ನನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ -ಎಸ್ಕೇಪ್ ಆಗಿರೋ A6 ಆದಿತ್ಯ ಆಳ್ವ ಹೊಸ ಪ್ಲಾನ್!
ಬೆಂಗಳೂರು: ಆಶ್ಚರ್ಯಕರ ಬೆಳವಣಿಗೆ ಒಂದರಲ್ಲಿ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಬಳಕೆ ಪ್ರಕರಣದ A6 ಆರೋಪಿ ಆದಿತ್ಯ ಆಳ್ವ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಹೌದು, A6 ಆರೋಪಿ ಆದಿತ್ಯ ಆಳ್ವ ತನ್ನ ವಿರುದ್ಧದ FIR ಪ್ರಕರಣವನ್ನ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಈ ನಡುವೆ ಸದಾಶಿವನಗರದಲ್ಲಿರುವ ಆದಿತ್ಯನ ಮನೆಯನ್ನ ಶೋಧ ನಡೆಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ […]
ಬೆಂಗಳೂರು: ಆಶ್ಚರ್ಯಕರ ಬೆಳವಣಿಗೆ ಒಂದರಲ್ಲಿ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಬಳಕೆ ಪ್ರಕರಣದ A6 ಆರೋಪಿ ಆದಿತ್ಯ ಆಳ್ವ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಹೌದು, A6 ಆರೋಪಿ ಆದಿತ್ಯ ಆಳ್ವ ತನ್ನ ವಿರುದ್ಧದ FIR ಪ್ರಕರಣವನ್ನ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಈ ನಡುವೆ ಸದಾಶಿವನಗರದಲ್ಲಿರುವ ಆದಿತ್ಯನ ಮನೆಯನ್ನ ಶೋಧ ನಡೆಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿ, ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ.