ಬರ್ತಡೇ ಪಾರ್ಟಿ ವೇಳೆ ರೌಡಿಶೀಟರ್ನಿಂದ ಯುವಕನ ಕೊಲೆ
ಬರ್ತಡೇ ಪಾರ್ಟಿ ವೇಳೆ ರೌಡಿಶೀಟರ್ನಿಂದ ಯುವಕನಿಗೆ ಚಾಕು ಇರಿದಿರುವ ಘಟನೆ ಇಲಿಯಾಸ್ ನಗರದಲ್ಲಿ ನಡೆದಿದೆ. ಮೊಹ್ಮದ್ ಮುಸಾನ್ನ್ನು ಚಾಕುವಿನಿಂದ ಇರಿದು ಹಲ್ಲೆಗೈದ್ದಾನೆ.
ಶಿವಮೊಗ್ಗ: ಬರ್ತಡೇ ಪಾರ್ಟಿ ವೇಳೆ ರೌಡಿಶೀಟರ್ನಿಂದ ಯುವಕನಿಗೆ ಚಾಕು ಇರಿದಿರುವ ಘಟನೆ ಇಲಿಯಾಸ್ ನಗರದಲ್ಲಿ ನಡೆದಿದೆ. ಮೊಹ್ಮದ್ ಮುಸಾನ್ನ್ನು ಚಾಕುವಿನಿಂದ ಇರಿದು ಹಲ್ಲೆಗೈದ್ದಾನೆ. ಟಿಪ್ಪುನಗರದ ನಿವಾಸಿ ಸೈಯದ್ ರಜಾಕ್ ಹುಟ್ಟುಹಬ್ಬದ ಆಚರಣೆಗೆಂದು ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಬಂದಿದ್ದು ಮುಸಾನ್ ವೈಯಕ್ತಿಕ ದ್ವೇಷಕ್ಕೆ ಗಲಾಟೆ ಮಾಡಿಕೊಂಡು ಚಾಕು ಇರಿದಿರುವ ಎಂದು ಹೇಳಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.
ಶವವನ್ನು ರೈಲ್ವೆ ಟ್ರ್ಯಾಕ್ ಮೇಲೆ ಎಸೆಯಲು ಬಂದ ಹಂತಕರ ಬಂಧನ
ಹಾಸನ: ಕೊಲೆ ಮಾಡಿ ಶವವನ್ನು ರೈಲ್ವೆ ಟ್ರ್ಯಾಕ್ ಮೇಲೆ ಎಸೆಯಲು ಬಂದ ಹಂತಕರು ಪೊಲೀಸರು ಬಂಧಿಸಿದ್ದಾರೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ರೈಲ್ವೆ ಟ್ರ್ಯಾಕ್ನಲ್ಲಿ ಘಟನೆ ನಡೆದಿದೆ. ಶವವನ್ನು ರೈಲ್ವೆ ಟ್ರ್ಯಾಕ್ ಮೇಲೆ ಎಸೆಯಲು ಬಂದ ಪಲ್ಟಿಯಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಶವದ ಸಮೇತ ಪಲ್ಟಿಯಾದ ಬುಲೆರೊ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ 3 ಆರೋಪಿಗಳ ಬಂಧಿಸಲಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆ ಮಾಡಿ ರೈಲ್ವೆ ಹಳಿ ಮೇಳೆ ಶವ ಎಸೆಯಲು ಬಂದ ಹಂತಕರನ್ನು ಪೊಲೀಸರು ವಶಪಡಿಸಿಕೊಂಡಿದ್ದು. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು. ರಾಷ್ಟ್ರೀಯ ಹೆದ್ದಾರಿ 75ರ ಡಾಬಾ ಒಂದರಲ್ಲಿ ಕೆಲಸ ಮಾಡೋ ನೌಕರರಿಂದ ಕೃತ್ಯ ಮಾಡಲಾಗಿದೆ ಮತ್ತು ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಪರಿಶೀಲನೆ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 4:24 pm, Tue, 11 October 22