ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರೋದು ಸಾಧ್ಯವೇ ಇಲ್ಲ ಅನ್ನುತ್ತಾರೆ, ಆದರೆ ಯುಎಸ್ ನ್ಯೂಜೆರ್ಸಿಯಲ್ಲಿರುವ ಟಿಟರ್ ಬೋರೊ ವಾಲ್ಮಾರ್ಟ್ ನಲ್ಲಿ (Walmart) ನಡೆದ ಕ್ರೂರ ಘಟನೆಯೊಂದರ ಬಗ್ಗೆ ಓದಿದ ಬಳಿಕ ಎಲ್ಲ ತಾಯಂದಿರು ಒಳ್ಳೆಯವರಾಗಿರಲಾರರು ಅನ್ನೋದು ಸ್ಪಷ್ಟವಾಗುತ್ತದೆ. ಈ ಸೂಪರ್ ಮಾರ್ಕೆಟ್ ನಲ್ಲಿ (super market) ತಾಯೊಬ್ಬಳು ತನ್ನ ಹೆಣ್ಣಮಗುವಿಗೆ ನೆಲದ ಮೇಲೆ ಕೊಡವಿ ಮನಬಂದಂತೆ ಒದ್ದಿದ್ದಾಳೆ. ಯಾಕೆ ಗೊತ್ತಾ? ಈ ಹೆಂಗಸು ಸೂಪರ್ ಮಾರ್ಕೆಟ್ ನಲ್ಲಿ ಕಳುವು ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. ಆ ಅವಮಾನವನ್ನು ಕೋಪವಾಗಿ ಮಾರ್ಪಡಿಸಿಕೊಂಡು ಅದನ್ನು ತನ್ನ ಮಗುವಿನ ಮೇಲೆ ತೀರಿಸಿಕೊಂಡಿದ್ದಾಳೆ ಧೂರ್ತ ಹೆಂಗಸು! 23-ವರ್ಷ-ವಯಸ್ಸಿನ ಜಮೀರಾ ಮ್ಯಾಕ್ ಡ್ಯಾನಿಯೇಲ್ (Jamira Mac Daniel) ಮಗು ಮೊದಲ ಮಹಡಿಯಿಂದ ನೆಲಮಾಳಿಗೆಗೆ ಹೋಗಿ ಬೀಳುವಷ್ಟು ಜೋರಾಗಿ ಒದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಡಿಸೆಂಬರ್ 13ರಂದು ನಡೆದಿದ್ದು ವಾಲ್ಮಾರ್ಟ್ ನ ಭದ್ರತಾ ಸಿಬ್ಬಂದಿ ಮ್ಯಾಕ್ ಡ್ಯಾನಿಯೇಲ್ ಳನ್ನು ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಮೂನಾಚಿ ಪೊಲೀಸ್ ಮುಖ್ಯಸ್ಥ ಜೆಫ್ ನಪೊಲಿಟ್ಯಾನೊ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ ಮ್ಯಾಕ್ ಡ್ಯಾನಿಯೇಲ್ ಮಗುವನ್ನು ಒದೆಯುವ ದೃಶ್ಯ ಸೆಕ್ಯೂರಿಟಿ ಕೆಮೆರಾಗಳಲ್ಲಿ ಸೆರೆಯಾಗಿದೆ. ಫುಟೇಜನ್ನು ಟಿಟೊ ಬರ್ಜೆನ್ ಕೌಂಟಿ ಕಚೇರಿಗೆ ಕಳಿಸಲಾಗಿದೆಯಾದರೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಮ್ಯಾಕ್ ಡ್ಯಾನಿಯೇಲ್ ತನ್ನ ಒಂದೂವರೆ ವರ್ಷದ ಮಗು ಹಾಗೂ ಮಗುವಿನ ಆಂಟಿ ಜೊತೆ ವಾಲ್ಮಾರ್ಟ್ ಗೆ ಹೋಗಿದ್ದಳು.
ಇದನ್ನೂ ಓದಿ: Covid Guidelines: ವಿದೇಶದಿಂದ ಬರುವವರಿಗೆ ಕೋವಿಡ್ ಮಾರ್ಗಸೂಚಿ ಪರಿಷ್ಕರಣೆ, ಇಲ್ಲಿದೆ ಮಾಹಿತಿ
ಆರೋಪಿಯು ಮಗುವನ್ನು ಒದೆಯಲಾರಂಭಿಸಿದ ನಂತರ ಭದ್ರತಾ ಸಿಬ್ಬಂದಿ ಅದನ್ನು ಎತ್ತಿಕೊಂಡು ಮಗುವಿನ ಆಂಟಿ ಕೈಗೆ ಕೊಟ್ಟಿದ್ದಾರೆ. ಅದಾದ ಮೇಲೆ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ.
‘ಆಂಟಿಯ ಕೈಯಲ್ಲಿದ್ದ ಮಗು ಒಂದೇ ಸಮ ಅಳುತ್ತಾ ಜೋರಾಗಿ ಕಿರುಚುತ್ತಿದ್ದರಿಂದ ಮ್ಯಾಕ್ ಡ್ಯಾನಿಯೇಲ್ ಮಗುವಿಗೆ ಅಳು ನಿಲ್ಲಿಸುವಂತೆ ಒದರಿ ಸಿಟ್ಟಿನಿಂದ ತನ್ನ ಮುಂದಿನ ಗೋಡೆಗೆ ಗುದ್ದುತ್ತಿದ್ದಳು,’ ಎಂದು ನಪೊಲಿಟ್ಯಾನೊ ಹೇಳಿದ್ದಾರೆ.
ಅದೇ ಸಮಯಕ್ಕೆ ಪೊಲೀಸರು ಅಲ್ಲಿಎ ಧಾವಿಸಿದರು ಮತ್ತು ಮಗುವಿಗೆ ಗಂಭೀರ ಗಾಯಗಳಾಗಿವೆಯೇ ಅಂತ ಪರೀಕ್ಷಿಸಲು ಅಂಬ್ಯುಲೆನ್ಸ್ ಒಂದನ್ನು ಅಲ್ಲಿಗೆ ಕರೆಸಲಾಯಿತು. ಪುಣ್ಯವಶಾತ್ ಮಗುವಿಗೆ ತೀವ್ರಸ್ವರೂಪದ ಗಾಯಗಳೇನೂ ಆಗಿಲ್ಲ. ಮ್ಯಾಕ್ ಡ್ಯಾನಿಯೇಲ್ ಮೇಲೆ ಮಗುವಿನ ಜೀವಕ್ಕೆ ಅಪಾಯ ಒಡ್ಡಿದ, ಹಲ್ಲೆ, ಕಳ್ಳತನ ಮತ್ತು ಅಪಾರಾಧೀ ಕೃತ್ಯಗಳನ್ನು ನಡೆಸಿದ ಚಾರ್ಜ್ ಗಳನ್ನು ಹೇರಲಾಗಿದೆ. ಆಕೆಯನ್ನು ಬರ್ಜೆನ್ ಕೌಂಟಿಯ ಜೈಲಿಗೆ ಕಳಿಸಲಾಗಿದೆ. ಮಗುವಿನ ಆಂಟಿಯ ವಿರುದ್ಧ ಯಾವುದೇ ಆರೋಪ ದಾಖಲಾಗಿಲ್ಲ ಮತ್ತು ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ.
ಮಕ್ಕಳು ಬಹಳ ಸೂಕ್ಷ್ಮಮನಸ್ಸಿನ ಜೀವಿಗಳಾದರೂ ಅಮೆರಿಕದಲ್ಲಿ ಅವರ ಮೇಲೆ ಹಿಂಸಾಕೃತ್ಯಗಳು ನಡೆಯುತ್ತಿವೆ. ಹಿಂಸಾ ಸನ್ನಿವೇಶಗಳಲ್ಲಿ ಬೆಳೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಸುಮಾರು ಮೂರು ತಿಂಗಳು ಹಿಂದೆ ಅಮೆರಿಕಾದ ಅರ್ಕನಾಸ್ ನ ಬ್ಲ್ಯೂ ರೋಲಾಂಡ್ ಹೆಸರಿನ 6-ವರ್ಷ-ವಯಸ್ಸಿನ ಬಾಲಕನ ದೇಹ ಚರಂಡಿಯೊಂದರ ತಳಭಾಗದಲ್ಲಿ ಪತ್ತೆಯಾಗಿತ್ತು. ಬಾಲಕನ ತಾಯಿಯ ಬಾಯ್ ಫ್ರೆಂಡ್ ಶಿಕ್ಷೆಯ ರೂಪದಲ್ಲಿ ಅವನನ್ನು ಟಾಯ್ಲೆಟ್ ನಲ್ಲಿ ಮುಳುಗಿಸಿ ಕೊಂದನೆಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಅಡಿಲೇಡ್ ಸಾಮರ್ಟನ್ ಬೀಚಲ್ಲಿ ಶವವಾಗಿ ಸಿಕ್ಕ ವ್ಯಕ್ತಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದನೇ?
ರೋಲಾಂಡ್, ಮೆಂಫಿಸ್ ಪಶ್ಚಿಮ ಭಾಗಕ್ಕಿರುವ ಮೋರೊ ಎಂಬಲ್ಲಿರುವ ತನ್ನ ಕುಟುಂಬದ ಮನೆಯಲ್ಲಿ ಮೂರು ತಿಂಗಳು ಹಿಂದೆಯೇ ಕೊಲೆಯಾದನಾದರೂ ಅವನ ದೇಹ ಕಳೆದ ಶುಕ್ರವಾರ ಸಿಕ್ಕಿದೆ.
ಲೀ ಕೌಂಟಿ ಸರ್ಕ್ಯೂಟ್ ಕೋರ್ಟ್ ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಮೃತ ಬಾಲಕನ 28-ವರ್ಷ-ವಯಸ್ಸಿನ ತಾಯಿ ಆಶ್ಲೀ ರೊಲಾಂಡ್ ಪೊಲೀಸರಿಗೆ ನೀಡಿರುವ ಹೇಳಿಕೆಯೂ ಸೇರಿದ್ದು, ಆಕೆ ತನ್ನ ಬಾಯ್ ಫ್ರೆಂಡ್ ನೇಥನ್ ಬ್ರಿಜಸ್ ಮಗುವನ್ನು ಕೊಂದನೆಂದು ಹೇಳಿದ್ದಾಳೆ. ತನ್ನ ಬೆರಳನ್ನು ಕಚ್ಚಿದ್ದಕ್ಕೆ ಬ್ರಿಜಸ್ ಕೋಪಗೊಂಡು ಶಿಕ್ಷೆಯ ಭಾಗವಾಗಿ ತನ್ನ ಮಗನ ತಲೆಯನ್ನು ಟಾಯ್ಲೆಟ್ ನಲ್ಲಿ ಮುಳಗಿಸಿ ಅವನು ಉಸಿರುಗಟ್ಟಿ ಸಾಯುವವರೆಗೆ ತಲೆಯನ್ನು ಹಿಡಿದೇ ಇದ್ದ ಎಂದು ಆಶ್ಲೀ ರೊಲಾಂಡ್ ಹೇಳಿದ್ದಾಳೆ. ಈ ಕೊಲೆ ನಡೆದಿದ್ದು ಸೆಪ್ಟೆಂಬರ್ 9 ರಂದು. ಆಶ್ಲೀಯ ಮೇಲೂ ಕೊಲೆ, ಸಾಕ್ಷ್ಯವನ್ನು ಅಳಿಸುವ ಪ್ರಯತ್ನ, ಅಪ್ರಾಪ್ತನ ಜೀವಕ್ಕೆ ಅಪಾಯಕ್ಕೊಡ್ಡಿದ ಮತ್ತು ಮಗುವಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪಗಳನ್ನು ಹೊರಿಸಲಾಗಿದೆ.
ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ