ಮೈಸೂರು: ರಕ್ಷಿಸಬೇಕಾದವಳೇ ಸುಪಾರಿ ಕೊಟ್ಟು ಕೊಲ್ಲಿಸಿದ್ಲಾ ಲೇಡಿ ಪೊಲೀಸ್ ಕಾನ್ಸ್​ಟೇಬಲ್?

ಯುವಕನೋರ್ವನನ್ನು ಲೇಡಿ ಪೊಲೀಸ್ ಕಾನ್ಸಟೇಬಲ್ ಸುಪಾರಿ ನೀಡಿ ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.

ಮೈಸೂರು: ರಕ್ಷಿಸಬೇಕಾದವಳೇ ಸುಪಾರಿ ಕೊಟ್ಟು ಕೊಲ್ಲಿಸಿದ್ಲಾ ಲೇಡಿ ಪೊಲೀಸ್ ಕಾನ್ಸ್​ಟೇಬಲ್?
ಮೃತ ಗುರುಪ್ರಸಾದ್​​
Edited By:

Updated on: Jan 01, 2023 | 8:24 PM

ಮೈಸೂರು: ಆತ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದ ಯುವಕ, ಕಳೆದ ಭಾನುವಾರ ಇದ್ದಕ್ಕಿದಂತೆ ನಾಪತ್ತೆಯಾಗಿ, ವಾರದ ನಂತರ ಆತ ಶವವಾಗಿ ಪತ್ತೆಯಾಗಿದ್ದಾನೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹೊಸ ನರಿಪುರ ಗ್ರಾಮದಲ್ಲಿ, 30 ವರ್ಷದ ಗುರುಪ್ರಸಾದ್ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಕಳೆದ ಭಾನುವಾರ (ಡಿ.25/2022) ಕ್ರಿಸ್‌ಮಸ್‌ ದಿನ ಗುರುಪ್ರಸಾದ್ ನಾಪತ್ತೆಯಾಗಿದ್ದನು. ಯಾರೋ ಮೂವರು ಅಪರಿಚಿತರು ಗುರುಪ್ರಸಾದ್‌ನನ್ನು ಅಪಹರಣ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದಾದ ವಾರದ ನಂತರ ಗುರುಪ್ರಸಾದ್ ಶವ ಪತ್ತೆಯಾಗಿದೆ.

ಗುರುಪ್ರಸಾದ್ ಶವ ಟಿ ನರಸೀಪುರ ತಾಲ್ಲೂಕಿನ ಕಾವೇರಿಪುರದ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗುರುಪ್ರಸಾದ್‌ನನ್ನು ಆತನ ಸಂಬಂಧಿ ಮಧು ಎಂಬಾಕೆ ಕೊಲೆ ಮಾಡಿಸಿದ್ದಾಳೆ ಅನ್ನೋದು ಗುರುಪ್ರಸಾದ್ ಪೋಷಕರ ಆರೋಪ. ಹಾಗಿದ್ದರೇ ಈ ಗುರುಪ್ರಸದ್​ಗು ಮತ್ತು ಮಧುಗು ಏನು ಸಂಬಂಧ? ಏನು ಇವರಿಬ್ಬರ ನಡುವಿನ ಕಹಾನಿ? ಇಲ್ಲೇ ತೆರೆದುಕೊಳ್ಳುವುದು ಪ್ರೇಮಕಾವ್ಯ….

ಇದನ್ನೂ ಓದಿ: ವರದಕ್ಷಿಣೆ, ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಪತ್ನಿಯನ್ನೇ ಕೊಂದ ಪತಿ

ಮಧು ಪೊಲೀಸ್ ಕಾನ್ಸಟೇಬಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ಗುರುಪ್ರಸಾದ್ ಹಾಗೂ ಮಧು ದೂರದ ಸಂಬಂಧಿಗಳು. ವರಸೆಯಲ್ಲಿ ಅಣ್ಣ ತಂಗಿಯಂತೆ. ಆದರೂ ಇವರಿಬ್ಬರು ನಡುವೆ ಪ್ರೇಮಾಂಕುರವಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಇವರ ಪ್ರೀತಿಗೆ ಎರಡು ಮನೆಯವರಿಗೂ ಇಷ್ಟವಿರಲಿಲ್ಲವಂತೆ. ಇದೀಗ ಆಕೆಯೇ ಗುರುಪ್ರಸಾದನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಅವಳಿಗೆ ಗಲ್ಲು ಶಿಕ್ಷೆ ಕೊಡಿಸಿ ಅಂತಾ ಗುರುಪ್ರಸಾದ್ ಪೋಷಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಸ್​ಗಾಗಿ ಪ್ರತಿಭಟನೆ ನಡೆಸಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಓರ್ವ ವಿದ್ಯಾರ್ಥಿನಿ ಸಾವು, ಇಬ್ಬರಿಗೆ ಗಂಭೀರ ಗಾಯ

ಈ ಸಂಬಂಧ ನರಸೀಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಗುರುಪ್ರಸಾದ್ ಸಾವಿನ ರಹಸ್ಯ ಬಯಲಾಗಲಿದೆ. ಇದೆಲ್ಲಾ ಏನೇ ಇರಲಿ ಬಾಳಿ ಬದುಕಬೇಕಾದ ಯುವಕನ ಬದುಕು ಈ ರೀತಿ ಅಂತ್ಯವಾಗಿದ್ದು ದುರಂತವೇ ಸರಿ.

ವರದಿ- ರಾಮ್ ಟಿವಿ9 ಮೈಸೂರು

Published On - 8:23 pm, Sun, 1 January 23