ಬೆಂಗಳೂರಿನಲ್ಲಿ ಪತ್ನಿಯನ್ನ ಕೊಂದು, ಕೋಲ್ಕತ್ತಾದಲ್ಲಿ ಅತ್ತೆಯ ಹತ್ಯೆಗೈದು ತಾನೂ ಸಾವಿಗೆ ಶರಣು

ಬೆಂಗಳೂರು: ಬೆಂಗಳೂರಿನ ಮಹದೇವಪುರದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೂನ್ 21ರಂದು ಮಹದೇವಪುರದ ಖಾಸಗಿ ಅಪಾರ್ಟ್ಮೆಂಟ್​ನ ಅಡುಗೆ ಮನೆಯಲ್ಲಿ ಶಿಲ್ಪಿ(30) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಸದ್ಯ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ಪತಿಯೇ ಪತ್ನಿಯನ್ನ ಕೊಂದು, ಅತ್ತೆ, ಮಾವನಿಗೂ ಸ್ಕೆಚ್: ಅಮಿತ್ ಅಗರ್ವಾಲ್‌ ಕೊಲೆಯಾದ ಶಿಲ್ಪಿ ಪತಿ. ಮೊದಲಿಗೆ ಬೆಂಗಳೂರಿನಲ್ಲಿ ತನ್ನ ಪತ್ನಿಯನ್ನು ಕೊಂದು ನಂತರ ತನ್ನ 10 ವರ್ಷದ ಮಗು ಜತೆ ಕೋಲ್ಕತ್ತಾಗೆ […]

ಬೆಂಗಳೂರಿನಲ್ಲಿ ಪತ್ನಿಯನ್ನ ಕೊಂದು, ಕೋಲ್ಕತ್ತಾದಲ್ಲಿ ಅತ್ತೆಯ ಹತ್ಯೆಗೈದು ತಾನೂ ಸಾವಿಗೆ ಶರಣು
Follow us
ಆಯೇಷಾ ಬಾನು
|

Updated on:Jun 23, 2020 | 10:24 AM

ಬೆಂಗಳೂರು: ಬೆಂಗಳೂರಿನ ಮಹದೇವಪುರದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೂನ್ 21ರಂದು ಮಹದೇವಪುರದ ಖಾಸಗಿ ಅಪಾರ್ಟ್ಮೆಂಟ್​ನ ಅಡುಗೆ ಮನೆಯಲ್ಲಿ ಶಿಲ್ಪಿ(30) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಸದ್ಯ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ.

ಪತಿಯೇ ಪತ್ನಿಯನ್ನ ಕೊಂದು, ಅತ್ತೆ, ಮಾವನಿಗೂ ಸ್ಕೆಚ್: ಅಮಿತ್ ಅಗರ್ವಾಲ್‌ ಕೊಲೆಯಾದ ಶಿಲ್ಪಿ ಪತಿ. ಮೊದಲಿಗೆ ಬೆಂಗಳೂರಿನಲ್ಲಿ ತನ್ನ ಪತ್ನಿಯನ್ನು ಕೊಂದು ನಂತರ ತನ್ನ 10 ವರ್ಷದ ಮಗು ಜತೆ ಕೋಲ್ಕತ್ತಾಗೆ ತೆರಳಿದ್ದಾನೆ. ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಕೋಲ್ಕತ್ತಾದ ಆರ್.ಕೆ.ಸಮಾಧಿ ಬಳಿಯಿರುವ ಮಾವನ ಮನೆಗೆ ತೆರಳಿದ್ದಾನೆ. ಶಿಲ್ಪಿ ತಂದೆ ಸುಭಾಸ್ ಹಾಗೂ ತಾಯಿ ಲಲಿತಾ ಜತೆ ಮಾತುಕತೆ ನಡೆಸಿದ್ದಾನೆ.

ಮಾತಿನ ನಡುವೆ ಲಲಿತಾ ಮೇಲೆ ಫೈರಿಂಗ್ ಮಾಡಿ ಅತ್ತೆ ಹತ್ಯೆ ಮಾಡಿದ್ದಾನೆ. ನಂತರ ಮಾವನ ಕೊಲೆಗೆ ಯತ್ನಿಸಿದ್ದಾರೆ. ಆದರೆ ಸುಭಾಸ್ ಧನ್ದಾನಿಯಾ ಅಳಿಯನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸುಭಾಸ್ ಮನೆಗೆ ಪೊಲೀಸರು ಭೇಟಿ ನೀಡಿದ್ರು. ಈ ವೇಳೆ ಮಾವನ ಮನೆಯಲ್ಲೇ ಅಮಿತ್ ಅಗರ್ವಾಲ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ. ಅಮಿತ್ ಮೃತದೇಹದ ಬಳಿ ಸಿಕ್ಕ ಡೆತ್‌ನೋಟ್‌ ಆಧರಿಸಿ ತನಿಖೆ ಶುರು ಮಾಡಿದ್ದಾಗ ಪತ್ನಿ ಹತ್ಯೆಗೈದು ಕೋಲ್ಕತ್ತಾಗೆ ತೆರಳಿದ್ದಾಗಿ ಪತ್ರದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಪೊಲೀಸರು ಬೆಂಗಳೂರಿನ ಪತ್ನಿ ಮನೆಗೆ ಭೇಟಿ ನೀಡಿದ್ರು. ಮನೆಯ ಅಡುಗೆಕೋಣೆಯಲ್ಲಿ ಶಿಲ್ಪಿ ಮೃತದೇಹ ಪತ್ತೆಯಾಗಿದೆ.

ಪತ್ನಿ ಕೊಲೆಗೆ ಅಸಲಿ ಕಾರಣ ಏನು? ಅಮಿತ್ ಮತ್ತು ಶಿಲ್ಪಿ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಇಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಸಂಬಂಧಿಸಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:18 am, Tue, 23 June 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್