ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ಮಿಟೂ ಆರೋಪ ಮಾಡಿದ್ದ ಲೀನಾ ಮಣಿಮೆಕಲೈ; ಪ್ರಕರಣದ ಇತ್ತೀಚಿನ ಮಾಹಿತಿ ಇಲ್ಲಿದೆ

Susi Ganeshan | Leena Manimekalai: ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ನಿರ್ಮಾಪಕಿ ಲೀನಾ ಮಣಿಮೆಕಲೈ ಮಿಟೂ ಆರೋಪ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ.

ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ಮಿಟೂ ಆರೋಪ ಮಾಡಿದ್ದ ಲೀನಾ ಮಣಿಮೆಕಲೈ; ಪ್ರಕರಣದ ಇತ್ತೀಚಿನ ಮಾಹಿತಿ ಇಲ್ಲಿದೆ
ಲೀನಾ, ಸುಸಿ ಗಣೇಶನ್
Follow us
TV9 Web
| Updated By: shivaprasad.hs

Updated on:Sep 28, 2021 | 6:20 PM

ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲೈ ಅವರು ನಿರ್ದೇಶಕ ಸುಸಿ ಗಣೇಶನ್ ವಿರುದ್ಧ 2018ರಲ್ಲಿ ಮಿಟೂ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸುಸಿ ಗಣೇಶನ್, ಲೀನಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು, ಪ್ರಸ್ತುತ ಪ್ರಕರಣವು ನ್ಯಾಯಾಲಯದಲ್ಲಿದೆ. ಇದರೊಂದಿಗೆ ಲೀನಾ ವಿರುದ್ಧ ಹಲವು ಆರೋಪಗಳನ್ನು ಗಣೇಶನ್ ಮಾಡಿದ್ದು, ಅವುಗಳ ವಿಚಾರಣೆಯೂ ನಡೆಯುತ್ತಿದೆ. ಇತ್ತೀಚೆಗೆ ಲೀನಾ ಅವರಿಗೆ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಿಂದ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನದೊಂದಿಗೆ ‘ಮಾಸ್ಟರ್ ಆಫ್ ಫೈನ್ ಆರ್ಟ್ಸ್’ ಅಧ್ಯಯನಕ್ಕೆ ಅವಕಾಶ ಸಿಕ್ಕಿತ್ತು. ಕೊರೊನಾ ಕಾರಣದಿಂದ ಅವರು ಆನ್​ಲೈನ್ ತರಗತಿಗೆ ಹಾಜರಾಗಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಸುಸಿ ಗಣೇಶನ್ ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಿ, ಲೀನಾ ಅವರ ವೀಸಾವನ್ನು ವಶಪಡಿಸಿಕೊಳ್ಳುವಂಂತೆ ಕೋರಿದ್ದರು. ಇಲ್ಲವಾದಲ್ಲಿ, ಲೀನಾ ವಿಜಯ್ ಮಲ್ಯರಂತೆ ವಿದೇಶಕ್ಕೆ ಪಲಾಯನ ಮಾಡಬಹುದು ಎಂದು ಸುಸಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ, ಲೀನಾ ನ್ಯಾಯಾಲಯಕ್ಕೆ ಹೇಳಿಕೆ ನೀಡಿ, ತಾನು ವಿದೇಶಕ್ಕೆ ತೆರಳುವುದಾದರೆ ತಿಳಿಸಿಯೇ ತೆರಳುತ್ತೇನೆ ಎಂದಿದ್ದರು. ಆದರೆ ಸೆಪ್ಟೆಂಬರ್ 9ರಂದು ಲೀನಾ ಅವರ ಪಾಸ್​​ಪೋರ್ಟನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಲೀನಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಪ್ರಸ್ತುತ ಸುಸಿ ಗಣೇಶನ್ ಕೆನಡಾದ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಯಾರ್ಕ್ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮೇಲ್ ಮುಖಾಂತರ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಸುಸಿ ಗಣೇಶನ್ ಹೇಳಿದ್ದೇನು?

ಗಣೇಶನ್ ನೇರವಾಗಿ ಯಾರ್ಕ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದು, ಲೀನಾರನ್ನು ಬೆಂಬಲಿಸಿ ಭಾರತೀಯ ನ್ಯಾಯಾಲಯಕ್ಕೆ ಬರೆದಿದ್ದ ಪತ್ರವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಲೀನಾ ಅವರ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಇತ್ತೀಚೆಗೆ ಯಾರ್ಕ್ ವಿಶ್ವವಿದ್ಯಾಲಯವು ಭಾರತೀಯ ನ್ಯಾಯಾಲಯಕ್ಕೆ ಪತ್ರ ಬರೆದು, ಲೀನಾ ಅವರಿಗೆ ವಿದ್ಯಾರ್ಥಿ ವೇತನ ಹಾಗೂ ಕೋರ್ಸ್​ಗೆ ಅವಕಾಶ ಸಿಕ್ಕಿದ್ದನ್ನು ಖಚಿತಪಡಿಸಿತ್ತು. ಜೊತೆಗೆ ವಶಪಡಿಸಿಕೊಳ್ಳಲಾದ ಪಾಸ್​ಪಾರ್ಟನ್ನು ಮರಳಿಸುವಂತೆ ವಿನಂತಿಸಿತ್ತು. ಇದನ್ನು ವಾಪಸ್ ಪಡೆಯುವಂತೆ ಗಣೇಶನ್ ಪತ್ರ ಬರೆದಿದ್ದು, ವಿವಿಯ ಪತ್ರದಿಂದ ಲೀನಾ ನ್ಯಾಯಾಲಯದ ಕ್ರಮಗಳನ್ನು ತಪ್ಪಿಸಿಕೊಳ್ಳಲು ಸಹಾಯಕವಾಗಬಹುದು. ಆದ್ದರಿಂದ ನೀವು ಬರೆದ ಪತ್ರವನ್ನು ಹಿಂಪಡೆಯಿರಿ ಎಂದು ಗಣೇಶನ್ ಬರೆದಿದ್ದಾರೆ.

ಗಣೇಶನ್ ಬರೆದ ಪತ್ರದಲ್ಲಿ ಒಂದು ವೇಳೆ ವಿವಿಯು ಲೀನಾಗೆ ಬೆಂಬಲ ನೀಡಿದ್ದನ್ನು ಗಮನಿಸಿದರೆ ಅದರ ವಿಶ್ವಾಸಾರ್ಹತೆ ಪ್ರಶ್ನಿಸಬೇಕಾಗಬಹುದು. ಒಂದು ವೇಳೆ ಲೀನಾರನ್ನು ಬೆಂಬಲಿಸಲು ಆಸಕ್ತಿ ಹೊಂದಿದ್ದರೆ, ವಿವಿಯ ಪ್ರತಿನಿಧಿಗಳು ಭಾರತಕ್ಕೆ ಬಂದು ನ್ಯಾಯಾಲಯಕ್ಕೆ ಭೇಟಿ ನೀಡಬೇಕು ಎಂದು ಅವರು ಬರೆದಿದ್ದಾರೆ.

ಲೀನಾ ಹೇಳಿದ್ದೇನು?

“ನನ್ನ ಅಸ್ತಿತ್ವಕ್ಕೆ ಅಪಾಯವಿದೆ. ನನಗೆ ಪ್ರಯಾಣಿಸಲು, ಅಧ್ಯಯನ ಮಾಡಲು, ನನ್ನ ಚಲನಚಿತ್ರಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ನನಗೆ ಕಿರುಕುಳ ನೀಡುವವರು ನನ್ನ ಜೀವನವನ್ನು ನಾಶಮಾಡಲು ಎಲ್ಲಾ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಕೆನಡಾದ ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ವೀಸಾವನ್ನು ರದ್ದುಗೊಳಿಸುವಂತೆ ಕೇಳಿದ್ದಾರೆ. ಅವರು (ಸುಸಿ) ಅಧಿಕಾರದಿಂದ ನನಗೆ ಕಿರುಕುಳ ನೀಡುವುದನ್ನು ಮುಂದುವರಿಸಲು ನ್ಯಾಯಾಂಗವನ್ನು ಬಳಸುತ್ತಿದ್ದಾರೆ. ಅವರ ಅರ್ಜಿಗಳು ಸಾರ್ವಜನಿಕವಾಗಿ ಮಾನ ಹಾನಿ ಮಾಡುವದರ ಹೊರತು ಮತ್ತೇನಲ್ಲ’’ ಎಂದು ಲೀನಾ ನುಡಿದಿದ್ದಾರೆ.

ಮುಂದುವರೆದು ಮಾತನಾಡಿರುವ ಲೀನಾ, ತನ್ನ ಇತರ ಬರಹ, ಕವಿತೆಗಳಿಂದ ನ್ಯಾಯಾಲಯದಲ್ಲಿ ತನ್ನ ಕುರಿತು ತಪ್ಪು ಅಭಿಪ್ರಾಯ ಮೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ಲೀನಾ ಅವರ ಪ್ರಯಾಣದ ದಾಖಲೆಗಳನ್ನು ವಶಪಡಿಸಿಕೊಳ್ಳುವ ಮತ್ತು ಆಕೆಯ ಪ್ರಯಾಣವನ್ನು ತಡೆಯುವ ಅರ್ಜಿಗಳ ಕಾರಣದಿಂದಾಗಿ, ಗಣೇಶನ್ ಆರೋಪಿಸಿರುವ ಮಾನನಷ್ಟ ಪ್ರಕರಣವು ವಿಚಾರಣೆಯಾಗಿಲ್ಲ. ಲೀನಾ ಮತ್ತು ಅವರ ಕಾನೂನು ಸಲಹೆಗಾರರು ಆಕೆಯ ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವುದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಏಕಕಾಲದಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಗಳನ್ನು ಹಾಗೂ ಸೈದಪೇಟೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣವನ್ನು ಪ್ರಶ್ನಿಸಿದ್ದಾರೆ.

ಲೀನಾ ತಾವು 2005ರಲ್ಲಿ ದೌರ್ಜನ್ಯಕ್ಕೆ ತುತ್ತಾಗಿದ್ದಾಗಿ ಹೇಳಿಕೊಂಡಿದ್ದಾರೆ. ಸುಸಿ ಗಣೇಶನ್ ಇದನ್ನು ತಳ್ಳಿ ಹಾಕಿ, ಅವರಿಗೆ ಅವಕಾಶ ನೀಡಿಲ್ಲವೆಂದು ಆರೋಪಿಸುತ್ತಿದ್ದಾರೆ ಎಂದು ಲೀನಾ ವಿರುದ್ಧ ಪ್ರತ್ಯಾರೋಪ ಮಾಡಿದ್ದರು. ನಂತರ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲೀನಾ ಅವರ ಆರೋಪದ ಬೆನ್ನಲ್ಲೇ ನಟಿ ಅಮಲಾ ಪೌಲ್ ಕೂಡ ಸುಸಿ ಗಣೇಶನ್ ವಿರುದ್ಧ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವರದಿ: ದಿ ನ್ಯೂಸ್ ಮಿನಿಟ್

ಇದನ್ನೂ ಓದಿ:

ಕನ್ನಡತಿ ಶ್ರದ್ಧಾ ಶ್ರೀನಾಥ್ ಬೆಂಗಳೂರಿನಲ್ಲಿ ಖಾಯಂ ಆಗಿ ಸೆಟ್ಲ್ ಆಗುವ ಮೊದಲು ಅರ್ಧ ದೇಶವನ್ನೇ ಸುತ್ತಿದ್ದರು!

Kaage Motte: ‘ನಮ್ಗೆಲ್ಲಾ ಯಾವ ಲವ್ ಸಿಗ್ತಿಲ್ವಲಾ..’ ಅಂತ ತಲೆ ಕೆಡಿಸ್ಕೊಂಡಿದ್ರಂತೆ ಜಗ್ಗೇಶ್; ಏನಿದು ಸಮಾಚಾರ?!

(Director Susi Ganesan writes letter Canadian University to cancel Leena Manimekalai’s Visa)

Published On - 6:14 pm, Tue, 28 September 21

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!