ನರಗುಂದ: ಕಾರು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು
ಕಾರು ತೊಳೆಯಲು ಹೋಗಿದ್ದ ಇಬ್ಬರು ಯುವಕರು ಮಲಪ್ರಭಾ ನದಿಯ ಕಾಲುವೆಯಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಗದಗ: ಕಾರು ತೊಳೆಯಲು ಹೋಗಿದ್ದ ಇಬ್ಬರು ಯುವಕರು (boys) ಮಲಪ್ರಭಾ ನದಿಯ ಕಾಲುವೆಯಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಅರುಣ್ ಪಡೆಸೂರು(25), ಹನುಮಂತ ಮಜ್ಜಿಗೆ(30) ಮೃತರು. ಅಗ್ನಿಶಾಮಕ ಇಲಾಖೆ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ಮಾಡಲಾಗುತ್ತಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಗರದ ಕ್ಲಾಕ್ ಟವರ್ ಬ್ರಿಡ್ಜ್ ಮೇಲೆ ನಡೆದಿದೆ. ವಡಗೂರು ಗ್ರಾಮದ ನಿವಾಸಿ ರಾಕೇಶ್ (28) ಮೃತ ವ್ಯಕ್ತಿ. ಸರ್ಕಾರಿ ಬಸ್ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆಯುತ್ತಿದ್ದ ಗ್ಯಾಂಗ್ ಬಂಧನ
ಬೆಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆಯುತ್ತಿದ್ದ ಗ್ಯಾಂಗ್ ಬಂಧನವಾಗಿದ್ದು, ಬಂಧಿತರಿಂದ 1 ಕೆಜಿ 450 ಗ್ರಾಂ ನಕಲಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅರುಣ್ ರಾಜು, ಸತ್ಯಾನಂದ, ದತ್ತಾತ್ರೇಯ ಬಂಧಿತ ಆರೋಪಿಗಳು. ತಾಮ್ರಕ್ಕೆ ಚಿನ್ನ ಲೇಪಿತ ಆಭರಣವನ್ನು ಗ್ಯಾಂಗ್ ಆಮದು ಮಾಡಿಕೊಳ್ಳುತ್ತಿತ್ತು. ಪ.ಬಂಗಾಳದಿಂದ ಆಭರಣ ಆಮದು ಮಾಡಿಕೊಳ್ಳಿತ್ತಿದ್ದ ಆರೋಪಿಗಳು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡಿತಿದ್ದರು. ಕರ್ನಾಟಕದ ವಿವಿಧೆಡೆ ಸಾಲ ಪಡೆದುಕೊಂಡು ಮರುಪಾವತಿಸಿರಲಿಲ್ಲ. ಗುಜರಾತ್ನಲ್ಲೂ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು ಎನ್ನಲಾಗಿದೆ. 15 ಕೆಜಿಯಷ್ಟು ನಕಲಿ ಚಿನ್ನಾಭರಣವನ್ನು ಆರೋಪಿಗಳು ಅಡವಿಟ್ಟಿದ್ದರು ಎನ್ನಲಾಗಿದೆ.
ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು
ಬೆಂಗಳೂರು: ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಆರ್.ಟಿ.ನಗರದ ಚಿರಾಯು ಆಸ್ಪತ್ರೆಯಲ್ಲಿ ನಡೆದಿದೆ. ಕವಿತಾ(24) ಮೃತ ಮಹಿಳೆ. ಓವರ್ ಡೋಸ್ ಇಂಜೆಕ್ಷನ್, ಮಾತ್ರೆ ನೀಡಿದ್ದೇ ಸಾವಿಗೆ ಕಾರಣವಾಗಿದ್ದ, ಆಸ್ಪತ್ರೆ ವೈದ್ಯರ ವಿರುದ್ಧ ಮೃತ ಕವಿತಾ ಪತಿ ಸುನೀಲ್ ಆರೋಪಿಸುತ್ತಿದ್ದಾರೆ. ಆಸ್ಪತ್ರೆ ಮುಂದೆ ಮೃತಳ ಸಂಬಂಧಿಕರು ಜಮಾಯಿಸಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 7 ತಿಂಗಳ ಹಿಂದೆಯಷ್ಟೇ ಕವಿತಾ-ಸುನೀಲ್ ಮದುವೆ ಆಗಿತ್ತು. ಒಂದು ತಿಂಗಳ ಹಿಂದೆ ಕವಿತಾಳಿಗೆ ಗರ್ಭಪಾತ ಆಗಿತ್ತು. ಬಳಿಕ ಸಣ್ಣಪುಟ್ಟ ಸಮಸ್ಯೆಯಿಂದ ಮೃತ ಕವಿತಾ ಬಳಲುತ್ತಿದ್ದಳು ಎನ್ನಲಾಗುತ್ತಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮತ್ತು ಮಹಿಳೆ ಸಾವು
ತುಮಕೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಹಾಗೂ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ 40 ಮೃತ ದುರ್ದೈವಿ. ವಿದ್ಯುತ್ ತಂತಿ ತಗಲಿ ಹಸು ಒದ್ದಾಡುತ್ತಿದ್ದು, ಅದರನ್ನು ರಕ್ಷಿಸಲು ಹೋದ ಮಹಿಳೆಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಸು ಮೇಯಿಸಲು ಹೋದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




