ಕೋಲಾರ: ಕಳ್ಳತನದ ಕೋಳಿ ಖರೀದಿಸುತ್ತಿದ್ದ ರೌಡಿಶೀಟರ್, ಪ್ರಶ್ನಿಸಿದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ

ಕೋಳಿ ಅಂಗಡಿ ಇಟ್ಟುಕೊಂಡಿರುವ ರೌಡಿಶೀಟರ್ ಕಳ್ಳತನ ಮಾಡಿ ತಂದುಕೊಡುತ್ತಿದ್ದ ಕೋಳಿಗಳನ್ನು ಖರೀದಿ ಮಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ರೌಡಿಶೀಟರ್ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಕೋಲಾರ ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ಘಟನೆ‌ ಕಂಡು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೋಲಾರ: ಕಳ್ಳತನದ ಕೋಳಿ ಖರೀದಿಸುತ್ತಿದ್ದ ರೌಡಿಶೀಟರ್, ಪ್ರಶ್ನಿಸಿದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ
ಕಳ್ಳತನದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ರೌಡಿಶೀಟರ್
Updated By: Rakesh Nayak Manchi

Updated on: Jan 05, 2024 | 11:36 AM

ಕೋಲಾರ, ಜ.5: ಕಳ್ಳತನದ ಕೋಳಿಗಳನ್ನು ಖರೀದಿ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ರೌಡಿಶೀಟರ್ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಕೋಲಾರ (Kolar) ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ತಾಜ್​ಫೀರ್ ಎಂಬಾತ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅಮ್ಮವಾರಪೇಟೆ ವೃತ್ತದಲ್ಲಿ ತಾಜ್​ಫೀರ್ ಕೋಳಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದು, ಕಾದರಿಪುರದಲ್ಲಿ ಕಳ್ಳತನ ಮಾಡಿ ತರುತ್ತಿದ್ದ ಕೋಳಿಗಳನ್ನು ಖರೀದಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕಳ್ಳತನದ ಕೋಳಿ ಖರೀದಿ ಬಗ್ಗೆ ತನಗೆ ಗೊತ್ತಿಲ್ಲ ಎನ್ನುತ್ತಿದ್ದಾನೆ. ಆದರೆ, ಇಲ್ಲಿ ಕಳ್ಳತನದ ಕೋಳಿಗಳನ್ನು ಖರೀದಿಸುತ್ತಿರುವುದು ಈತನೊಬ್ಬನೇ ಎಂದು ಕಿರಣ್ ಆರೋಪಿಸಿದ್ದಾರೆ.

ಇದನ್ನೂ ಓದಿ: ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ವ್ಯಕ್ತಿ ಮೇಲೆ ಇಟ್ಟಿಗೆಯಿಂದ ಹಲ್ಲೆ! ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆ

ಅಲ್ಲದೆ, ಕಡಿಮೆ ಮೆಲೆಗೆ ಕೋಳಿಗಳನ್ನು ಖರೀದಿಸುತ್ತಿದ್ದಾನೆ ಎಂದು ಆರೋಪಿಸಿದ ಕಿರಣ್, ಒಂದೂವರೆ ಸಾವಿರ ರೂಪಾಯಿ ಕೋಳಿಗಳನ್ನು 800 ರೂಪಾಯಿಗೆ ಖರೀದಿಸುತ್ತಿದ್ದಾನೆ ಎಂದಿದ್ದಾರೆ. ಈ ವೇಳೆ ಕುಪಿತಗೊಂಡ ತಾಜ್​ಫೀರ್, ಅಂಗಡಿಯೊಳಗಿದ್ದ ಕೋಳಿ ಮಾಂಸ ಮಾಡಲು ಬಳಸುತ್ತಿದ್ದ ಕತ್ತಿಯಿಂದ ಕಿರಣ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಕೂಡಲೇ ಹಲ್ಲೆಯಿಂದ ತಪ್ಪಿಸಿಕೊಂಡ ಕಿರಣ್ ತಾಜ್​ಫೀರ್​ನನ್ನು ಹಿಡಿದು ಥಳಿಸಿದ್ದು, ಅಲ್ಲೇ ಇದ್ದ ಪೊಲೀಸ್ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ