ಚಿಕ್ಕಮಗಳೂರು: ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ; 1 ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5000 ರೂಪಾಯಿ!

ಸಾಧಾರಣವಾಗಿ ಹಾಲು ಅಂದರೆ ನೆನಪಾಗೋದು, ಜನ ಅಂದುಕೊಳ್ಳೋದು ಗೋವಿನ ಹಾಲು ಅಂತಾನೇ. ಆದ್ರೆ ಇದೀಗ ಹಸು, ಎಮ್ಮೆಯ ಹಾಲಿಗಿಂತ ಹತ್ತಾರು ಪಟ್ಟು ಬೇಡಿಕೆ ಕತ್ತೆ ಹಾಲಿಗೆ ಬಂದಿದೆ. ಒಂದು ಲೀಟರ್ ಡೈರಿ ಹಾಲಿಗೆ 45 ರೂಪಾಯಿಯಾದರೆ, ಒಂದು ಒಳಲೆ ಕತ್ತೆ ಹಾಲಿಗೆ ಬರೋಬ್ಬರಿ 50 ರೂಪಾಯಿ. ಒಂದು ಒಳಲೆ ಅಂದರೆ ನಾಲ್ಕೈದು ಚಮಚ ಇರಬಹುದು.

ಚಿಕ್ಕಮಗಳೂರು: ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ; 1 ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5000 ರೂಪಾಯಿ!
ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ
Follow us
TV9 Web
| Updated By: preethi shettigar

Updated on:Sep 28, 2021 | 8:03 AM

ಚಿಕ್ಕಮಗಳೂರು: ಜಿಲ್ಲೆಯಲ್ಲಿಗ ಹಸು ಹಾಲಿನಂತೆಯೇ ಕತ್ತೆಯ ಹಾಲಿಗೂ ಹೆಚ್ಚು ಬೇಡಿಕೆ ಶುರುವಾಗಿದೆ. ಹೋಗೋ ಕತ್ತೆ ಬಡವ, ಅಂತಾ ಹೀಯಾಳಿಸೋ ಕಾಲ ಒಂದಿತ್ತು. ಅಂದರೆ ಏನೂ ಪ್ರಯೋಜನ ಇಲ್ಲದ, ನಿಕೃಷ್ಟ, ತುಚ್ಛವಾದ ಪ್ರಾಣಿ ಅಂತಾ ಕತ್ತೆಯನ್ನು ಬಿಂಬಿಸಲಾಗ್ತಿತ್ತು. ಆದ್ರೆ ಇದೀಗ ಕಾಲ ಬದಲಾಗಿದೆ, ಹೇಗೆ ಗಡಿಯಾರದ ಮುಳ್ಳು ಕೆಳಗೆ ಹೋಗಿದ್ದು ಮೇಲೆ ಬರುತ್ತೋ, ಹಾಗೆ ಕತ್ತೆಗಳಿಗೂ ಒಂದು ಕಾಲ ಬಂದಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದವರಂತು ಕತ್ತೆ ಹಾಲಿಗಾಗಿ ಹಾತೋರೆಯುತ್ತಿದ್ದಾರೆ. ಏನಿದು ಕತ್ತೆ ಹಾಲಿನ ಕಥೆ ಎನ್ನುವವರು ಈ ವರದಿ ನೋಡಿ.

ಕತ್ತೆ ಹಾಲಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಈ ಹಾಲನ್ನು ಚಿಕ್ಕಮಕ್ಕಳಿಗೆ ಕುಡಿಸಿದರೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಮಕ್ಕಳು ಶಕ್ತಿವಂತರಾಗುತ್ತಾರೆ ಎನ್ನುವ ನಂಬಿಕೆ ಈ ಭಾಗದ ಜನರದ್ದು. ಇದು ಕೇವಲ ನಂಬಿಕೆಯಲ್ಲ, ಬದಲಾಗಿ ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿರೋ ಸತ್ಯ. ಈ ಹಿನ್ನೆಲೆಯಲ್ಲಿ ಕತ್ತೆ ಹಾಲಿಗೆ ಬಹು ಬೇಡಿಕೆ.

1 ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5 ಸಾವಿರ ರೂ.! ಸದ್ಯ ಈ ಪರಿ ಬೇಡಿಕೆ ಸೃಷ್ಟಿಯಾಗಿರೋದು ಕಾಫಿನಾಡು ಚಿಕ್ಕಮಗಳೂರಿನಲ್ಲಿ. ಸಾಧಾರಣವಾಗಿ ಹಾಲು ಅಂದರೆ ನೆನಪಾಗೋದು, ಜನ ಅಂದುಕೊಳ್ಳೋದು ಗೋವಿನ ಹಾಲು ಅಂತಾನೇ. ಆದ್ರೆ ಇದೀಗ ಹಸು, ಎಮ್ಮೆಯ ಹಾಲಿಗಿಂತ ಹತ್ತಾರು ಪಟ್ಟು ಬೇಡಿಕೆ ಕತ್ತೆ ಹಾಲಿಗೆ ಬಂದಿದೆ. ಒಂದು ಲೀಟರ್ ಡೈರಿ ಹಾಲಿಗೆ 45 ರೂಪಾಯಿಯಾದರೆ, ಒಂದು ಒಳಲೆ ಕತ್ತೆ ಹಾಲಿಗೆ ಬರೋಬ್ಬರಿ 50 ರೂಪಾಯಿ. ಒಂದು ಒಳಲೆ ಅಂದರೆ ನಾಲ್ಕೈದು ಚಮಚ ಇರಬಹುದು. ಸರಿಸುಮಾರು 10 ಎಂಎಲ್. ಸರಿಯಾಗಿ ಕ್ಯಾಲ್ಕುಲೇಟರ್ ಇಟ್ಕೊಂಡ್ ಲೆಕ್ಕ ಹಾಕೋಕೆ ಹೋದರೆ 1 ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5 ಸಾವಿರ! ಇಷ್ಟು ದುಬಾರಿಯಾದರೂ ಕತ್ತೆ ಹಾಲಿಗೆ ಬೇಡಿಕೆ ಏನೂ ಕಮ್ಮಿಯಾಗಿಲ್ಲ. ಜನರು ಮುಗಿಬಿದ್ದು ಕತ್ತೆ ಹಾಲನ್ನು ಕೊಂಡುಕೊಳ್ಳುತ್ತಿದ್ದಾರೆ.

ಕೋಲಾರ-ಆಂಧ್ರ ಪ್ರದೇಶದಿಂದ ಕಾಫಿನಾಡು ಚಿಕ್ಕಮಗಳೂರಿಗೆ ಬಂದಿದ್ದು, ಕತ್ತೆ ಹಾಲಿನ ಮಾರಾಟದಲ್ಲಿ ನಿರತರಾಗಿದ್ದೇವೆ. ಚಿಕ್ಕಮಗಳೂರು ನಗರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ಕತ್ತೆ ಹಾಲನ್ನು ಮಾರಾಟ ಮಾಡಿ ಜನರಿಗೆ ಕತ್ತೆ ಹಾಲಿನ ಬಗ್ಗೆ ತಿಳಿಸುತ್ತಿದ್ದೇವೆ. ಜನರು ಕತ್ತೆಗಳನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಬಹುತೇಕ ಚಿಕ್ಕ ಮಕ್ಕಳಿರುವ ಮನೆಗಳಲ್ಲಂತೂ ಕತ್ತೆ ಹಾಲು ತಗೊಂಡು ಮಕ್ಕಳಿಗೆ ಕುಡಿಸುತ್ತಿದ್ದಾರೆ ಎಂದು ಕತ್ತೆ ಹಾಲು ಮಾರುವವರು ಪ್ರಸಾದ್ ತಿಳಿಸಿದ್ದಾರೆ.

20 ದಿನದಿಂದ 2 ವರ್ಷದ ಮಕ್ಕಳವರೆಗೂ ಈ ಹಾಲನ್ನು ಕುಡಿಸಿದರೆ ಒಳ್ಳೇದು ಎನ್ನುವುದು ಹಾಲು ಮಾರುವವರ ಕುಟುಂಬದ ಮಾತು. ಹೀಗಾಗಿ ಬಾಣಂತಿಯರು ತಮ್ಮ ಮುದ್ದು ಕಂದಮ್ಮಗಳಿಗೆ ಕತ್ತೆ ಹಾಲನ್ನು ಕುಡಿಸಿ ಮಕ್ಕಳು ಬುದ್ಧಿವಂತರಾಗ್ಲಿ, ಶಕ್ತಿವಂತರಾಗ್ಲಿ, ರೋಗನಿರೋಧಕ ಶಕ್ತಿ ಹೆಚ್ಚಾಗಲಿ ಅಂತಾ ಕತ್ತೆ ಹಾಲಿನ ಮೊರೆ ಹೋಗಿದ್ದಾರೆ.

ಹಳ್ಳಿಗಳಲ್ಲಿ ಜನಸಾಮಾನ್ಯರು ಹಸು, ಎಮ್ಮೆ ಹಾಲು ಕುಡಿಯೋದು ಸಾಮಾನ್ಯ. ಕತ್ತೆ ಹಾಲಿನ ಬಗ್ಗೆ ಅರಿವಿರುವ ಜನರು, ಇದೀಗ ತಾವು ಕೂಡ ಕತ್ತೆ ಹಾಲು ಕುಡಿದು ಖುಷಿ ಪಡ್ತಿದ್ದಾರೆ. ಸದ್ಯ ಕೊರೊನಾದ ಭಯ ಜನರಲ್ಲಿ ಜಾಸ್ತಿ ಇರುವುದರಿಂದ ಕತ್ತೆ ಹಾಲಿಗೆ ಮತ್ತಷ್ಟು ಬೇಡಿಕೆ. ರೋಗನಿರೋಧಕ ಶಕ್ತಿ ಜಾಸ್ತಿ ಆಗುತ್ತೆ ಅಂತಾ ಜನಸಾಮಾನ್ಯರು ಕತ್ತೆ ಹಾಲಿನ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

ವರದಿ: ಪ್ರಶಾಂತ್

ಇದನ್ನೂ ಓದಿ:

ದೇಶದಲ್ಲಿ 3ನೇ ಸ್ಥಾನ ಹೊಂದಿರುವ ಹಾಸನ ಹಾಲು ಒಕ್ಕೂಟದಿಂದ ಇನ್ಮುಂದೆ ಅತ್ಯಾಧುನಿಕ ಸುವಾಸಿತ ಹಾಲು ಉತ್ಪಾದನೆ!

Viral Video: ದೈತ್ಯಾಕಾರದ ಹುಲಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿದ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್​

Published On - 7:46 am, Tue, 28 September 21