ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ

| Updated By: Digi Tech Desk

Updated on: Nov 30, 2022 | 3:27 PM

ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ. ಮದುವೆ ಆಗ್ತೀನಿ ಎಂದು ಬಂದ ಪ್ರಿಯತಮ ವಿಧವೆ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ.

ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ
ಮದುವೆ ಆಗುತ್ತೇನೆಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ
Follow us on

ಬೆಂಗಳೂರು: ಮೋಸ (Cheating) ಹೋಗುವವರು ಇರೋತನಕ ಮೋಸ ಮಾಡು ವವರು ಇರುತ್ತಾರೆ. ಅಷ್ಟು ಸುಲಭವಾಗಿ ಯಾರನ್ನು ನಂಬಬೇಡಿ ಎಂದು ಎಷ್ಟು ಹೇಳಿದರೂ ಸಹ ಜನ ಮೋಸದ ಬಲೆಗೆ ಬೀಳುತ್ತಲೇ ಇದ್ದಾರೆ. ಅದರಂತೆ ಬೆಂಗಳೂರಿನಲ್ಲಿ ( Bengaluru) ಮಹಿಳೆಯೋರ್ವಳು, ಮದುವೆ(marriage) ಆಗುತ್ತೇನೆಂದು ಬಂದವನನ್ನು ನಂಬಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾಳೆ.

ಹೌದು.. ಮದುವೆ ಆಗುತ್ತೇನೆ ಎಂದು ನಂಬಿಸಿ ವಿಧವೆ ಮನೆಗೆ ಬಂದವ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದು, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಖತರ್ನಾಕ್ ಮರ್ಡರ್ ಸ್ಟೋರಿ! ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೆಸಿಕೊಂಡಿದ್ದ ಪ್ರೇಯಸಿ ಮಾಡಿದ್ದು ಏನು ಗೊತ್ತಾ?

ಈಗಾಗಲೇ ಪ್ರದೀಪನಿಗೆ ಮದುವೆ ಆಗಿದೆ. ಆದರೆ, ನನಗೆ ಮದುವೆ ಆಗಿಲ್ಲ ಎಂದು ಮಹಿಳೆಗೆ ಸುಳ್ಳು ಹೇಳಿದ್ದಾನೆ. ಅಲ್ಲದೇ ನಿನ್ನನ್ನೇ ಮದುವೆಯಾಗುತ್ತೇನೆಂದು ಮಹಿಳೆಗೆ ನಂಬಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಮನೆಯೊಳಗೆ ಸೇರಿಸಿಕೊಂಡಿದ್ದಾಳೆ. ಆದ್ರೆ, ಪ್ರದೀಪ್​ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಇದೀಗ ನೊಂದ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಸದ್ಯ ಆರೋಪಿ ಪ್ರದೀಪ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ತನಿಖೆ ನಂತರ ಈ ಸಂಬಂಧ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ಒಟ್ಟಿನಲ್ಲಿ ಮದುವೆ ಆಗುತ್ತೇನೆಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:50 am, Wed, 30 November 22