10 ದಿನ ಹಿಂದೆ FIR, ಈ ಮಧ್ಯೆ.. ಭಾರತ ಬಿಟ್ಟಿರುವ ಆದಿತ್ಯ ಆಳ್ವ!?

|

Updated on: Sep 15, 2020 | 11:27 AM

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಹಾವಳಿ ಕೇಳಿಬರುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಿಸಿಬಿ, ಒಬ್ಬೊಬ್ಬರನ್ನಾಗಿ ಬಂಧಿಸುತ್ತಾ, ಹತ್ತಾರು ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿದೆ. ಅದಾಗಿ 10-15 ದಿನಗಳಾಗಿವೆ. ಈ ಮಧ್ಯೆ ಆರೋಪಿ ಆರು ಎಂದು ಗುರುತಿಸಿಕೊಂಡಿರುವ ಆದಿತ್ಯ ಆಳ್ವನ ಹೆಸರನ್ನೂ ಸಿಸಿಬಿ ಅಧಿಕಾರಿಗಳು FIR ನಲ್ಲಿ ದಾಖಲಿಸಿದರು. ಇಂಡಿಯಾದಿಂದ ಎಸ್ಕೇಪ್!? ಅದಾಗುತ್ತಿದ್ದಂತೆ ದಿ. ಜೀವರಾಜ ಆಳ್ವಾರ ಪುತ್ರ ಸದರಿ ಆರೋಪಿ ಆರು ಆದಿತ್ಯ ಆಳ್ವ ಪರಾರಿಯಾಗಿದ್ದ. ಪೊಲೀಸರು ಅವನ ಬೆನ್ನುಬಿದ್ದಾಗ ಮುಂಬೈಗೆ ಹೋಗಿರಬಹುದಾ? ಎಂಬ ಅನುಮಾನ ಆರಂಭದಲ್ಲಿ ಸಿಸಿಬಿಗೆ ಕಾಡಿತ್ತು. ಆದ್ರೆ ಇದುವರೆಗೂ […]

10 ದಿನ ಹಿಂದೆ FIR, ಈ ಮಧ್ಯೆ.. ಭಾರತ ಬಿಟ್ಟಿರುವ ಆದಿತ್ಯ ಆಳ್ವ!?
ಆದಿತ್ಯ ಆಳ್ವಾ
Follow us on

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಹಾವಳಿ ಕೇಳಿಬರುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಿಸಿಬಿ, ಒಬ್ಬೊಬ್ಬರನ್ನಾಗಿ ಬಂಧಿಸುತ್ತಾ, ಹತ್ತಾರು ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿದೆ. ಅದಾಗಿ 10-15 ದಿನಗಳಾಗಿವೆ. ಈ ಮಧ್ಯೆ ಆರೋಪಿ ಆರು ಎಂದು ಗುರುತಿಸಿಕೊಂಡಿರುವ ಆದಿತ್ಯ ಆಳ್ವನ ಹೆಸರನ್ನೂ ಸಿಸಿಬಿ ಅಧಿಕಾರಿಗಳು FIR ನಲ್ಲಿ ದಾಖಲಿಸಿದರು.

ಇಂಡಿಯಾದಿಂದ ಎಸ್ಕೇಪ್!?
ಅದಾಗುತ್ತಿದ್ದಂತೆ ದಿ. ಜೀವರಾಜ ಆಳ್ವಾರ ಪುತ್ರ ಸದರಿ ಆರೋಪಿ ಆರು ಆದಿತ್ಯ ಆಳ್ವ ಪರಾರಿಯಾಗಿದ್ದ. ಪೊಲೀಸರು ಅವನ ಬೆನ್ನುಬಿದ್ದಾಗ ಮುಂಬೈಗೆ ಹೋಗಿರಬಹುದಾ? ಎಂಬ ಅನುಮಾನ ಆರಂಭದಲ್ಲಿ ಸಿಸಿಬಿಗೆ ಕಾಡಿತ್ತು. ಆದ್ರೆ ಇದುವರೆಗೂ ಆದಿತ್ಯನ Whereabouts ಬಗ್ಗೆ ಸಿಸಿಬಿಗೆ ಚಿಕ್ಕ ಸುಳಿವೂ ಸಿಗಲಿಲ್ಲ. ಆದ್ರೆ ಈಗ ಸ್ವತಃ ಸಿಸಿಬಿ ಮೂಲಗಳು ಮಾಹಿತಿ ನೀಡಿರುವಂತೆ ಆದಿತ್ಯ ಆಳ್ವ ಭಾರತ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆದ್ರೆ ಆತ ದೇಶ ಬಿಟ್ಟು ತೆರಳಿದ್ದು ಯಾವಾಗ? ಎಲ್ಲಿಗೆ ಹೋದ, ಯಾವ ವಿಮಾನದಲ್ಲಿ ಹಾರಿದ ಎಂಬ ಬಗ್ಗೆ ಪೊಲೀಸರಿಗೂ ಮಾಹಿತಿ ದೊರೆತಿಲ್ಲ.

Published On - 11:26 am, Tue, 15 September 20