ಸಲಿಂಗಕಾಮಕ್ಕೆ ಒಪ್ಪದ ಸಹೋದ್ಯೋಗಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದವ ಬಂಧನ
ಕುಡಿದ ಅಮಲಿನಲ್ಲಿದ್ದ ಸುನೀಲ್ ತೀವ್ರ ಕ್ರೋಧಗೊಂಡು ಇಟ್ಟಿಗೆ, ಬಿಯರ್ ಬಾಟಲಿಗಳಿಂದ ಸಿಕಂದರ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದ. ಇತ್ತ ಗಾಯಗೊಂಡ ಸಿಕಂದರ್ನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಅ.31ರಂದು ಮೃತಪಟ್ಟಿದ್ದ.
ನೆಲಮಂಗಲ: ಸಲಿಂಗಕಾಮಕ್ಕೆ ಒಪ್ಪದ ವ್ಯಕ್ತಿಯನ್ನು ಹತ್ಯೆ ಮಾಡಿದ್ದವನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಯಾದವ್ ಪಾಂಡೆ (35) ಬಂಧಿತ. ಸಿಕಂದರ್ (38) ಹತ್ಯೆಯಾದವನು.
ಸುನೀಲ್ ಹಾಗೂ ಸಿಕಂದರ್ ಇವರಿಬ್ಬರೂ ಕಡಬಗೆರೆ ಗೇಟ್ನ ಬಳಿ ಇರುವ ಖಾಸಗಿ ಸ್ಟೀಲ್ ಕಂಪನಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 29ರಂದು ಸುನೀಲ್ ಸಿಕಂದರ್ ಬಳಿ ಸಲಿಂಗ ಸೆಕ್ಸ್ಗೆ ಒತ್ತಾಯಿಸಿ, ಬಲವಂತ ಮಾಡಿದ್ದ. ಆಗ ಸಿಕಂದರ್ ಅದಕ್ಕೆ ಪ್ರತಿರೋಧ ಒಡ್ಡಿದ್ದ. ಕುಡಿದ ಅಮಲಿನಲ್ಲಿದ್ದ ಸುನೀಲ್ ತೀವ್ರ ಕ್ರೋಧಗೊಂಡು ಇಟ್ಟಿಗೆ, ಬಿಯರ್ ಬಾಟಲಿಗಳಿಂದ ಸಿಕಂದರ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದ. ಇತ್ತ ಗಾಯಗೊಂಡ ಸಿಕಂದರ್ನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಅ.31ರಂದು ಮೃತಪಟ್ಟಿದ್ದ.
ಮಾದನಾಯಕನಹಳ್ಳಿ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು. ಆಂಧ್ರದ ರೇಣಿಗುಂಟ ಕೈಗಾರಿಕಾ ಪ್ರದೇಶದ ಬಳಿ ತಲೆ ಮರೆಸಿಕೊಂಡಿದ್ದ ಸುನೀಲ್ ಯಾದವ್ ಪಾಂಡೆಯನ್ನು ಇಂದು ತಿರುಪತಿ ಬಳಿ ಪೊಲೀಸರು ಬಂಧಿಸಿದ್ದಾರೆ.