ಆಗಲೇ ಓರ್ವಳನ್ನು ಪ್ರೀತಿಸಿ ಮದ್ವೆಯಾದ ಯವಕ ಮತ್ತೋರ್ವಳ ಜತೆ ಎಸ್ಕೇಪ್: ಲವರ್​ ಬಾಯ್​ನ ಕಥೆ

ಈಗಾಗಲೇ ಓರ್ವಳನ್ನು ಪ್ರೀತಿ ಮದುವೆಯಾಗಿದ್ದವನಿಗೆ ಬೇರೊಂದು ಹುಡುಗಿ ಮೇಲೆ ಲವ್ ಆಗಿದ್ದು, ಆಕೆಯೊಂದಿಗೆ ಎಸ್ಕೇಪ್ ಆಗಿದ್ದಾನೆ.

ಆಗಲೇ ಓರ್ವಳನ್ನು ಪ್ರೀತಿಸಿ ಮದ್ವೆಯಾದ ಯವಕ ಮತ್ತೋರ್ವಳ ಜತೆ ಎಸ್ಕೇಪ್: ಲವರ್​ ಬಾಯ್​ನ ಕಥೆ
ಹೆಂಡ್ತಿಯನ್ನು ಬಿಟ್ಟ ಎಸ್ಕೇಪ್ ಆದ ಯುವಕ
Edited By:

Updated on: Oct 20, 2022 | 10:27 PM

ಚಿಕ್ಕಬಳ್ಳಾಪುರ : ಆಕೆ ಪ್ರತಿದಿನ ಬಸ್ ನಲ್ಲಿ ಕಾಲೇಜಿಗೆ ಹೋಗಿ ಬರ್ತಿದ್ದಳು. ಅದೆ, ಬಸ್ ನಲ್ಲಿ ಕಾಲೇಜಿಗೆ ಹೊಗ್ತಿದ್ದ ಯುವತಿ ಮೇಲೆ ಯುವನೊಬ್ಬನಿಗೆ ಲವ್ ಆಗಿದೆ. ಇಬ್ಬರು ಪ್ರೇಮ ನಿವೇದನೆ ಮಾಡಿಕೊಂಡು ಬಳಿಕ ಮದುವೆಯನ್ನು ಸಹ ಮಾಡಿಕೊಂಡಿದ್ದಾನೆ. ಈ ಲವ್ ಜೋಡಿ ಸಪ್ತಪದಿ ತುಳಿದು ನೆಟ್ಟಗೆ ಒಂದು ವರ್ಷ ಕಳೆದಿಲ್ಲ ಆಗಲೇ ಪ್ರೀತಿಸಿ ಕೈಹಿಡಿದ ಗಂಡ, ಪತ್ನಿಯನ್ನು ಬಿಟ್ಟು ಬೇರೊಬ್ಬ ಯುವತಿ ಜೊತೆ ಪರಾರಿಯಾದ ಆರೋಪ ಕೇಳಿ ಬಂದಿದೆ.

ಹೌದು….ಯುವತಿ ಹೆಸರು ದೇವಿಕ. ಚಿಕ್ಕಬಳ್ಳಾಪುರ ನಗರದ ಕಂದವಾರ ನಿವಾಸಿಯಾದ್ರು ದೊಡ್ಡಬಳ್ಳಾಪುರ ನಗರದ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು. ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವಿದ್ಯಾಬ್ಯಾಸ ಮಾಡ್ತಿದ್ದಳು. ಪ್ರತಿದಿನ ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಬಸ್ ನಲ್ಲಿ ಬಂದು ಹೊಗ್ತಿದ್ದಳು. ಆ ವೇಳೆ ಅದೇ ಕೆಂಪು ಬಸ್ಸಿನಲ್ಲಿ ಬರ್ತಿದ್ದ ಐ.ಟಿ.ಐ ವಿದ್ಯಾರ್ಥಿಯಾಗಿದ್ದ ಬಂಡಹಳ್ಳಿ ನಿವಾಸಿ ನರಸಿಂಹಮೂರ್ತಿ ಎನ್ನುವಾತನ ಪರಿಚಯವಾಗಿದೆ.  ಬಳಿಕ ಇಬ್ಬರು ಪ್ರೀತಿ ಪ್ರೇಮ ಪ್ರಣಯ ಅಂತ ಸುತ್ತಾಡಿ ಕೊನೆಗೆ ಲವ್ ಮ್ಯಾರೇಜ್ ಕೂಡ ಮಾಡಿಕೊಂಡಿದ್ದಾರೆ.

ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಯುವಕ ಬಸ್​ ಕ್ಲೀನರ್ ಆಗಿದ್ದ, ಆದ್ರೆ, ಲವ್​ನಲ್ಲಿ ಬಿದ್ದು ದುರಂತ ಅಂತ್ಯ ಕಂಡ

9 ತಿಂಗಳ ಕಾಲ ಪತ್ನಿ ಜೊತೆಯೆ ಇದ್ದು ಸಂಸಾರ ಮಾಡಿದ್ದಾನೆ. ಆದ್ರೆ 10 ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ. ಆದ್ರೆ, ಹೆಂಡ್ತಿ ಹೇಳುವುದು ಮಾತ್ರ ಬೇರೆ ಯುವತಿಯ ಜೊತೆ ಹೋಗಿದ್ದಾನೆ ಎಂದು. ಇದೀಗ ದೇವಿಕ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದ 20 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದು, ಆಕೆ ದೇವಿಕ ಗಂಡ ನರಸಿಂಹಮೂರ್ತಿಯ ಜೊತೆ ಸಲುಗೆಯಿಂದ ಇದ್ದಳಂತೆ. ಇದ್ರಿಂದ ನರಸಿಂಹಮೂರ್ತಿ ಆಕೆಯ ಜೊತೆಯೆ ಎಸ್ಕೇಪ್ ಆಗಿರುವ ವದಂತಿ ಹರಡಿದೆ. ಮತ್ತೊಂದೆಡೆ ಕಾಣೆಯಾಗಿರುವ ಯುವತಿಯ ಸಂಬಂಧಿಗಳು ನರಸಿಂಹಮೂರ್ತಿ ಯ ಮೇಲೆ ಅನುಮಾನ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಆದ್ರೆ ಇತ್ತ ಪ್ರೀತಿಸಿ ಮದುವೆಯಾದ ತಪ್ಪಿಗೆ ದೇವಿಕ ಗಂಡನ ಜೊತೆ ಇರುವ ಫೋಟೋ, ವಿಡಿಯೋ ಹಿಡಿದುಕೊಂಡು ಗಂಡನ ಬರುವಿಕೆಗೆ ಕಾಯುತ್ತಿದ್ದಾಳೆ.

ಪ್ರೀತಿಸಿ ಮದುವೆಯಾಗಿ 9 ತಿಂಗಳು ಸಂಸಾರ ನಡೆಸಿದ್ರೂ… ಎಲ್ಲಿ ತನ್ನ ಗಂಡ ತನಗೆ ಕೈ ಕೊಟ್ಟು ಬೇರೆಯವಳ ಪಾಲಾಗ್ತಾನೆ ಅಂತ ಆತನ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಇನ್ನೂ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ದೂರು ನೀಡಿ ಹತ್ತು ದಿನಗಳೆ ಕಳೆದರೂ ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲವಂತೆ.

Published On - 10:25 pm, Thu, 20 October 22