Belagavi News: ಗಂಡನ ಪಾದ ಪೂಜೆ ಮಾಡಿ ಬಳಿಕ ದೇಗುಲಕ್ಕೆ ಕರೆದೊಯ್ದು ಪತಿಯನ್ನು ಬಲಿ ಕೊಟ್ಟ ಪತ್ನಿ

ಭೀಮನ‌ ಅಮಾವಾಸ್ಯೆ ದಿನದಂದು ಗಂಡನ ಪಾದಪೂಜೆ ಮಾಡಿದ್ದ ಪತ್ನಿ ಬಳಿಕ ದೇವಸ್ಥಾನಕ್ಕೆ ಕರೆದೊಯ್ದು ಬಲಿಕೊಟ್ಟಿದ್ದಾಳೆ.

Belagavi News: ಗಂಡನ ಪಾದ ಪೂಜೆ ಮಾಡಿ ಬಳಿಕ ದೇಗುಲಕ್ಕೆ ಕರೆದೊಯ್ದು ಪತಿಯನ್ನು ಬಲಿ ಕೊಟ್ಟ ಪತ್ನಿ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 18, 2023 | 8:33 AM

ಬೆಳಗಾವಿ, (ಜುಲೈ 15): ಭೀಮನ‌ ಅಮಾವಾಸ್ಯೆ ದಿನದಂದು ಬೆಳಗಾವಿ(Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಭೀಕರ ಕೊಲೆ (Murder) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಭೀಮನ‌ ಅಮಾವಾಸ್ಯೆಯಂದು ದೀರ್ಘಾಯುಷ್ಯಕ್ಕಾಗಿ ಪಾದಪೂಜೆ ಮಾಡಿದ ಬಳಿಕ ಪತ್ನಿಯೇ ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ. ಹೌದು…ಕೇವಲ ಐದು ತಿಂಗಳ ಹಿಂದೆ ಅಷ್ಟೇ ಸಪ್ತಪದಿ ತುಳಿದಿದ್ದ ಶಂಕರ್ ಜಗಮುತ್ತಿ(25) ಎನ್ನುವಾತನನ್ನು ಪತ್ನಿ ಕಣ್ಣೆದುರಲ್ಲೇ ವಡೇರಹಟ್ಟಿ ಬಳಿ ದೇವಸ್ಥಾನದ ಆವರಣದಲ್ಲಿ ನಿನ್ನೆ(ಜುಲೈ 17) ಭೀಕರ ಹತ್ಯೆ ಮಾಡಲಾಗಿತ್ತು. ಆದ್ರೆ, ಗಂಡನ ಕೊಲೆ ಹಿಂದಿನ ಸೂತ್ರಧಾರಿಯೇ ಪತ್ನಿ ಪ್ರಿಯಾಂಕಾ‌ ಎಂದು ಬಯಲಾಗಿದೆ. ಸದ್ಯ ದೇಗುಲಕ್ಕೆ ಕರೆದೊಯ್ದು ಪತಿಯನ್ನೇ ಕೊಲ್ಲಿಸಿದ್ದ ಪತ್ನಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಭೀಮನ ಅಮವಾಸ್ಯೆಯಂದೇ ಹರಿದ ನೆತ್ತರು, ಹೆಂಡ್ತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ

ಐದು ತಿಂಗಳ ಹಿಂದೆ ಅಷ್ಟೇ ಶಂಕರ್​ನನ್ನು ಮದುವೆಯಾಗಿದ್ದ ಪ್ರಿಯಾಂಕಾ ನಿನ್ನೆ‌ ಭೀಮನ‌ ಅಮಾವಾಸ್ಯೆ ಹಿನ್ನೆಲೆ ಗಂಡನ ಪಾದ ಪೂಜೆ ಮಾಡಿದ್ದಳು. ಬಳಿಕ ಬನಸಿದ್ದೇಶ್ವರ ದೇವಸ್ಥಾನಕ್ಕೆ ಶಂಕರ್​ನನ್ನು ಕರೆದೊಯ್ದಿದ್ದಳು. ಆದ್ರೆ, ಮನೆ ಬಿಡುವಾಗ ಪ್ರಿಯಕರ ಶ್ರೀಧರ್​ಗೆ ಪ್ರಿಯಾಂಕಾ‌ ಕರೆ ಮಾಡಿ ದೇವಸ್ಥಾನಕ್ಕೆ ಬರುತ್ತಿರುವುದಾಗಿ ಹೇಳಿದ್ದಳು. ಅದರಂತೆ ಶಂಕರ್​ನನ್ನು ಹತ್ಯೆ ಮಾಡಲು ಹೊಂಚು ಹಾಕಿಕೊಂಡಿದ್ದ ಪ್ರಿಯಾಂಕಾ‌ಳ ಪ್ರಿಯಕರ ಶ್ರೀಧರ್, ಶಂಕರ್ ದೇವಸ್ಥಾನದ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಹಿಂದಿನಿಂದ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಕೊಲೆ ಬಳಿಕ ಪ್ರಿಯಾಂಕಾ‌ ತನಗೆ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದಳು. ಕೇಸ್ ದಾಖಲಿಸಿಕೊಂಡು ಮೂಡಲಗಿ ಪೊಲೀಸರು ತನಿಖೆ ನಡೆಸಿದಾಗ ಪ್ರಿಯಾಂಕಳ ನೌಟಂಕಿ ಆಟ ಬಟಾಬಯಲಾಗಿದೆ. ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್, ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್​ನನ್ನು ಬಂಧಿಸಿದ್ದಾರೆ.

ಇನ್ನಷ್ಟು ಬೆಳಗಾವಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ