಚಾರಕ್ಕೆ ಗಂಡ-ಹೆಂಡ್ತಿ ಜಗಳ: ಕೊಲೆಯಲ್ಲಿ ಅಂತ್ಯ!

| Updated By: ರಮೇಶ್ ಬಿ. ಜವಳಗೇರಾ

Updated on: Apr 14, 2024 | 11:08 AM

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಕೊನೆಗೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ,

ಮಗು ಮಾಡಿಕಕೊಳ್ಳುವ ವಿಚಾರಕ್ಕೆ ಗಂಡ-ಹೆಂಡ್ತಿ ಜಗಳ: ಕೊಲೆಯಲ್ಲಿ ಅಂತ್ಯ!
ನವೀನ್
Follow us on

ಬೆಂಗಳೂರು (ಏಪ್ರಿಲ್.14): ಮಗು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ(Husband And Wife) ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ(Bengaluru) ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ. ಗಿರಿಜಾ(30) ಕೊಲೆಯಾದ ಪತ್ನಿ, ನವೀನ್ ಕೊಲೆ ಮಾಡಿದ ಆರೋಪಿ ಪತಿ. ಭಟ್ಕಳ ಮೂಲದವರಾದ ಗಿರಿಜಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಎಂಬುವವನೊಂದಿಗೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಗಂಡ-ಹೆಂಡತಿ ಇಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದರು. ಆದ್ರೆ, ಮಗು ಮಾಡಿಕೊಳ್ಳುವ ವಿಚಾರದಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದು, ಕೊನೆಗೆ ಪತಿ ನವೀನ್, ಪತ್ನಿ ಗಿರಿಜಾಳನ್ನ ಕೊಲೆ ಮಾಡಿದ್ದಾನೆ.

ಮದುವೆ ಬಳಿಕ ಗಿರಿಜಾಗೆ ಗರ್ಭಪಾತ ಆಗಿತ್ತು. ಇದಾದ ಬಳಿಕ ಸದ್ಯಕ್ಕೆ ಮಗು ಬೇಡ ಎಂದು ನವೀನ್​ ಎಂದಿದ್ದ. ಆದ್ರೆ ಗಿರಿಜಾ ಮಗು ಬೇಕು ಎಂದು ಪಟ್ಟು ಹಿಡಿದಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ಏಪ್ರಿಲ್ 12 ರಂದು ಮತ್ತೆ ಜಗಳವಾಗಿದ್ದು, ಕೊನೆಗೆ ನವೀನ್ ಮಲಗಿರುವ ಸಮಯ ನೋಡಿ ಉಸಿರುಗಟ್ಟಿಸಿ ಪತ್ನಿ ಗಿರಿಜಾಳನ್ನ ಕೊಲೆ ಮಾಡಿದ್ದಾನೆ. ಈ ಬಗ್ಗೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ನವೀನ್​ನನ್ನು ಬಂಧಿಸಿದ್ದಾರೆ.

ಗಿರಿಜಾ ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಗಿರಿಜಾ ಮತ್ತು ನವೀನ್ ಪರಿಚಯವಾಗಿ ಅದು ಪ್ರೀತಿಗೆ ತಿರುಗಿದೆ. ಬಳಿಕ ಇಬ್ಬರು ಮದುವೆ ಮಾಡಿಕೊಳ್ಳು ತೀರ್ಮಾನಿಸಿದ್ದರು. ಆದ್ರೆ, ಇವರಿಬ್ಬರ ಪ್ರೀತಿಗೆ ಗಿರಿಜಾ ಪೋಷಕರು ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಕೊನೆ ಮನೆಯವರನ್ನು ಮನವೊಲಿಸಿ ಗಿರಿಜಾ ನವೀನ್​ನನ್ನು ಮದುವೆಯಾಗಿದ್ದಳು.

ಮೃತ ಗಿರಿಜಾಳ ಸಹೋದರ ಮಂಜುನಾಥ್ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೊಲೆ ಬಗ್ಗೆ ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಮಗುವಿನ ವಿಚಾರಕ್ಕೆ ಗಲಾಟೆ ಆಗ್ತಿತ್ತು . ಅವಳು ಮಗು ಬೇಕು ಅಂತಿದ್ಲು, ಈತ ಬೇಡ ಅಂತಿದ್ದ. ನವೀನ್ ಗೆ ಬೇರೆ ಅಫೇರ್ ಕೂಡ ಇತ್ತು. ನಮಗೆಲ್ಲ ಧಮ್ಕಿ ಹಾಕುತ್ತಿದ್ದ. 20 ತೊಲೆ ಚಿನ್ನ ಕೊಟ್ಟು ಮದುವೆ ಮಾಡಿದ್ವಿ/ 4 ತಿಂಗಳು ಚೆನ್ನಾಗಿದ್ದ ಅಮೇಲೆ ಗಲಾಟೆ ಶುರುವಾಗಿದೆ. ಅರ್ಬಾಷನ್ ಮಾಡಿಸಬೇಕು ಅಂತಿದ್ದ. ನಮ್ಮ ಅಕ್ಕ ಒಪ್ಪುತ್ತಿರಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 10:54 am, Sun, 14 April 24