ಸಂಜನಾ ಇನ್ನೂ 3 ದಿನ ಸಿಸಿಬಿ ಪೊಲೀಸರ ವಶಕ್ಕೆ

ಸಂಜನಾ ಇನ್ನೂ 3 ದಿನ ಸಿಸಿಬಿ ಪೊಲೀಸರ ವಶಕ್ಕೆ

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್​ ಬಳಕೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ, ನಟಿ ಸಂಜನಾ ಗಲ್ರಾನಿರನ್ನು ಇನ್ನೂ 3 ದಿನ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ನಟಿ ಸಂಜನಾರನ್ನು 3 ದಿನ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಜಡ್ಜ್​ ಆದೇಶ ಹೊರಡಿಸಿದ್ದಾರೆ.

ರಾಗಿಣಿಗೆ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಇಂದು ಶಿಫ್ಟ್​

ಸೆಪ್ಟೆಂಬರ್ 16ರವರೆಗೆ ಸಂಜನಾ ಗಲ್ರಾನಿ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಪ್ರಮುಖವಾಗಿ ಮೂರು ಕಾರಣಗಳನ್ನು ಮುಂದಿಟ್ಟು ಸಿಸಿಬಿ ಪೊಲೀಸರು ಸಂಜನಾರನ್ನು ತಮ್ಮ ಕಸ್ಟಡಿಗೆ ಕೇಳಿದ್ದರು. ಆ ಕಾರಣಗಳು ಹೀಗಿವೆ: ಸಂಜನಾ ವಿಚಾರದಲ್ಲಿ 1. ಡ್ರಗ್ಸ್ ಮೂಲದ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. 2. ಸಿಮ್ ಇಲ್ಲದ ಮೊಬೈಲ್‌ಗಳನ್ನು ಬಳಕೆ ಮಾಡಲಾಗಿದೆ. ಮತ್ತು 3. ಡ್ರಗ್ಸ್ ಸರಬರಾಜಿಗೆ ಹಣ ಎಲ್ಲಿಂದ ಬಂತೆಂಬ ಬಗ್ಗೆ ಮಾಹಿತಿ ಸಂಗ್ರಹಿಸಿಬೇಕಿದೆ.ಜೊತೆಗೆ 4. ಸಂಜನಾ ಈವರೆಗೂ ತನಿಖೆಗೆ ಸಂಪೂರ್ಣ ಸಹಕರಿಸಿಲ್ಲ. ಹೀಗಾಗಿ 5 ದಿನಗಳ ಕಸ್ಟಡಿಗೆ ಮನವಿ ಮಾಡಲಾಗಿತ್ತು.ಈ ಕಾರಣಗಳನ್ನು ನೀಡಿ ಆರೋಪಿ ಸಂಜನಾರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ ಕೋರ್ಟ್​ಗೆ ಮನವಿ ಮಾಡಿತ್ತು.

ಎಸ್​ಪಿಪಿ ವಾದಕ್ಕೆ ಸಂಜನಾ ಪರ ವಕೀಲ ಶ್ರೀನಿವಾಸ್ ರಾವ್ ಆಕ್ಷೇಪಣೆ ಹೀಗಿತ್ತು..
1. ಸಂಜನಾ ಆ ಮೂರು ಮೊಬೈಲ್​ಗಳಲ್ಲಿ ಸಿಮ್ ಬಳಕೆ ಮಾಡಿಲ್ಲ. ಸಾಮಾಜಿಕ ಜಾಲತಾಣಕ್ಕಾಗಿ ವೈಫೈ ಬಳಕೆ ಮಾಡಿದ್ದರು. ಅನುಮಾನವಿದ್ದರೆ ತಾಂತ್ರಿಕ ತಜ್ಞರನ್ನು ಕೇಳಲಿ. ಅದಕ್ಕಾಗಿ ಕಸ್ಟಡಿ ಬೇಡ. 2. ಸಂಜನಾರಿಂದ ಡ್ರಗ್ಸ್ ರಿಕವರಿ ಆಗಿಲ್ಲ. ಹೀಗಿರುವಾಗ ಡ್ರಗ್ಸ್ ಮೂಲ ಪತ್ತೆ ಹಚ್ಚಲಿಕ್ಕಾಗಿ ಸಂಜನಾ ಕಸ್ಟಡಿ ಅನವಶ್ಯಕ. 3. ಡ್ರಗ್ಸ್ ಪಡೆದಿರುವುದೇ ಸಾಬೀತಾಗಿಲ್ಲ. ಹೀಗಿರುವಾಗ ಹಣದ ಹೂಡಿಕೆ ಪತ್ತೆಗಾಗಿ ಸಂಜನಾರನ್ನು ಕಸ್ಟಡಿಗೆ ನೀಡಬಾರದು. 4. ಸಂಜನಾ ತನಿಖೆಗೆ ಸಹಕರಿಸಿದ್ದಾರೆ. ಕಸ್ಟಡಿಯಿಂದ ಗೊತ್ತಿಲ್ಲದ ಉತ್ತರ ಹೇಳಿಸಲು ಸಾಧ್ಯವಿಲ್ಲ.

Click on your DTH Provider to Add TV9 Kannada