ಗುರುರಾಘವೇಂದ್ರ ಸೊಸೈಟಿಯಲ್ಲಿ ಸಾಲ ಪಡೆದ 3 ಭಾರೀ ಕುಳಗಳ ಮನೆ ಮೇಲೆ ACB ದಾಳಿ

| Updated By: ಸಾಧು ಶ್ರೀನಾಥ್​

Updated on: Jun 22, 2020 | 3:25 PM

ಬೆಂಗಳೂರು: ಕಳೆದ ವಾರ ಬಸವನಗುಡಿಯಲ್ಲಿರುವ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬೆಚ್ಚಿಬೀಳಿಸುವ ಅಕ್ರಮವನ್ನು ಬಹಿರಂಗ ಪಡೆಸಿದ್ದರು. ಅವ್ಯವಹಾರ ಪ್ರಕರಣದ ಮುಂದುವರೆದ ಭಾಗವಾಗಿ ಮೂವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದಾರೆ. ಗುರುರಾಘವೇಂದ್ರ ಬ್ಯಾಂಕ್​ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಮೂವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದೇ ಮೊದಲ ಬಾರಿ ಸಾಲ ಪಡೆದವರ ಮನೆ ಬಾಗಿಲಿಗೆ ಎಸಿಬಿ […]

ಗುರುರಾಘವೇಂದ್ರ ಸೊಸೈಟಿಯಲ್ಲಿ ಸಾಲ ಪಡೆದ 3 ಭಾರೀ ಕುಳಗಳ ಮನೆ ಮೇಲೆ ACB ದಾಳಿ
Follow us on

ಬೆಂಗಳೂರು: ಕಳೆದ ವಾರ ಬಸವನಗುಡಿಯಲ್ಲಿರುವ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬೆಚ್ಚಿಬೀಳಿಸುವ ಅಕ್ರಮವನ್ನು ಬಹಿರಂಗ ಪಡೆಸಿದ್ದರು. ಅವ್ಯವಹಾರ ಪ್ರಕರಣದ ಮುಂದುವರೆದ ಭಾಗವಾಗಿ ಮೂವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದಾರೆ. ಗುರುರಾಘವೇಂದ್ರ ಬ್ಯಾಂಕ್​ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಮೂವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದೇ ಮೊದಲ ಬಾರಿ ಸಾಲ ಪಡೆದವರ ಮನೆ ಬಾಗಿಲಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರೋದು.

140 ಕೋಟಿ ಸಾಲ ಪಡೆದಿರುವ ರಘುನಾಥ್ ಎಂಬುವವರ ಯಶವಂತಪುರದ ನಿವಾಸ, ಬ್ಯಾಂಕ್​ನಿಂದ 150 ಕೋಟಿ ಸಾಲ ಪಡೆದಿರುವ ಜಸ್ವಂತ್ ರೆಡ್ಡಿ ಅವರ ಹೆಚ್.ಬಿ.ಆರ್ ಲೇಔಟ್​ನಲ್ಲಿರುವ ನಿವಾಸದ ಮೇಲೆ ಹಾಗೂ 40 ಕೋಟಿ ಸಾಲ ಪಡೆದಿರುವ ರಾಮಕೃಷ್ಣ ಎಂಬಾತನ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಅಬ್ದುಲ್ ಅಹ್ಮದ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ.