ಕೋಲಾರ: ಮೀನು ಹಿಡಿಯುವ ವಿಚಾರಕ್ಕೆ ಸೋದರ ಸಂಬಂಧಿಗಳ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ಕೋಲಾರ(Kolar) ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಮೀನು ಹಿಡಿಯುವ ವಿಚಾರಕ್ಕೆ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಕುರಿತು ನ್ಯಾಯ ಪಂಚಾಯಿತಿ ವೇಳೆ ಚಾಕುವಿನಿಂದ ಇರಿದು ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಧಾರುಣ ಘಟನೆ ನಡೆದಿದೆ.

ಕೋಲಾರ: ಮೀನು ಹಿಡಿಯುವ ವಿಚಾರಕ್ಕೆ ಸೋದರ ಸಂಬಂಧಿಗಳ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ
ಮೀನು ಹಿಡಿಯುವ ವಿಚಾರದಲ್ಲಿ ಹತ್ಯೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 13, 2024 | 6:18 PM

ಕೋಲಾರ, ಏ.13: ಮೀನು ಹಿಡಿಯುವ ವಿಚಾರದಲ್ಲಿ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಕುರಿತು ನ್ಯಾಯ ಪಂಚಾಯಿತಿ ವೇಳೆ ಚಾಕುವಿನಿಂದ ಇರಿದು ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ(Kolar) ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ. ಲೋಕೇಶ್, ಕೊಲೆಯಾದ ಯುವಕ. ಮತ್ತೋರ್ವ ದರ್ಶನ್‌ಗೆ ಗಂಭೀರ ಗಾಯವಾಗಿದ್ದು, ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟೇಕಲ್‌ನ ಈಶ್ವರ ಕೆರೆಯಲ್ಲಿ ಮೀನು ಹಿಡಿಯುವಾಗ ಗಲಾಟೆ ನಡೆದಿತ್ತು. ಈ ಹಿನ್ನಲೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲಾಗುತ್ತಿತ್ತು. ಈ ವೇಳೆ ಸಹೋದರ ಸಂಬಂಧಿ ಪ್ರಮೋದ್‌ ಎಂಬಾತ ರೊಚ್ಚಿಗೆದ್ದು ಚಾಕುವಿನಿಂದ ತಿವಿದಿದ್ದಾನೆ. ಕೂಡಲೇ ಗಾಯಾಳು ಲೋಕೇಶ್​ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮತ್ತೊಬ್ಬ ಗಾಯಾಳು ದರ್ಶನ್‌ಗೆ ಚಿಕಿತ್ಸೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಕೋಲಾರ ಎಸ್‌ಪಿ ನಾರಾಯಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ;​ ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಅರೆಸ್ಟ್

ವಿದ್ಯುತ್ ತಂತಿ ತಗುಲಿ ರೈತ ಸಾವು

ಯಾದಗಿರಿ: ವಡಗೇರ ತಾಲೂಕಿನ ಗೋಡಿಹಾಳ ಗ್ರಾಮದ ಬಳಿ ವಿದ್ಯುತ್ ಸ್ಪರ್ಶಿಸಿ ಹೊರಟೂರು ಗ್ರಾಮದ ರೈತ ಮರೆಪ್ಪ(43) ಎಂಬಾತ ಸಾವನ್ನಪ್ಪಿದ್ದಾನೆ. ಜಾನುವಾರುಗಳಿಗೆ ಮೇವು ತೆಗೆದುಕೊಂಡು ಹೋಗಲು ಗೋಡಿಹಾಳ ಗ್ರಾಮಕ್ಕೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ‌ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ರೈತನ ಕುಟುಂಬಕ್ಕೆ ವೈಯಕ್ತಿಕ ಆರ್ಥಿಕ ನೆರವು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Sat, 13 April 24

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ