ಬೆಳಗಾವಿ: ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ (Kannada Rajyotsava) ಮೆರವಣಿಗೆಯಲ್ಲಿ ಗುಂಪು ಘರ್ಷಣೆಯಾಗಿದ್ದು, ಈ ವೇಳೆ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂದು(ನ.23) ನಡೆದ ಕನ್ನಡ ರಾಜ್ಯೋತ್ಸವ ಮೆರವಣಿಯಲ್ಲಿ ಯುವಕರ ಗುಂಪುಗಳ ನಡುವೆ ಜಗಳದಲ್ಲಿ ಚೇತನ್ಗೆ ಚಾಕು ಇರಿದಿದ್ದಾರೆ. ಇನ್ನು ಗಲಾಟೆಯಲ್ಲಿ ಅಶೋಕ ಸಿಂಧೂರೆ, ವಿಕಾಸ ಸುಣಗಾರ ಎನ್ನುವವರು ಗಾಯಗೊಂಡಿದ್ದಾರೆ.
ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ತಳ್ಳಿದರು ಎಂಬ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರಗುಗೆ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ಗಲಾಟೆ ಮಧ್ಯೆ ದುಷ್ಕರ್ಮಿಗಳು ಚೇತನ ಹಡಪದ ಎಂಬ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ಮೋಶೀನ್ ಗ್ಯಾಂಗ್ನಿಂದ ಹಲ್ಲೆ ಹಾಗೂ ಚಾಕು ಇರಿದಿರುವ ಆರೋಪ ಕೇಳಿಬಂದಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ