ಬೆಂಗಳೂರು: ನಗರದ ಬನಶಂಕರಿ ಪೊಲೀಸ್ ಠಾಣೆಯ(Banashankari Police Station) ಕಾನ್ಸ್ಟೇಬಲ್ ಯಲ್ಲಪ್ಪ ಎಂಬಾತ ಕಳ್ಳತನಕ್ಕೆ ಸಹಾಯ ಮಾಡಿದ್ದಾನೆ ಎಂಬ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ. ಯಲ್ಲಪ್ಪ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ಟೇಬಲ್ ಆಗಿದ್ದನು. ಬನಶಂಕರಿ ಠಾಣೆಯ ಪೊಲೀಸರು ಕಳ್ಳತನದ ಗ್ಯಾಂಗ್ ಒಂದನ್ನ ಬಂಧನ ಮಾಡಿದ್ದರು. ಆ ಆರೋಪಿಗಳ ವಿಚಾರಣೆ ವೇಳೆ ಕಳ್ಳರು ಕಳ್ಳತನದಲ್ಲಿ ಯಲ್ಲಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಯಲ್ಲಪ್ಪನನ್ನು ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿದೆ.
ಮಡಿಕೇರಿಯಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ
ಮಡಿಕೇರಿ: ವಿವಾಹಿತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಸೌಮ್ಯ (39) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಯೋಧನ ಪತ್ನಿಯಾಗಿರುವ ಸೌಮ್ಯ ಮಡಿಕೇರಿಯ ಚೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಸೌಮ್ಯ ಆತ್ಮಹತ್ಯೆಗೆ ಚೆಸ್ಕಾಂ ಎಂಜಿನಿಯರ್ ವಿನಯ್ ಎಂಬಾತನೇ ಕಾರಣ ಎಂದು ಮೃತ ಮಹಿಳೆಯ ತಾಯಿ ಆರೋಪಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೆಸ್ಕಾಂ ಎಂಜಿನಿಯರ್ ವಿನಯ್ ನನ್ನ ಮಗಳಿಗೆ ಫೋನ್ ಕಾಲ್, ಮೆಸೇಜ್ನಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇನ್ನು ಚೆಸ್ಕಾಂ ಎಂಜಿನಿಯರ್ ವಿನಯ್ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಜಮಖಂಡಿ: ಸಾಲಬಾಧೆ ತಾಳಲಾರದೆ ಸಲೂನ್ ಮಾಲೀಕ ಆತ್ಮಹತ್ಯೆ
ಸೂಪರ್ ಮಾರ್ಕೆಟ್ನ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಸಾವು
ದಾವಣಗೆರೆ: ಚನ್ನಗಿರಿಯಲ್ಲಿ ತಮ್ಕೋಸ್ ಸೂಪರ್ ಮಾರ್ಕೆಟ್ನ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ತಾಲೂಕಿನ ಗಂಡುಗನಹಂಕಲು ಗ್ರಾಮದ ನಿವಾಸಿ ಕಾರ್ಮಿಕ ಕುಮಾರ್ ಎಸ್. ನಾಯ್ಕ್(39) ಚಿಕಿತ್ಸೆ ಫಲಿಸದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಕುಮಾರ್ ನಾಯ್ಕಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಘಟನೆ ಸಂಬಂಧ ಕುಮಾರ್ ಪೋಷಕರು ಸೂಕ್ತ ಸುರಕ್ಷತೆ ಕ್ರಮ ಕಲ್ಪಿಸದ ಸೂಪರ್ ಮಾರ್ಕೆಟ್ ಸಿಬ್ಬಂದಿ ವಿರುದ್ಧ ಚನ್ನಗಿರಿ ಠಾಣೆಗೆ ದೂರು ನೀಡಿದ್ದು, ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಸೇರಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ