ಸರ್ಕಾರಕ್ಕೆ ವಂಚನೆ: ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ದೂರು ದಾಖಲು

| Updated By: Rakesh Nayak Manchi

Updated on: Oct 07, 2022 | 10:32 AM

ಸರ್ಕಾರಿ ಕಾರ್ಯಾಲಯದ ಖಾತೆಯಿಂದ 2 ಲಕ್ಷ ಹಣ ಅಕ್ರಮವಾಗಿ ಡ್ರಾ ಮಾಡಿಕೊಂಡ ಆರೋಪ ಜಿಲ್ಲೆಯ ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಕೇಳಿಬಂದಿದ್ದು, ಅಫಜಲಪುರ ತಾಲೂಕು ಗಾಣಗಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ಕಾರಕ್ಕೆ ವಂಚನೆ: ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ದೂರು ದಾಖಲು
ಸರ್ಕಾರಕ್ಕೆ ವಂಚನೆ: ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ದೂರು ದಾಖಲು
Follow us on

ಕಲಬುರಗಿ: ಸರ್ಕಾರಿ ಕಾರ್ಯಾಲಯದ ಖಾತೆಯಿಂದ 2 ಲಕ್ಷ ಹಣ ಅಕ್ರಮವಾಗಿ ಡ್ರಾ ಮಾಡಿಕೊಂಡ ಆರೋಪ ಜಿಲ್ಲೆಯ ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಕೇಳಿಬಂದಿದ್ದು, ಅಫಜಲಪುರ ತಾಲೂಕು ಗಾಣಗಾಪುರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆಳಂದ ತಾಲೂಕು ಆರೋಗ್ಯಾಧಿಕಾರಿ ಸುಶೀಲ್ ಕುಮಾರ ಅಂಬೂರೆ ವಿರುದ್ಧ ತಾಲ್ಲೂಕಿನ ಗೊಬ್ಬೂರ್ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಬ್ದುಲ್ ಅಜೀಜ್ ದೂರು ನೀಡಿದ್ದಾರೆ. ಈ ಹಿಂದೆ ಗೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ.ಸುಶೀಲಕುಮಾರ್ ಅಂಬೂರೆ ಅವರು 2021 ರಲ್ಲಿ ಗೊಬ್ಬುರು ಬಿ ಯಿಂದ ಆಳಂದಗೆ ವರ್ಗಾವಣೆ ಯಾಗಿದ್ದರು. ವರ್ಗಾವಣೆಯಾದ ಮೇಲೂ ಅವರು ಹಣ ಡ್ರಾ ಮಾಡಿಕೊಂಡಿರುವುದಾಗಿ ಆರೋಪ ಮಾಡಲಾಗಿದ್ದು, ಸರ್ಕಾರಕ್ಕೆ ಡಾ.ಸುಶೀಲಕುಮಾರ್ ವಂಚನೆ ಮಾಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾವಿನಲ್ಲೂ ಒಂದಾದ ಅಣ್ಣ-ತಮ್ಮ

ಹಾಸನ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಹೋದರರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ವಡಗರಹಳ್ಳಿಯಲ್ಲಿ ನಿನ್ನೆ (ಅ.6) ನಡೆದಿದೆ. ವಡಗರಹಳ್ಳಿ ಗ್ರಾಮದಲ್ಲಿ ಗಣಪತಿಯನ್ನು ಕೂರಿಸಲಾಗಿತ್ತು. ಅದರಂತೆ ವಿಗ್ರಹದ ವಿಸರ್ಜನೆ ವೇಳೆ ಖಾಸಗಿ ಸಂಸ್ಥೆ ಇಂಜಿನಿಯರ್ ಆಗಿದ್ದ ಪ್ರವೀಣ್​(27) ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನೊಂದಿಗೆ ಅದೇ ಊರಿನ ನಾಗರಾಜ್ (32) ಎಂಬವರು ಕೂಡ ನೀರಿನಲ್ಲು ಮುಳುಗಿ ಸಾವನ್ನಪ್ಪಿದ್ದಾರೆ. ತಮ್ಮನ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಹಾಸನಕ್ಕೆ ಬಂದ ಪ್ರವೀಣ್ ಸಹೋದರ ಮಧು (37) ತಮ್ಮನ ಮೃತದೇಹ ನೋಡಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಹೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ದೇಗುಲಕ್ಕೆ ನುಗ್ಗಿ ಹುಂಡಿ ಹಣ ಕದ್ದ ಖದೀಮರು

ಮೈಸೂರು: ಬೇತಾಳೇಶ್ವರಿ ದೇಗುಲಕ್ಕೆ ನುಗ್ಗಿ ಹುಂಡಿ ಹಣ ಕಳವು ಮಾಡಿದ ಘಟನೆ ತಾಲ್ಲೂಕಿನ  ಭುಗತಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬೇತಾಳೇಶ್ವರಿ ದೇಗುಲಕ್ಕೆ ನುಗ್ಗಿದ ಖದೀಮರು ದೇವಸ್ಥಾನಕ್ಕೆ ಒಂದು ಸುತ್ತು ಹಾಕಿ ಹುಂಡಿಯಲ್ಲಿದ್ದ ಹಣವನ್ನು ಕದ್ದಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರು ತಲೆಗೆ ಟೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕಳ್ಳತನ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Fri, 7 October 22