ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು

ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು
ಕುಸಿಯುತ್ತಿರುವ ಕಟ್ಟಡ

ಕುಸಿತಗೊಂಡ ಕಟ್ಟಡ 50 ವರ್ಷದ ಹಳೆಯದ್ದಾಗಿದೆ. ನಾಳೆ ಕೆಎಂಎಫ್​ನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

TV9kannada Web Team

| Edited By: sandhya thejappa

Sep 28, 2021 | 11:04 AM


ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿತ ಕಟ್ಟಡ ಕುಸಿತವಾಗಿದೆ. ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರರ್ಸ್ ಒಳಗಡೆ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಸಿತಗೊಂಡ ಕಟ್ಟಡ 50 ವರ್ಷದ ಹಳೆಯದ್ದಾಗಿದೆ. ನಾಳೆ ಕೆಎಂಎಫ್​ನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಿನ್ನೆ ಬಿದ್ದಿದ್ದ ಕಟ್ಟಡದಿಂದ ಅರ್ಧ ಕಿಮೀ ದೂರದಲ್ಲಿ ಇಂದು (ಸೆ.28) ಮತ್ತೊಂದು ಕಟ್ಟಡ ಕುಸಿತಗೊಂಡಿದೆ.

ಈ ಕಟ್ಟಡದಲ್ಲಿ 18 ಕುಟುಂಬ ವಾಸವಾಗಿತ್ತು. ಕೆಎಂಎಫ್ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿದ್ದಾರೆ. ಕಟ್ಟಡ ಕುಸಿಯುವ ಐದು ನಿಮಿಷ ಮುಂಚಿತವಷ್ಟೇ ನಾವು ಹೊರಗೆ ಬಂದವಿ. ಇಲ್ಲದಿದ್ದರೆ ನಮ್ಮ ಮೈ ಮೇಲೆ ಕಟ್ಟಡ ಬೀಳುತ್ತಿತ್ತು. ನಾಲ್ಕು ಜನರಿಗೆ ಗಾಯವಾಗಿದೆ. ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ತಿಂಡಿ ತಿನ್ನುವುದಕ್ಕೆ ರೆಡಿ ಆಗ್ತಾಯಿದ್ವಿ. ಅಷ್ಟರಲ್ಲಿ ಅಮ್ಮ ಹೊರ ಬನ್ನಿ ಅಂತಾ ಕೂಗಿದರು ಅಂತ ನಿವಾಸಿಯೊಬ್ಬರು ಹೇಳಿದ್ದಾರೆ.

ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ತಂದೆ, ತಾಯಿ ಮತ್ತು ಮಗು
ಕಟ್ಟಡದ ಎರಡನೇ ಅಂತಸ್ತಿನಲ್ಲಿ ತಂದೆ, ತಾಯಿ ಮತ್ತು ಮಗು ಸಿಲುಕಿಕೊಂಡಿದ್ದರು. ಮಗುವನ್ನ ಉಳಿಸಲು ಎರಡನೇ ಅಂತಸ್ತಿನಿಂದ ಕೆಳಗೆ ಎಸೆಯಲಾಗಿದೆ. ಕೆಳಗಡೆ ನಿಂತಿದ್ದ ಜನ ಮಗುವನ್ನ ತಕ್ಷಣ ಹಿಡಿದಿದ್ದಾರೆ ಅಂತ ತಿಳಿದುಬಂದಿದೆ.

ಹಳೆಯ ಕಟ್ಟಡ ಅಂತ ಗೊತ್ತಿದ್ದರು ಸಿಬ್ಬಂದಿಗಳಿಗೆ ವಾಸಮಾಡಲು ಬಮೂಲ್ ಅಧಿಕಾರಿಗಳು ಅವಕಾಶ ಕೊಟ್ಟಿದ್ದರು. ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಈ ಘಟನೆ ನಡೆದಿದೆ. 18 ಮನೆಗಳು ಇರುವ ಮೂರು ಫ್ಲೋರ್ ಕಟ್ಟಡವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿದ್ದಾರೆ.

ಅನಿಲ ಸೋರಿಕೆಯಿಂದ ಆತಂಕ
ಕೆಎಂಅಫ್ ಕ್ವಾರ್ಟರ್ಸ್‌ನಲ್ಲಿ ಕಟ್ಟಡ ಕುಸಿದ ಬಳಿಯ ಮನೆಯೊಂದರಲ್ಲಿ ಗ್ಯಾಸ್​ ಲೀಕ್​ ಆಗಿದೆ. ಹೀಗಾಗಿ ಬೆಸ್ಕಾಂ ಸಿಬ್ಬಂದಿಗೆ ಪವರ್ ಕಟ್ ಮಾಡಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ

ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕಟ್ಟಡ ಮಾಲೀಕನ ವಿರುದ್ಧ ಎಫ್​ಐಆರ್ ದಾಖಲು

ಹಾಸನದಲ್ಲಿ ಡೀಸೆಲ್ ಟ್ಯಾಂಕರ್, ಬೊಲೆರೊ ವಾಹನದ ನಡುವೆ ಡಿಕ್ಕಿ! ನೂರಾರು ಕೋಳಿಗಳ ಸಾವು

(Three Flour Building Collapse in dairy circle Bengaluru)

Follow us on

Related Stories

Most Read Stories

Click on your DTH Provider to Add TV9 Kannada