ಭೀಮನ ಅಮವಾಸ್ಯೆಯಂದೇ ಹರಿದ ನೆತ್ತರು, ಹೆಂಡ್ತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ

ಸಪ್ತಪದಿ ತುಳಿದು ಐದು ತಿಂಗಳು ಆಗಿತ್ತು ಅಷ್ಟೇ. ಆದ್ರೆ, ಭೀಮನ ಅಮಾವಾಸ್ಯೆಯಂದು ಯುವಕನ್ನು ಆತನ ಹೆಂಡ್ತಿ ಕಣ್ಣೆದುರಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಭೀಮನ ಅಮವಾಸ್ಯೆಯಂದೇ ಹರಿದ ನೆತ್ತರು, ಹೆಂಡ್ತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 17, 2023 | 1:34 PM

ಬೆಳಗಾವಿ, (ಜುಲೈ 17): ಹೆಂಡತಿ ಕಣ್ಣೆದುರಲ್ಲೇ ಗಂಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ನಡೆದಿದೆ. ಶಂಕರ್ ಜಗಮುತ್ತಿ(25) ಹತ್ಯೆಯಾದ ವ್ಯಕ್ತಿ. ಐದು ತಿಂಗಳ ಹಿಂದಷ್ಟೆ ಪ್ರಿಯಾಂಕ ಎಂಬ ಮಹಿಳೆ ಜತೆಗೆ ಮದುವೆಯಾಗಿದ್ದ ಶಂಕರ್, ಇಂದು (ಜುಲೈ 17) ಅಮಾವಾಸ್ಯೆ ಹಿನ್ನೆಲೆ ಇಂದು(ಜುಲೈ 17) ದೇವಸ್ಥಾನಕ್ಕೆ ಗಂಡ ಹೆಂಡತಿ ಜತೆಯಾಗಿ ಬಂದಿದ್ದರು. ಆದ್ರೆ, ದುರ್ವೈವ ಬನಸಿದ್ದೇಶ್ವರ ದೇವಸ್ಥಾನ ಆವರಣದಲ್ಲೇ ಹೆಂಡತಿ ಎದುರು ಶಂಕರ್​ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಅಮವಾಸ್ಯೆ ಹಿನ್ನೆಲೆಯಲ್ಲಿ ಶಂಕರ್ ಜಗಮುತ್ತಿ ಹೆಂಡತಿ ಜೊತೆ ದೇವಸ್ಥಾನಕ್ಕೆ ಹೋಗಿದ್ದರು. ಆದ್ರೆ, ದೇಗುಲ ಪ್ರವೇಶ ಮಾಡುತ್ತಿದ್ದಂತೆಯೇ ದುಷ್ಕರ್ಮಿಗಳು ಹಿಂದಿನಿಂದ ಬಂದು ಮಾರಾಕಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಸಪ್ತಪದಿ ತುಳಿದು ಕೇವಲ ಐದು ತಿಂಗಳು ಆಗಿದ್ದು, ಇನ್ನೂ ಸಂಸಾರದ ಬಂಡಿ ಈಗ ತಾನೇ ಶುರುವಾಗಿತ್ತು. ಅಷ್ಟರಾಗಲೇ ದುಷ್ಕರ್ಮಿಗಳು ಅಂತ್ಯ ಮಾಡಿದ್ದಾರೆ. ಆದ್ರೆ, ಕೊಲೆ ಕಾರಣವೇನು? ಕೊಲೆ ಮಾಡಿದವರ್ಯಾರು? ಎನ್ನುವು ಮಾತ್ರ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಭೀಮನ ಅಮಾವಾಸ್ಯೆಯಂದು ಹೆಂಡತಿ ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಆದ್ರೆ, 5 ತಿಂಗಳ ಹಿಂದೆ ಅಷ್ಟೇ ಮದ್ವೆಯಾಗಿದ್ದ ಈ ಮಹಿಳೆ ಭೀಮನ ಅಮಾವಾಸ್ಯೆ ದಿನದಂದೇ ತನ್ನ ಕಣ್ಣೆದುರಲ್ಲೇ ಗಂಡನನ್ನು ಕಳೆದುಕೊಂಡಿರುವುದು ದುರಂತ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್