Puneeth Rajkumar: ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಜೇಮ್ಸ್’ ಚಿತ್ರದ ಟಿವಿ ರೈಟ್ಸ್; ಇಲ್ಲಿದೆ ಸಂಪೂರ್ಣ ಮಾಹಿತಿ
James: ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರ ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಚಿತ್ರದ ಟಿವಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದೆ.
ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ‘ಯುವರತ್ನ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ನಂತರ ಪುನೀತ್ ಅಭಿಮಾನಿಗಳು ಮುಂದಿನ ಪವರ್ ಪ್ಯಾಕ್ ಆಕ್ಷನ್ ಚಿತ್ರಕ್ಕೆ ಕಾದು ಕುಳಿತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ಸ್ಯಾಂಡಲ್ವುಡ್ನಲ್ಲಿ ಸಖತ್ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಗಾಂಧಿನಗರದಿಂದ ಬಂದ ಲೇಟೆಸ್ಟ್ ಮಾಹಿತಿ ಪ್ರಕಾರ, ಅಪ್ಪು ಅಭಿನಯದ ಜೇಮ್ಸ್ ಬಿಡುಗಡೆಗೂ ಮುನ್ನವೇ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅದೇನು ಅಂತೀರಾ? ಇಲ್ಲಿದೆ ಮಾಹಿತಿ.
ಪುನೀತ್ ಅಭಿನಯದ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ, ‘ಜೇಮ್ಸ್’ನ ಟಿವಿ ರೈಟ್ಸ್ ಅತಿ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋದು ಇತ್ತೀಚೆಗೆ ಕೇಳಿ ಬರುತ್ತಿರೋ ಹೊಸ ಸಮಾಚಾರ. ಬಿಡುಗಡೆಗೂ ಮುನ್ನವೇ ಜೇಮ್ಸ್ ಚಿತ್ರ ಒಳ್ಳೆಯ ಕ್ರೇಜ್ ಹುಟ್ಟುಹಾಕಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಟಿವಿ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ. ಇದರಿಂದಾಗಿ ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿರೋದಂತೂ ಹೌದು.
ಬಲ್ಲ ಮೂಲಗಳ ಪ್ರಕಾರ ಜೇಮ್ಸ್ ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ ₹ 15 ಕೋಟಿಗೆ ಸೇಲ್ ಆಗಿದೆ. ಇದು ಕನ್ನಡ ಭಾಷೆಯೊಂದನ್ನೇ ಪರಿಗಣಿಸಿದರೆ ಅತಿ ಹೆಚ್ಚಿನ ಮೊತ್ತ ಎಂಬುದು ಗಾಂಧಿ ನಗರ ಪಂಡಿತರ ಅಂಬೋಣ. ಚಿತ್ರೀಕರಣದಲ್ಲಿರುವಾಗಲೇ ‘ಜೇಮ್ಸ್’ ಈ ಪರಿ ಸೌಂಡ್ ಮಾಡ್ತಿದೆ ಎಂದರೆ, ಬಿಡುಗಡೆ ಸಮಯದಲ್ಲಿ ಇನ್ನೆಷ್ಟು ಕ್ರೇಜ್ ಸೃಷ್ಟಿಸಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗಕ್ಕೆ ಪುಷ್ಠಿ ನೀಡಿದೆ.
ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಕುರಿತಂತೆ ವಿಡಿಯೊ ಸ್ಟೋರಿ ಇಲ್ಲಿದೆ:
‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಚೇತನ್ ಕುಮಾರ್ ‘ಜೇಮ್ಸ್’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಹಾಡು ಸಾಕಷ್ಟು ಸುದ್ದಿ ಮಾಡಿದೆ.
ಇದನ್ನೂ ಓದಿ:
‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್’ ಚಿತ್ರದ ಪುನೀತ್ ಪವರ್ಫುಲ್ ಲುಕ್ ಅನಾವರಣ
Jaggesh: ನವರಸ ನಾಯಕನ ಜೀವನದಲ್ಲಿ ಅತೀ ದೊಡ್ಡ ನೋವೇನು?; ಜಗ್ಗೇಶ್ ಹೇಳಿದ ಸತ್ಯ!
(Puneeth Rajkumar starring James Movie TV Rights sold for Rs 15 Crores says reports)