Crime News: ಕುಡುಕ ಪತಿಯ ಕಾಟ ತಾಳಲಾರದೆ ಕತ್ತು ಹಿಚುಕಿ ಪತ್ನಿಯಿಂದಲೇ ಪತಿಯ ಕೊಲೆ!

| Updated By: Rakesh Nayak Manchi

Updated on: Jun 09, 2022 | 4:10 PM

ಮದ್ಯ ವ್ಯಸನಿ ಪತಿಯ ಕಾಟ ಸಹಿಸಿಕೊಳ್ಳಲಾಗಿದೆ ಪತ್ನಿಯೇ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ತಣ್ಣಿಮಾನಿ ಗ್ರಾಮದಲ್ಲಿ ನಡೆದಿದೆ. ಕೃತ್ಯ ನಡೆಸಲು ಕೊಲೆಯಾದ ವ್ಯಕ್ತಿಯ ತಂದೆ ಕೂಡ ಸಾಥ್ ನೀಡಿದ್ದು, ವಿಚಾರಣೆ ವೇಳೆ ಬಹಿರಂಗಗೊಂಡಿದೆ.

Crime News: ಕುಡುಕ ಪತಿಯ ಕಾಟ ತಾಳಲಾರದೆ ಕತ್ತು ಹಿಚುಕಿ ಪತ್ನಿಯಿಂದಲೇ ಪತಿಯ ಕೊಲೆ!
ಸಾಂಕೇತಿಕ ಚಿತ್ರ
Follow us on

ಕೊಡಗು: ಮದ್ಯ ವ್ಯಸನಿ ಪತಿಯ ಕಾಟ ಸಹಿಸಿಕೊಳ್ಳಲಾಗಿದೆ ಪತ್ನಿಯೇ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಜಿಲ್ಲೆ ಮಡಿಕೇರಿ ತಾಲ್ಲೂಕಿನ ತಣ್ಣಿಮಾನಿ ಗ್ರಾಮದಲ್ಲಿ  ನಡೆದಿದೆ. ಡ್ಯಾನಿ (30) ಕೊಲೆಯಾದ ವ್ಯಕ್ತಿ. ಡ್ಯಾನಿ ಪತ್ನಿ ಅನು ಪ್ರಿಯಾ (26) ಕೊಲೆ ಮಾಡಿದ ಮಹಿಳೆ. ಕುಡುಕ ಪತಿಯ ಕಾಟ ತಾಳಲಾರದೆ ಡ್ಯಾನಿಯನ್ನು ಅನುಪ್ರಿಯಾ ಕೊಲೆ ಮಾಡಿದ್ದು, ಈ ಕೃತ್ಯಕ್ಕೆ ಡ್ಯಾನಿಯ ತಂದೆ ಸುಗುಣ(60) ಕೂಡ ಕೈಜೋಡಿಸಿದ್ದಾರೆ. ಪದವೀಧರೆಯಾಗಿರುವ ಅನುಪ್ರಿಯಾ, ಅಂಗನವಾಡಿ ಕಾರ್ಯಕರ್ತೆಯಾಗಿದ್ದಳು. ಪತಿಯ ಘಟನೆ ಮುನ್ನ ಸಾಕ್ಷಿಯ ನಾಶ ಹೇಗೆಂದು ಗೂಗಲ್ ಮಾಡಿದ್ದಳು. ಕೊಲೆ ನಂತರ ಸಹಜ ಸಾವೆಂದು ಬಿಂಬಿಸಿದ್ದಳು. ಈ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಅನುಪ್ರಿಯಾ ಬಾಯಿಬಿಟ್ಟಿದ್ದಾಳೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಳೆ ವಿದ್ಯಾರ್ಥಿಗೆ ಸರ್ಕಾರಿ ಶಾಲೆ ದೈಹಿಕ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ!

ಕ್ಷುಲ್ಲಕ ಕಾರಣಕ್ಕೆ ಬಾಲಕನಿಗೆ ಚಾಕು ಇರಿತ

ಕಲಬುರಗಿ: ಚಾಕುವಿನಿಂದ ಇರಿದು ಬಾಲಕನ ಹತ್ಯೆ ಮಾಡಿದ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಮಾಶಾಳ ಗ್ರಾಮದ ಶಾಮರಾಯ್ ಪರೀಟ್ (16) ಕೊಲೆಯಾದ ಬಾಲಕ. ಘಟನೆ ಸಂಬಂಧ ಅದೇ ಗ್ರಾಮದ ಸಚಿನ್ ಎಂಬ ಯುವಕನ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಠಾಣಾ ಪೊಲೀಸರು, ಸಚಿನ್ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.

ಕಳೆದ ಹದಿನೈದು ದಿನದ ಹಿಂದೆ ಇಬ್ಬರ ನಡುವೆ ಕ್ಷುಲಕ ಕಾಣಕ್ಕೆ ಜಗಳ ನಡೆದಿದೆ. ಈ ಜಗಳದಿಂದಾಗಿ ಸಚಿನ್, ಶಾಮರಾಯ್ ವಿರುದ್ಧ ದ್ವೇಷಕ್ಕೆ ಬಿದ್ದಿದ್ದು, ಅದರಂತೆ ಕೊಲೆ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಸಚಿನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಆತನ ಬಂಧನದ ನಂತರ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

ಇದನ್ನೂ ಓದಿ: ಶಂಕಿತ ಉಗ್ರ ತಾಲಿಬ್ ಬಂಧನ ಪ್ರಕರಣ: ವಿಎಚ್​ಪಿಯಿಂದ ಪೊಲೀಸ್ ಆಯುಕ್ತರಿಗೆ ದೂರು

ನೇಣಿಗೆ ಶರಣಾದ ವ್ಯಕ್ತಿ

ರಾಯಚೂರು:  ಕೌಟುಂಬಿಕ ಕಲಹ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಕನ್ನಾಪುರುಹಟ್ಟಿಯ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಹುಲಗಪ್ಪ(35) ಆತ್ಮಹತ್ಯೆ ಮಾಡಿಕೊಂಡವರು. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿವಾಸಿಯಾಗಿರುವ ಹುಲಗಪ್ಪ, ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Thu, 9 June 22