Bengaluru News: ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ

| Updated By: ರಮೇಶ್ ಬಿ. ಜವಳಗೇರಾ

Updated on: Jul 18, 2023 | 2:24 PM

ಹೆತ್ತು ಹೊತ್ತು ಸಾಕಿದ ತಂದೆ–ತಾಯಿ ಪೋಷಣೆ ಮಕ್ಕಳ ಜವಾಬ್ದಾರಿ. ಆದ್ರೆ, ಇಲ್ಲೋರ್ವ ಕ್ರೂರಿ ಮಗ ಹೆತ್ತವರನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ.

Bengaluru News: ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ಜುಲೈ 18): ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನೇ (Father And Mother) ಪಾಪಿ ಮಗ ಬರ್ಬರವಾಗಿ ಕೊಲೆ(Murder) ಮಾಡಿರುವ ಘಟನೆ ಬೆಂಗಳೂರಿನ(Bengaluru) ಕೊಡಿಗೆಹಳ್ಳಿ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ನಡೆದಲ್ಲಿ ನಡೆದಿದೆ. ಶರತ್ ಎನ್ನುವಾತ ತನ್ನ ತಂದೆ ತಂದೆ ಭಾಸ್ಕರ್, ತಾಯಿ ಶಾಂತಾಳನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಶರತ್, ತನ್ನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದ ಎಂದು ತಿಳಿದುಬಂದಿದ್ದು, ಈ ಬಾರಿ ಅವರ ಪ್ರಾಣವನ್ನೇ ತೆಗೆದಿದ್ದಾನೆ.

ಇದನ್ನೂ ಓದಿ: Belagavi News: ಗಂಡನ ಪಾದ ಪೂಜೆ ಮಾಡಿ ಬಳಿಕ ದೇಗುಲಕ್ಕೆ ಕರೆದೊಯ್ದು ಪತಿಯನ್ನು ಬಲಿ ಕೊಟ್ಟ ಪತ್ನಿ

ಶಾಂತಾ ಇತ್ತೀಚೆಗೆ ಕೇಂದ್ರದ ನೌಕರಿಯಿಂದ ನಿವೃತ್ತಿಯಾಗಿ ಮನೆಯಲ್ಲಿದ್ದರೆ, ಪತಿ ಭಾಸ್ಕರ್ ಖಾಸಗಿ ಕ್ಯಾಂಟೀನ್​ವೊಂದರಲ್ಲಿ ಕ್ಯಾಶಿಯರ್ ಆಗಿದ್ದ. ಇನ್ನು ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇನ್ನೊಬ್ಬ ಮಗ ಕೆಲಸಕ್ಕೆ ಹೋಗುತ್ತಿದ್ದರೆ ಮತ್ತೋರ್ವ ಮಗ ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದ.ಅಲ್ಲದೇ ಶರತ್ ಮನೆಯಲ್ಲಿ ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದ. ನಿನ್ನೆ(ಜುಲೈ 17) ಸಹ ಸಂಜೆ ಕುಡಿದು ಬಂದು ತಂದೆ-ತಾಯಿ ಜೊತೆ ಗಲಾಟೆ ಮಾಡಿಕೊಂಡಿದ್ದು, ಆ ವೇಳೆ ಶಾಂತಾ ಹಾಗೂ ಭಾಸ್ಕರ್​ಗೆ ರಾಡ್​ನಿಂದ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಇಂದು(ಜುಲೈ 18) ಬೆಳಗ್ಗೆ ದೊಡ್ಡ ಮಗ ತಂದೆ-ತಾಯಿ ಕರೆ ಮಾಡಿದ್ದಾನೆ. ಆದ್ರೆ, ಅವರು ಆಗಲೇ ಕೊಲೆಯಾಗಿ ಬಿದ್ದಿದ್ದರಿಂದ ಇಬ್ಬರೂ ಫೋನ್ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾನೆ. ಆಗ ಪಕ್ಕದ ಮನೆಯವರು ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿನ್ನೆ(ಜುಲೈ 17) ಸಂಜೆ ಅಥವಾ ರಾತ್ರಿ ಸಮಯದಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ಇಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆ ತಾಯಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಮೊದಲ ಮಗ ದೂರು ನೀಡಿದ್ದಾರೆ. ಶರತ್(ಮೃತರ ಎರಡನೇ ಮಗ)​ ಈ ಕೃತ್ಯ ಎಸಗಿದ್ದಾನೆ ಎಂದು ಅರೋಪಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದ್ದು, ಆರೋಪಿ ಅರೋಪಿ ಶರತ್​ಗಾಗಿ ಹುಡುಕಾಟ ನಡೆಸುತಿದ್ದೆವೆ ಎಂದು ಮಾಹಿತಿ ನೀಡಿದರು.

Published On - 12:32 pm, Tue, 18 July 23