ಹಾಸನದಲ್ಲಿ ಡೀಸೆಲ್ ಟ್ಯಾಂಕರ್, ಬೊಲೆರೊ ವಾಹನದ ನಡುವೆ ಡಿಕ್ಕಿ! ನೂರಾರು ಕೋಳಿಗಳ ಸಾವು
ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ನಗರದ ಗಣೇಶ್ (20) ಮತ್ತು ಶಿವು(22) ಎಂಬುವವರು ಸಾವನ್ನಪ್ಪಿದ್ದಾರೆ.
ಹಾಸನ: ಡೀಸೆಲ್ ಟ್ಯಾಂಕರ್ ಮತ್ತು ಬೊಲೆರೊ ವಾಹನದ ಮಧ್ಯೆ ಡಿಕ್ಕಿಯಾಗಿ ಬೊಲೆರೊ ಗಾಡಿಯಲ್ಲಿದ್ದ ನೂರಾರು ಕೋಳಿಗಳು ಸಾವನ್ನಪ್ಪಿವೆ. ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ಸಂಭವಿಸಿದೆ. ಡೀಸೆಲ್ ಟ್ಯಾಂಕರ್ ಬೊಲೆರೊ ವಾಹನಕ್ಕೆ ಗುದ್ದಿ ಆ ಬಳಿಕ ರೈಲ್ವೆ ತಡೆಗೋಡೆಗೂ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೊಲೆರೊ ಗಾಡಿ ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿತ್ತು. ಅಪಘಾತದಲ್ಲಿ ನೂರಾರು ಕೋಳಿಗಳು ಸಾವನ್ನಪ್ಪಿವೆ. ಈ ವೇಳೆ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.
ಚಿತ್ರದುರ್ಗದಲ್ಲಿ ಬೈಕ್ ಸವಾರರ ಸಾವು ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ನಗರದ ಗಣೇಶ್ (20) ಮತ್ತು ಶಿವು(22) ಎಂಬುವವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ತಾಲೂಕಿನ ಕ್ಯಾದಿಗೆರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಐಮಂಗಲ ಗ್ರಾಮದಿಂದ ವಾಪಸ್ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಬೈಕಿಗೆ ಡಿಕ್ಕಿ ಹೊಡೆದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇಂದು (ಸೆ.28) ಬೆಳಗಿನ ಜಾವ ಈ ಘಟನೆ ನಡೆದಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಹಸು ಸಾವು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ 5 ಹಸು ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಚಾಕರಾಸನಹಳ್ಳಿಯ ಬಳಿ ಸಂಭವಿಸಿದೆ. 2 ಲಾರಿಗಳಲ್ಲಿ 20ಕ್ಕೂ ಹೆಚ್ಚು ಜಾನುವಾರು ತರಲಾಗುತ್ತಿತ್ತು. ಛತ್ತೀಸ್ಗಢದಿಂದ ಕೋಲಾರಕ್ಕೆ ಜಾನುವಾರು ತರಲಾಗುತ್ತಿತ್ತು. ಹೀಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ ಜಾನುವಾರುಗಳು ವೇಮಗಲ್ ಪೊಲೀಸರ ವಶದಲ್ಲಿವೆ.
ಇದನ್ನೂ ಓದಿ
ಚಿಕ್ಕಮಗಳೂರು: ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ; 1 ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5000 ರೂಪಾಯಿ!
Karnataka Dams Water Level: ಮಳೆಯಿಂದ ಕರ್ನಾಟಕದ ಡ್ಯಾಂಗಳು ಭರ್ತಿ; ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
(Accident between diesel tanker and bolero vehicle in Hassan hens death)