ಟೋಯಿಂಗ್ ಮಾಡಿದ್ದ ವಾಹನ ಬಿಡಲು 800 ರೂ ಲಂಚಕ್ಕೆ ಬೇಡಿಕೆ; ಟೋಯಿಂಗ್ ಸಿಬ್ಬಂದಿ ವಶಕ್ಕೆ

| Updated By: guruganesh bhat

Updated on: Sep 28, 2021 | 7:47 PM

ಟೋಯಿಂಗ್ ಸಿಬ್ಬಂದಿ ಶುಲ್ಕ ಕಟ್ಟಿದರೆ 1,500 ರೂಪಾಯಿ ಆಗುತ್ತದೆ. ನಮಗೆ 800 ರೂ. ಲಂಚ ನೀಡಿದರೆ ಬಿಡುವುದಾಗಿ ಹೇಳಿದ್ದ.

ಟೋಯಿಂಗ್ ಮಾಡಿದ್ದ ವಾಹನ ಬಿಡಲು 800 ರೂ ಲಂಚಕ್ಕೆ ಬೇಡಿಕೆ; ಟೋಯಿಂಗ್ ಸಿಬ್ಬಂದಿ ವಶಕ್ಕೆ
ಭ್ರಷ್ಟಾಚಾರ ನಿಗ್ರಹ ದಳ
Follow us on

ಬೆಂಗಳೂರು: ಜಯನಗರ ಸಂಚಾರಿ ಠಾಣೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಟೋಯಿಂಗ್ ಮಾಡಿದ್ದ ದ್ವಿಚಕ್ರ ವಾಹನ ಬಿಡುವುದಕ್ಕೆ 800 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಟೋಯಿಂಗ್ ಸಿಬ್ಬಂದಿ ಸಿದ್ದೇಗೌಡ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ. ಸೆಪ್ಟೆಂಬರ್ 25ರಂದು ಜೆ.ಪಿ.ನಗರದಲ್ಲಿ ನಿಲ್ಲಿಸಿದ್ದ ಬೈಕ್ ಟೋಯಿಂಗ್ ಮಾಡಲಾಗಿತ್ತು. ಠಾಣೆಗೆ ಹೋಗಿ ವಿಚಾರಿಸಿದಾಗ ಆರೋಪಿ 800 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಟೋಯಿಂಗ್ ಸಿಬ್ಬಂದಿ ಶುಲ್ಕ ಕಟ್ಟಿದರೆ 1,500 ರೂಪಾಯಿ ಆಗುತ್ತದೆ. ನಮಗೆ 800 ರೂ. ಲಂಚ ನೀಡಿದರೆ ಬಿಡುವುದಾಗಿ ಹೇಳಿದ್ದ. ಸದ್ಯ ಟೋಯಿಂಗ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರದ ಬಗ್ಗೆ ತನಿಖೆ ನಡೆಸಲಿದೆ.

ಮಂಗಳೂರಲ್ಲಿ ಹಾಡಹಗಲೆ ದರೋಡೆ
ಮಂಗಳೂರು: ಹಾಡಹಗಲೇ ಬ್ಯಾಟ್​ನಿಂದ ಹಲ್ಲೆಗೈದ ದುಷ್ಕರ್ಮಿಗಳು ₹4.2 ಲಕ್ಷ ದರೋಡೆ ಮಾಡಿದ ಘಟನೆಯೊಂದು ಮಂಗಳೂರಿನ ಚಿಲಿಂಬಿ ಎಂಬಲ್ಲಿ ನಡೆದಿದೆ. ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿದ್ದಾಗ ಅಡ್ಡಗಟ್ಟಿ ದರೋಡೆ ನಡೆಸಲಾಗಿದ್ದು, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಬೋಜಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಬೇಕಾಬಿಟ್ಟಿ ಟೋಯಿಂಗ್ ಮಾಡುವಂತಿಲ್ಲ; ಇಲ್ಲಿದೆ ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ಅಧಿಕೃತ ನಿಯಮಗಳು

ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ಮಿಟೂ ಆರೋಪ ಮಾಡಿದ್ದ ಲೀನಾ ಮಣಿಮೆಕಲೈ; ಪ್ರಕರಣದ ಇತ್ತೀಚಿನ ಮಾಹಿತಿ ಇಲ್ಲಿದೆ

(ACB Detained towing vehicle crew for 800 Rs bribe demanded to leave the vehicle)