ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ವ್ಯಕ್ತಿ ಮೇಲೆ ಇಟ್ಟಿಗೆಯಿಂದ ಹಲ್ಲೆ! ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆ
ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರದ ಗಿರಿನಗರದಲ್ಲಿ ನಡೆದಿದೆ. ಕಬಾಬ್ ತಿನ್ನುತ್ತಿದ್ದಾಗ ಎಂಟ್ರಿಕೊಟ್ಟ ಆರೋಪಿ ಮದ್ಯ ನೀಡುವಂತೆ ಪೀಡಿಸಿದ್ದಾನೆ. ಮದ್ಯ ನೀಡದಿದ್ದಾಗ ಕಾಲಿನಿಂದ ಒದ್ದು ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆಯಾಗಿದೆ.
ಬೆಂಗಳೂರು, ಜ.5: ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು (Bengaluru) ನಗರದ ಗಿರಿನಗರದಲ್ಲಿ ನಡೆದಿದೆ. ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಧರ್ಮ ಕೃತ್ಯದ ನಂತರ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ.
ಗಿರಿನಗರದ ಮೂಕಾಂಭಿಕನಗರದಲ್ಲಿ ಸಿಂಗಾರ ವೇಲು ಎಂಬುವವರು ತಮ್ಮ ಮನೆಯ ಬಳಿ ಕಬಾಬ್ ತಿನ್ನುತ್ತಿದ್ದರು. ಈ ವೇಳೆ ಆರೋಪಿ ಧರ್ಮ ಬಂದು ತನಗೆ ನೈಂಟಿ ಎಣ್ಣೆ ಕೊಡಿಸು ಅಂತ ಪೀಡಿಸಿದ್ದಾನೆ. ಕೊಡಿಸದಿದ್ದಾಗ ಕುಪಿತಗೊಂಡ ಧರ್ಮ, ಸಿಂಗಾರ ವೇಲು ಅವರಿಗೆ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಅರೆಸ್ಟ್
ಘಟನೆಯಲ್ಲಿ ಸಿಂಗಾರ ವೇಲು ಅವರ ತುಟಿ ಹರಿದುಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಸದ್ಯ, ಹಲ್ಲೆಯ ಸಂಪೂರ್ಣ ದೃಶ್ಯವಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ನಡೆದ ಘಟನೆ ಇದು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣಾ ಪೊಲೀಸರು ಆರೋಪಿ ಧರ್ಮನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Fri, 5 January 24