ರಿಕವರಿ ಹಣ ದುರುಪಯೋಗ ಆರೋಪ: ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಮತ್ತೆರಡು ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2023 | 3:42 PM

ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಗೆ ಮತ್ತೆರಡು ದೂರು ಸಲ್ಲಿಕೆ ಮಾಡಲಾಗಿದೆ. ಪ್ರಕರಣ ಸಂಬಂಧ ಶಂಕರ ನಾಯಕ್ 8.85 ಲಕ್ಷ ರೂ. ವಶಕ್ಕೆ ಪಡೆದಿದ್ದರು. ಹಣ ಹಿಂದಿರುಗಿಸಲು ಸೂಚಿಸುವಂತೆ ಬೆಂಗಳೂರಿನ 31ನೇ ಎಸಿಎಂಎಂ ಕೋರ್ಟ್​ಗೆ ವಸಂತಾ ಅರ್ಜಿ ಸಲ್ಲಿಸಿದ್ದರು.

ರಿಕವರಿ ಹಣ ದುರುಪಯೋಗ ಆರೋಪ: ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಮತ್ತೆರಡು ದೂರು
ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್
Follow us on

ಬೆಂಗಳೂರು, ಡಿಸೆಂಬರ್​​​​ 11: ಸಿಸಿಬಿ (CCB) ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಗೆ ಮತ್ತೆರಡು ದೂರು ಸಲ್ಲಿಕೆ ಮಾಡಲಾಗಿದೆ. ಪ್ರಕರಣ ಸಂಬಂಧ ಶಂಕರ ನಾಯಕ್ 8.85 ಲಕ್ಷ ರೂ. ವಶಕ್ಕೆ ಪಡೆದಿದ್ದರು. ಹಣ ಹಿಂದಿರುಗಿಸಲು ಸೂಚಿಸುವಂತೆ ಬೆಂಗಳೂರಿನ 31ನೇ ಎಸಿಎಂಎಂ ಕೋರ್ಟ್​ಗೆ ವಸಂತಾ ಅರ್ಜಿ ಸಲ್ಲಿಸಿದ್ದರು. ಹಣ ಹಿಂದಿರುಗಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಆದರೆ ಹಣ ಬಿಡುಗಡೆ ಮಾಡದೆ ಶಂಕರ ನಾಯಕ್ ಸತಾಯಿಸಿದ್ದಾರೆ. ಬಿಳಿಹಾಳೆ ಮೇಲೆ ಸಹಿ ಹಾಕುವಂತೆ ಹೇಳಿದ್ದರಂತೆ. ಸಹಿ ಹಾಕಲು ಒಪ್ಪದಿದ್ದಾಗ ಕೇಸ್ ಹಾಕುವುದಾಗಿ ಬೆದರಿಕೆ ಆರೋಪ ಮಾಡಲಾಗಿದೆ.

ಶಂಕರ ನಾಯಕ್ ವಿರುದ್ಧ ಪಶ್ಚಿಮ ವಿಭಾಗದ ಡಿಸಿಪಿಗೆ ಪುತ್ರ ಸುಮಿತ್​ರನ್ನು ಅಕ್ರಮ ಬಂಧನದಲ್ಲಿರಿಸಿದ ಆರೋಪದಡಿ ದೂರು ನೀಡಲಾಗಿದೆ. ಸಿಪಿಯು, ಲ್ಯಾಪ್​ಟಾಪ್, ಪೆನ್​ಡ್ರೈವ್ ಹಿಂದಿರುಗಿಸಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗೆ ಸಂಧ್ಯಾ ರಮೇಶ್ ಎಂಬುವರಿಂದ ದೂರು ನೀಡಲಾಗಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ 50 ಲಕ್ಷ ರೂ. ಹಣ ವಂಚನೆ ಆರೋಪ

ರಾಮನಗರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ವಿರುದ್ಧ ಹಣ ವಂಚನೆ ಆರೋಪ ಕೇಳಿಬಂದಿದೆ. ಚನ್ನಪ್ಟಣದ ವಿದ್ಯುತ್ ಗುತ್ತಿಗೆದಾರ ಸುರೇಶ್ ಬಾಬು ಎಂಬುವವರಿಗೆ 50 ಲಕ್ಷ ರೂ. ವಂಚನೆ ಆರೋಪ ಮಾಡಿದ್ದಾರೆ. 2017ರಲ್ಲಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯನ್ನ ಉಪಗುತ್ತಿಗೆ ನೀಡಿದ್ದರು. ಗಂಗಾಧರ್ ರಿಂದ ಸುರೇಶ್ ಬಾಬು ಉಪಗುತ್ತಿಗೆ ಪಡೆದಿದ್ದರು.

ಇದನ್ನೂ ಓದಿ: ಇನ್​ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧದ ಪ್ರಕರಣ ಸಿಸಿಬಿಗೆ ವರ್ಗಾವಣೆ, ದಾಖಲಾಯ್ತು ಮತ್ತೊಂದು ಪ್ರಕರಣ

2020ರಲ್ಲಿ ಕಾಮಗಾರಿ ಮುಗಿಸಿ ಬಿಲ್ ಕೊಟ್ಟಿದ್ದ ಸುರೇಶ್ ಬಾಬು‌, ಕಾಮಗಾರಿ ಮುಗಿದು ಮೂರು ವರ್ಷ ಕಳೆದಿದ್ದರು ಹಣ ನೀಡಿಲ್ಲ. ಹಣ ಕೇಳಿದ್ದಕ್ಕೆ ಬೆಂಬಲಿಗರಿಂದ ಬೆದರಿಕೆ ಹಾಕಿಸಿರುವ ಆರೋಪ ಮಾಡಲಾಗಿದೆ. ಸುಮಾರು 50 ಲಕ್ಷ ರೂ. ಹಣ ನೀಡದೇ ವಂಚನೆ ಮಾಡಿದ್ದಾರೆ. ನ್ಯಾಯ ದೊರಕಿಸಿ ಕೊಡುವಂತೆ ಗುತ್ತಿಗೆದಾರ ಸುರೇಶ್ ಬಾಬು ಅಳಲು ತೊಡಿಕೊಂಡಿದ್ದಾರೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಟೈರ್ ಬ್ಲಾಸ್ಟ್: ಡಿವೈಡರ್​ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದ ಕಾರು

ರಾಮನಗರ: ಟೈರ್ ಬ್ಲಾಸ್ಟ್ ಡಿವೈಡರ್​​ಗೆ ಕಾರು ಗುದ್ದಿ ಪರಿಣಾಮ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿರುವಂತಹ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಬಳಿ ನಡೆದಿದೆ. ಸೀಟ್​ ಬೆಲ್ಟ್ ಹಾಕಿದ್ದಕ್ಕೆ ಯುವಕ ಬಚಾವ್ ಆಗಿದ್ದಾನೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ. ಕಾರಿನ ಅವಸ್ಥೆ ನೋಡಿ ಚಾಲಕ ಬದುಕಿದ್ದೇ ಪವಾಡ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.