ರಾಮನಗರ, ಫೆ.13: ಚುಚ್ಚುಮದ್ದು ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಗಂಡು ಮಗು ಮೃತಪಟ್ಟ ಘಟನೆ ರಾಮನಗರ (Ramanagara) ಜಿಲ್ಲೆಯ ಚನ್ನಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಸ್ಪೂರ್ತಿ ಮತ್ತು ಮೋಹನ್ ದಂಪತಿಯ ಜಸ್ವಿಕ್ ಮೃತ ಮಗು.
ಇಂದು ದೊಡ್ಡಮಳೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ 18 ಮಕ್ಕಳಿಗೆ ಪೆಂಟಾ ಲಸಿಕೆ ನೀಡಿದ್ದಾರೆ. ಈ ಮಕ್ಕಳ ಪೈಕಿ ಸ್ಪೂರ್ತಿ ಮತ್ತು ಮೋಹನ್ ದಂಪತಿಯ ಮಗು ಕೂಡ ಒಂದಾಗಿತ್ತು. ಆದರೆ, ಜಸ್ವಿಕ್ಗೆ ಚುಚ್ಚುಮದ್ದು ನೀಡಿದ ಒಂದು ಗಂಟೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದೆ.
ಇದನ್ನೂ ಓದಿ: Crime News: ಒಂದು ತಿಂಗಳ ಮಗುವನ್ನು ಓವನ್ನಲ್ಲಿ ಸುಟ್ಟು ಕೊಂದ ತಾಯಿ!
ಸೂಕ್ತ ರೀತಿಯಲ್ಲಿ ಮಗು ತಪಾಸಣೆ ಮಾಡದೇ ವ್ಯಾಕ್ಸಿನ್ ಹಾಕಿರುವ ಆರೋಪ ಕೇಳಿಬಂದಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಅದೇ ಗ್ರಾಮದಲ್ಲಿ 18 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. 18 ಮಕ್ಕಳ ಪೈಕಿ 17 ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಬೆಂಗಳೂರು: ಉತ್ತರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮನೆಯ ನೀರಿನ ಸಂಪ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆಯ ನೀರಿನ ಸಂಪ್‌ನಲ್ಲಿ ಸುಮಾರು 40 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಹಿಂದೆಯೇ ಕೊಲೆಗೈದು ಬಳಿಕ ಸಂಪ್‌ಗೆ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ