AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eagleton Resort: ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಡ್ರಗ್ಸ್ ತಾಣವಾಗಿದ್ದ ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ

ಆರೋಪಿ ಜಾವೇದ್ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ವಿಲ್ಲಾದಲ್ಲಿ ರುಸ್ತುಂ ಪುರ್ ಹೈಡ್ರೋ ಗಾಂಜಾ ಬೆಳೆಸುತ್ತಿದ್ದ. ಈತ ಹೈಡ್ರೋ ಗಾಂಜಾ ಬೆಳೆಯಲೆಂದೆ 36 ಸಾವಿರಕ್ಕೆ ವಿಲ್ಲಾ ಬಾಡಿಗೆಗೆ ಪಡೆದಿದ್ದ.

Eagleton Resort: ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಡ್ರಗ್ಸ್ ತಾಣವಾಗಿದ್ದ ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ
ಈಗಲ್ಟನ್ ರೆಸಾರ್ಟ್
TV9 Web
| Updated By: ಆಯೇಷಾ ಬಾನು|

Updated on: Sep 28, 2021 | 9:24 AM

Share

ಬೆಂಗಳೂರು: ಡಿ.ಜೆ ಹಳ್ಳಿಯ ಡ್ರಗ್ಸ್ ಫ್ಯಾಕ್ಟರಿ ಭೇದಿಸಿದ್ದ ಸಿಸಿಬಿ ಅಧಿಕಾರಿಗಳು ಮತ್ತೊಂದು ಡ್ರಗ್ಸ್ ಜಾಲದ ಗ್ಯಾಂಗ್ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ನಡೆಸಿ ಇಬ್ಬರು ಇರಾನಿ ವಿದೇಶಿ ಪ್ರಜೆ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಇದುವರೆಗೂ ವಿದೇಶಗಳಿಂದ ಮಾತ್ರ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಆದ್ರೀಗ ಈಗಲ್ಟನ್ ರೆಸಾರ್ಟ್ ನ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ನನ್ನು ಸಿಸಿಬಿ ಬಂಧಿಸಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ.

ವಿದೇಶದಿಂದ ಹೈಬ್ರೀಡ್ ಗಾಂಜಾ ಬೀಜಗಳ ತಂದು ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಈ ಖತರ್ನಾಕ್ ಗ್ಯಾಂಗ್ನ ಸಿಸಿಬಿ ಭೇದಿಸಿದೆ. ಇಬ್ಬರು ಇರಾನಿ ದೇಶದ ಪ್ರಜೆಗಳು ಸೇರಿ ಒಟ್ಟು ನಾಲ್ವರನ್ನ ಬಂಧಿಸಲಾಗಿದೆ. ಆರೋಪಿಗಳಿಂದ ಬರೋಬ್ಬರಿ 150 ಹೈಡ್ರೋ ಗಾಂಜಾ ಗಿಡಗಳು, ಎರಡು ಕೋಟಿಗೂ ಅಧಿಕ ಮೌಲ್ಯದ 9 ಕೆ.ಜಿ‌. ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಆರೋಪಿ ಜಾವೇದ್ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ವಿಲ್ಲಾದಲ್ಲಿ ರುಸ್ತುಂ ಪುರ್ ಹೈಡ್ರೋ ಗಾಂಜಾ ಬೆಳೆಸುತ್ತಿದ್ದ. ಈತ ಹೈಡ್ರೋ ಗಾಂಜಾ ಬೆಳೆಯಲೆಂದೆ 36 ಸಾವಿರಕ್ಕೆ ವಿಲ್ಲಾ ಬಾಡಿಗೆಗೆ ಪಡೆದಿದ್ದ. ಕಳೆದ ಒಂದೂವರೆ ವರ್ಷದಿಂದ ವಿಲ್ಲಾದ ರೂಮ್, ಟೆರೆಸ್ ನಲ್ಲಿ ಗಾಂಜಾ ಗಿಡ ಬೆಳಿತಿದ್ದ. ಯುರೋಪ್ ನಿಂದ ಹೈಬ್ರೀಡ್ ಗಾಂಜಾ ಬೀಜಗಳನ್ನ ತರಿಸಿಕೊಂಡು ಬಳಿಕ ವ್ಯವಸ್ಥಿತವಾಗಿ ಗಾಂಜಾ ಬೀಜಗಳನ್ನ ಪ್ಲಾಂಟ್ ಮಾಡಿ ಬೆಳಿತಿದ್ದ.

ವಿದ್ಯಾರ್ಥಿಯಾಗಿ ಬಂದು ಅಕ್ರಮ ಎಜುಕೇಷನ್ ಪಡೆಯುವ ಸಲುವಾಗಿ ವಿದ್ಯಾರ್ಥಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಜಾವೇದ್ ವೆಬ್ ಸೈಟ್ ಮೂಲಕ ಹೈಡ್ರೋ ಗಾಂಜಾ ಗಿಡ ಬೆಳೆಯುವ ಬಗ್ಗೆ ಮಾಹಿತಿ ಪಡೆದಿದ್ದ. ಮೊದಲು ಬಾಣಸವಾಡಿ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ಗಾಂಜಾ ಗಿಡ ಬೆಳೆದಿದ್ದ. ಅಲ್ಲಿ ಸಕ್ಸಸ್ ಆದ ಬಳಿಕ ನಗರದ ಹೊರವಲಯದ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಿದ್ದ.

ಆ ಬಳಿಕ ಈಗಲ್ ಟನ್ ರೆಸಾರ್ಟ್ ವಿಲ್ಲಾಗೆ ಒಂದೂವರೆ ವರ್ಷದ ಹಿಂದೆಯಷ್ಟೇ ಶಿಫ್ಟ್ ಆಗಿದ್ದ. ನಗರದಲ್ಲಿ ಪೊಲೀಸರಿಂದ ಡ್ರಗ್ ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಹಿನ್ನೆಲೆ ನಗರದ ಹೊರವಲಯಕ್ಕೆ ಶಿಫ್ಟ್ ಆದ್ರೆ ಕಣ್ತಪ್ಪಿಸಿಕೊಳ್ಳಬಹುದೆಂದು ಪ್ಲಾನ್ ಮಾಡಿ ರೆಸಾರ್ಟ್ ನ ವಿಲ್ಲಾಗಳಲ್ಲಿ ಬೆಳೆದ್ರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಭಾವಿಸಿ ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ.

ವೆಬ್ಸೈಟ್ಗಳ ಮೂಲಕ ಗಾಂಜಾ ಬೆಳೆಯುವ ಬಗ್ಗೆ ತರಬೇತಿ ಆರೋಪಿ ಜಾವೇದ್ ಹೈಡ್ರೋ ಗಾಂಜಾ ಬೆಳೆಯುವ ಬಗ್ಗೆ ಡೀಪ್ ಅಂಡ್ ಫುಲ್ ಸ್ಟಡಿ ಮಾಡಿದ್ದ. ಹೀಗಾಗಿ ಗಾಂಜಾ ಬೆಳೆಯಲು ಸೂಕ್ತ ವಾತಾವರಣ ನಿರ್ಮಾಣ ಮಾಡಿದ್ದ. ಸೂರ್ಯನ ಶಾಖ ಬೀಳದಂತೆ ಫ್ಯಾನ್ ಕೂಲರ್ ಇಟ್ಟು ವಿಲ್ಲಾದಲ್ಲಿ ಗಾಂಜಾ ಬೆಳೆಯಲು ವ್ಯವಸ್ಥೆ ಮಾಡಿಕೊಂಡಿದ್ದ. ಹೈಡ್ರೋ ಗಿಡ ಬೆಳೆದ ನಂತ್ರ ವಿಲ್ಲಾದಲ್ಲೇ ಅದನ್ನು ಒಣಗಿಸಿ ಪ್ಯಾಕೇಟ್ನಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ. ಒಂದು ಗ್ರಾಂ ಹೈಡ್ರೋ ಗಾಂಜಾಗೆ ನಾಲ್ಕರಿಂದ ಐದು ಸಾವಿರ ರೂ ಬೆಲೆ ಇದೆ.

ಇದನ್ನೂ ಓದಿ: ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ; ಇಬ್ಬರು ಇರಾನಿ ವಿದೇಶಿ ಪ್ರಜೆ ಸೇರಿ ಒಟ್ಟು ನಾಲ್ವರ ಬಂಧನ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ