ಹಾಲಿನ ಟ್ಯಾಂಕರ್​ನಲ್ಲಿ ಗಾಂಜಾ ಸಾಗಾಟ: ಸಿನಿಮಾವನ್ನೂ ಮೀರಿಸುವಂತಿದೆ ಇವರ ಖತರ್ನಾಕ್ ಪ್ಲ್ಯಾನ್​

ಸಿನಿಮಾವನ್ನೂ ಮೀರಿಸುವ ಹಾಗೆ ಪಕ್ಕಾ ಪ್ಲ್ಯಾನ್​ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಾರು 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಹಾಲಿನ ಟ್ಯಾಂಕರ್​ನಲ್ಲಿ ಗಾಂಜಾ ಸಾಗಾಟ: ಸಿನಿಮಾವನ್ನೂ ಮೀರಿಸುವಂತಿದೆ ಇವರ ಖತರ್ನಾಕ್ ಪ್ಲ್ಯಾನ್​
ಗಾಂಜಾ
Follow us
Kiran HV
| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 10:53 PM

ಬೆಂಗಳೂರು, ಜುಲೈ 18: ರಕ್ತ ಚಂದನ (Red sandalwood) . ಆಂಧ್ರ ಒಡಿಶಾ ಗಡಿಭಾಗದ ಕಾಡುಗಳಲ್ಲಿ ಹೇರಳವಾಗಿ ಸಿಗುವ ಇದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಇದರ ಕಳ್ಳಸಾಗಣೆ ಆಧಾರಿತ ಸಿನಿಮಾ ಪುಷ್ಪಾ ಸಿಕ್ಕಾಪಟ್ಟೆ ಹಿಟ್‌ ಆಗಿತ್ತು. ಸಿನಿಮಾದಲ್ಲಿ ನಾಯಕ ಪೊಲೀಸರ ಕಣ್ಣು ತಪ್ಪಿಸೋಕೆ ಏನೆಲ್ಲಾ ಮಾಡ್ತಿದ್ದ ಅನ್ನೋದೇ ಹೈಲೈಟ್‌. ಹಾಲಿನ ಟ್ಯಾಂಕರ್‌ನ ನಾಜೂಕಾಗಿ ಮಾರ್ಪಾಡು ಮಾಡಿ, ಅದರಲ್ಲಿ ರಕ್ತ ಚಂದನ ಸಾಗಾಣಿಕೆ. ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರನ್ನ ಯಾಮಾರಿಸೋ ರೋಚಕ ಸೀನ್‌ಗಳಿವು. ಸಿನಿಮಾ ಬಿಡಿ. ಈ ಸಿನಿಮಾವನ್ನೂ ಮೀರಿಸುವ ಹಾಗೆ ಇಲ್ಲೊಂದು ವಾಹನ ರೆಡಿಯಾಗಿತ್ತು. ಐಸುಜು ಡಿಮ್ಯಾಕ್ಸ್ ಕಂಪನಿಯ ವಾಹನ ಯಾವ ರೇಂಜ್‌ನಲ್ಲಿ ಬದಲಾಗಿತ್ತು ಅಂದ್ರೆ ಯಾರಿಗೂ ಗೊತ್ತೇ ಆಗ್ತಿರಲಿಲ್ಲ. ಗೂಡ್ಸ್‌ ತುಂಬೋ ಕಂಪಾರ್ಟ್‌ಮೆಂಟ್‌ನ ಕೆಳ ಭಾಗದಲ್ಲಿ ಡ್ರಾವರ್‌ ರೀತಿಯ ಬಾಕ್ಸ್ ಒಂದನ್ನ ಫಿಕ್ಸ್ ಮಾಡಲಾಗಿತ್ತು.

ಈ ವಾಹನ ಬೆಂಗಳೂರಿಗೆ ಬರ್ತಾ ಇದ್ದಿದ್ದು ಆಂಧ್ರ ಒಡಿಶಾ ಗಡಿಭಾಗದಿಂದ. ವೈಜಾಗ್‌ ವಿಶಾಖಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಬರ್ತಿದ್ದ ಈ ವಾಹನ ಹೋಗುವಾಗ ಕೋಟಿ ಕೋಟಿ ಹಣ ತೆಗೆದುಕೊಂಡು ಹೋಗ್ತಿತ್ತು. ಇಡೀ ಬೆಂಗಳೂರಲ್ಲಿ ನಶಾ ಹೀ ನಶಾ.. ಬೆಂಗಳೂರು ಮಾತ್ರವಲ್ಲಾ… ಕೇರಳ ತಮಿಳುನಾಡು ಮಹಾರಾಷ್ಟ್ರ ಹೀಗೆ ವಿವಿಧ ರಾಜ್ಯಗಳಿಗೂ ಈ ವಾಹನ ಹೋಗ್ತಿತ್ತು.

ಈ ರಹಸ್ಯ ಬಾಕ್ಸ್‌ನಲ್ಲಿ ಇವರು ಸಾಗಿಸ್ತಾ ಇದ್ದಿದ್ದು 1500 ಕೆಜಿ ಗಾಂಜಾ. ಇವರು ಆಂಧ್ರ ಪೊಲೀಸರಿಗೆ ವಂಚಿಸಿ ಬೆಂಗಳೂರಿಗೆ ಗಾಂಜಾ ಸಪ್ಲೇ ಮಾಡ್ತಿದ್ರು. ಏನದು ಮಾರು ವೇಷದ ರಹಸ್ಯ. ಕೆಲ ದಿನಗಳ ಹಿಂದಿನ ಕತೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಲೋಕಲ್‌ ಆಗಿ ಗಾಂಜಾ ಮಾರಾಟ ಮಾಡ್ತಿದ್ದ ಆಸಾಮಿಯೊಬ್ಬನನ್ನ ಹಿಡಿದು ತಂದಿದ್ದಾರೆ. ಆ ನರಿಯ ಹೆಸರು ಸಲ್ಮಾನ್‌. ಗಾಂಜಾ ಎಲ್ಲಿಂದ ಬಂತು ಅಂತಾ ತನಿಖೆಯಾಗೋದಿಲ್ಲ ಅನ್ನೋ ಮಾತು ಆಗಾಗ ಕೇಳಿ ಬರ್ತಾನೇ ಇತ್ತು. ಹೀಗಾಗಿ ಪೊಲೀಸರು ಮೂಲಕ್ಕೇ ಕೈ ಹಾಕೋಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಮೂವರು ಅರೆಸ್ಟ್, 12 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಸಣ್ಣ ಪ್ರಮಾಣದಲ್ಲಿ ಗಾಂಜಾ ಮಾರ್ತಾ ಇದ್ದ ಸಲ್ಮಾನ್‌ನನ್ನ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆೆ ವೇಳೆ ಈತ ತೋರಿಸಿದ್ದು ಆಂಧ್ರ ಒಡಿಶಾ ಗಡಿಯ ಕಾಡುಗಳನ್ನ ಸಾವಿರ ಸಾವಿರ ಕೆಜಿ ಗಾಂಜಾ ಬರುತ್ತೆ. ದೊಡ್ಡ ಗಾಡಿಯಲ್ಲಿ ರಹಸ್ಯವಾಗಿ ಬರುತ್ತೆ. ಯಾರಿಗೂ ಅನುಮಾನ ಬರೋದಿಲ್ಲ ಅಂತಾ ಗೊತ್ತಾಗ್ತಿದ್ದಂತೆ ಸಿಸಿಬಿ ಪೊಲೀಸರ ತಂಡವೊಂದು ಸೀದಾ ಆಂಧ್ರಪ್ರದೇಶಕ್ಕೆ ಹೊರಟಿದೆ. ವಿಶಾಖಪಟ್ಟಣದಲ್ಲಿ ಮಾರು ವೇಷದಲ್ಲಿ ಗ್ಯಾಂಗ್‌ನ ಲೀಡರ್‌ಗಳ ಮಾಹಿತಿ ತೆಗೆಯತೊಡಗಿದ್ದಾರೆ. ಆದರೆ ಎರಡು ವಾರಗಳ ಕಾದ್ರೂ ಸಿಕ್ಕಿಲ್ಲ.

ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಅಂತಾ ವಾಪಸ್‌ ಬಂದಿದ್ದಾರೆ. ವಾರ ಗ್ಯಾಪ್‌ ಕೊಟ್ಟು ಇನ್ನೊಂದು ತಂಡ ಹೋಗಿದೆ. ಪೊಲೀಸರು ಅಂತಾ ಹೇಳದೇ ನಾವು ಗಾಂಜಾ ಮಾರಾಟಗಾರರು. ನಮಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಬೇಕು ಅಂತೇಳಿದ್ದಾರೆ. ವ್ಯವಹಾರಕ್ಕೆ ಕರೆದಿದ್ದಾರೆ. ಆರು ದಿನಗಳ ಸತಾಯಿಸಿ ಕೊನೆಗೂ ಗಾಂಜಾ ಕೊಡೋಕೆ ಒಪ್ಪಿದ್ದಾರೆ. ಹೀಗೆ ಒಪ್ಪಿಕೊಂಡವರು ಇಬ್ಬರು. ಒಬ್ಬಾತ ರಾಜಸ್ಥಾನ ಮೂಲದ ಚಂದ್ರಭಾನ್ ಬಿಷ್ಣೋಯಿ. ಇನ್ನೊಬ್ಬ ಆಂಧ್ರಪ್ರದೇಶ ಮೂಲದ ಲಕ್ಷ್ಮಿ ಮೋಹನ್ ದಾಸ್.

ರಾಜಸ್ಥಾನ ಮೂಲದ ಚಂದ್ರಭಾನ್ ಬಿಷ್ಣೋಯಿ ಲಕ್ಷ್ಮಿ ಮೋಹನ್‌ ದಾಸ್‌ ಕರ್ನಾಟಕ ಕೇರಳ ತಮಿಳುನಾಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ಗಾಂಜಾ ಸಪ್ಲೇ ಮಾಡ್ತಿದ್ರು. ಲೋಕಲ್‌ ಪೆಡ್ಲರ್‌ಗಳಿಗೆ ಕ್ವಿಟಾಂಲ್​ ಟನ್ ಲೆಕ್ಕದಲ್ಲಿ ಸಪ್ಲೇ ಮಾಡ್ತಿದ್ರು. ಇವರು ಮಾಡ್ತಾ ಇದ್ದಿದ್ದನ್ನ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ರು. ಅಂದಹಾಗೆ ಇವರು ಗಾಂಜಾ ಪಡೀತಾ ಇದ್ದಿದ್ದು ಬಿಡಿಶಾ ಆಂಧ್ರ ಗಡಿಭಾಗದ ಕಾಡುಗಳಿಂದ. ಹೀಗೆ ಅಕ್ರಮವಾಗಿ ತರ್ತಾ ಇದ್ದ ಗಾಂಜಾವನ್ನ ಗೋಡೋನ್‌ ಒಂದರಲ್ಲಿ ಸಂಗ್ರಹಿಸುತ್ತಿದ್ರು. ಹೀಗೆ ಸಂಗ್ರಹಿಟ್ಟ ಗಾಂಜಾ ಸೊಪ್ಪನ್ನ ನೀಟಾಗಿ ಪ್ಯಾಕ್‌ ಮಾಡಲಾಗ್ತಿತ್ತು.

ಪ್ಲಾಸ್ಟಿಕ್‌ಗಳಲ್ಲಿ ಪ್ಯಾಕ್‌ ಮಾಡಿ ಅದಕ್ಕೆ ಟೇಪ್‌ ಅಂಟಿಸಲಾಗ್ತಿತ್ತು. ನಂತ್ರ ಈ ವಾಹನ. ಅಂದಹಾಗೆ ಈ ವಾಹನವನ್ನ ವಿಶೇಷವಾಗಿ ಗಾಂಜಾ ಸಾಗಾಟಕ್ಕೆ ಅಂತಲೇ ರೆಡಿ ಮಾಡಿಸಲಾಗಿತ್ತು. ಕೆಳಗಡೆ ವಿಶೇಷವಾಗಿ ನಿರ್ಮಿಸಲಾಗಿದ್ದ ಟ್ರೇನಲ್ಲಿ ನೀಟಾಗಿ ಗಾಂಜಾ ಜೋಡಿಸಿಡಲಾಗ್ತಿತ್ತು. ನೀಟಾಗಿ ಜೋಡಿಸಿದ ಬಳಿಕ ವಾಹನದ ಮೇಲ್ಭಾಗದಲ್ಲಿ ಆನ್ ಲೈನ್‌ ಶಾಪಿಂಗ್‌ ಗೂಡ್ಸ್‌ಗಳನ್ನ ಹಾಕಲಾಗ್ತಿತ್ತು.

ಪೊಲೀಸರು ಅಡ್ಡ ಹಾಕಿದಾಗ ಅದನ್ನ ನೋಡಿ ಬಿಟ್ಟು ಕಳಿಸ್ತಿದ್ರು. ಹಿಂದೊಮ್ಮೆ ಗಾಂಜಾ ಕಾಡಿನಿಂದ ತರುವಾಗ ಆಂಧ್ರ ಪೊಲೀಸರೇ ಇವರಿಗೆ ಸಹಾಯ ಮಾಡಿದ್ರು. ಆ ದಿನ ಮಳೆ ಇದ್ದ ಕಾರಣ ಈ ವಾಹನ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಆಂಧ್ರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಪಾಪಿಗಳು ಪ್ಲಿಪ್ ಕಾರ್ಟ್ ಗೂಡ್ಸ್ ಸರ್ ಅಂತಾ ಕಾಟನ್ ಬಾಕ್ಸ್ ತೋರಿಸಿ ಕಥೆ ಹೇಳಿದ್ದಾರೆ. ನೋಡಿ ನಂಬಿದ ಪೊಲೀಸರು ತಾವೇ ಕ್ರೇನ್‌ ತರಿಸಿ ವಾಹನ ಮೇಲೆತ್ತಿಸಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಹೆಚ್​ಎಸ್​ಆರ್​​ ಲೇಔಟ್​ನಿಂದ ಅಪಹರಣಕ್ಕೀಡಾಗಿದ್ದವರ ರಕ್ಷಣೆ: ನಾಲ್ವರು ವಶಕ್ಕೆ

ಹೀಗೆ ಹಲವು ಬಾರಿ ಬೆಂಗಳೂರಿಗೆ ಕ್ವಿಂಟಾಲ್‌ಗಟ್ಟಲೇ ಗಾಂಜಾ ತಂದಿದ್ದ ಪಾಪಿಗಳು ಇಲ್ಲಿನ ಪೆಡ್ಲರ್‌ಗಳಿಗೆ ಕೊಟ್ಟಿದ್ರು. ಇನ್ನು ಈ ಗೂಡ್ಸ್ ವಾಹನ ಮೂಲತಃ ರಾಜಸ್ಥಾನ ರಿಜಿಸ್ಟ್ರೇಷನ್‌ ಹೊಂದಿರೋ ವಾಹನ. ಆದ್ರೆ ಇದಕ್ಕೆ ಬೇರೆ ಬೇರೆ ನಂಬರ್‌ ಪ್ಲೇಟ್‌ಗಳನ್ನ ಹಾಕಿಕೊಂಡು ಓಡಿಸ್ತಾ ಇದ್ರು. ಹಾಗಾದ್ರೆ ಹೇಗೆಲ್ಲಾ ಸಪ್ಲೇ ಆಗ್ತಿತ್ತು ಅನ್ನೋದು ಮತ್ತಷ್ಟು ರೋಚಕ. ದೊಡ್ಡ ವಾಹನದಲ್ಲಿ ಸಾವಿರ ಸಾವಿರ ಕೆಜಿ ಗಾಂಜಾ ತರ್ತಾ ಇದ್ದ ಪಾಪಿಗಳು. ಮುಂದೆ ಹೋಗ್ತಾ ಹೋಗ್ತಾ ಇದನ್ನ ವಿತರಿಸ್ತಾ ಇದ್ರು.

ಮುಂದೆ ಇದು ಚಿಕ್ಕ ಚಿಕ್ಕ ವಾಹನಗಳಲ್ಲಿ ತಲುಪಬೇಕಾದವರಿಗೆ ತಲುಪುತ್ತಿತ್ತು. ಆ ಬಳಿಕ ಚಿಕ್ಕ ಪುಟ್ಟ ಪೆಡ್ಲರ್‌ಗಳು ಕೆಜಿ ಕೆಜೆ ಖರೀದಿಸಿ ಅದನ್ನ ಬೆಂಗಳೂರಿನಲ್ಲಿ ಮಾರಾಟ ಮಾಡ್ತಾ ಇದ್ರು. ಪ್ರಮುಖ ಆರೋಪಿ ಚಂದ್ರಭಾನ್ ಬಿಷ್ಣೋಯಿ ಎಂಬಿಎ ಪದವೀಧರ. ಲಕ್ಷ್ಮಿ ಮೋಹನ್‌ ದಾಸ್‌ ಬಿಎ ಮಾಡಿಕೊಂಡಿದ್ದಾತ. ಇಬ್ಬರೂ ಗಾಂಜಾ ಮಾರಾಟ ಮಾಡ್ತಾ ಕೋಟಿ ಕೋಟಿ ಹಣ ಗಳಿಸುತ್ತಿದ್ರು. ಈ ಹಿಂದೆ ಹಲವು ಬಾರಿ ಇದೇ ರೀತಿ ಈ ಇಬ್ಬರು ಬೆಂಗಳೂರಿಗೆ ಟನ್‌ಗಟ್ಟಲೇ ಗಾಂಜಾ ತಂದು ಸಪ್ಲೇ ಮಾಡಿದ್ದು ಪೊಲೀಸರಿಗೆ ಗೊತ್ತಾಗಿದೆ.

ಸದ್ಯ ಈ ಇಬ್ಬರನ್ನೂ ಅರೆಸ್ಟ್ ಮಾಡಿದ್ದ ಪೊಲೀಸರು ಆಂಧ್ರದ ವಿವಿಧ ಪ್ರದೇಶಗಳಿಗೆ ಕರೆದೊಯ್ದಿದ್ದಾರೆ. ಸರಿ ಸುಮಾರು 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸದ್ಯ ಬೆಂಗಳೂರಿಗೆ ಇವರು ತರ್ತಿದ್ದ ಟನ್‌ಗಟ್ಟಲೇ ಗಾಂಜಾ ಸಪ್ಲೇ ನಿಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ