ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು

[lazy-load-videos-and-sticky-control id=”OOvv86kktkU”] ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ. ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ […]

sadhu srinath

|

Sep 15, 2020 | 2:15 PM

[lazy-load-videos-and-sticky-control id=”OOvv86kktkU”]

ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ.

ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ ಇನ್ನಷ್ಟು ಮಾಹಿತಿ ಬಯಲಾಗುವ ಅಂದಾಜಿದೆ. ಶೇಖ್ ಫಾಝಿಲ್ ಸೆರೆ ಸಿಕ್ಕರೆ, ನಟಿ ಸಂಜನಾ ಮಾತ್ರವಲ್ಲದೆ ಶಾಸಕ ಜಮೀರ್ ಜಾತಕವನ್ನೂ ಹೊರಹಾಕಬಹುದು ಎಂಬುದು ಸಿಸಿಬಿ ಲೆಕ್ಕಾಚಾರವಾಗಿದೆ.

ಜಮೀರ್ ಪರವಾಗಿ ಶೇಖ್ ಫಾಝಿಲ್ ಹಣ ಹೂಡಿಕೆ ಮಾಡಿರುವ ಅನುಮಾನ ಸಿಸಿಬಿಗೆ ದಟ್ಟವಾಗಿದೆ. ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಜಮೀರ್ ಪರವಾಗಿ ಫಾಝಿಲ್ ಹಣ ಹೂಡಿಕೆ ಮಾಡಿರಬಹುದು ಎಂಬುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಶೇಖ್ ಫಾಝಿಲ್​ನನ್ನ ಸರೆಂಡರ್ ಮಾಡಿಸುವುದಾಗಿ ಅವನ ಕುಟುಂಬದವರು ಭರವಸೆ ನೀಡಿದ್ದಾರೆ. ಆದ್ರೆ ಸರೆಂಡರ್ ಬಗ್ಗೆ ಒಪ್ಪದೆ ಶೇಖ್ ಬಂಧನಕ್ಕೆ ಸಿಸಿಬಿ ಪ್ಲ್ಯಾನ್ ಹಾಕಿದೆ. ಹಾಗಾಗಿ ಸಿಸಿಬಿಯಿಂದ ಶೇಖ್ ಫಾಝಿಲ್ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Follow us on

Related Stories

Most Read Stories

Click on your DTH Provider to Add TV9 Kannada