‘ಅಲಯನ್ಸ್ ಅಯ್ಯಪ್ಪ’ ಹತ್ಯೆ ಪ್ರಕರಣ: ಡಬಲ್​ ಮರ್ಡರ್​ ಜಸ್ಟ್​ ಮಿಸ್, ಸದ್ಯಕ್ಕೆ ಇಬ್ಬರ ಅರೆಸ್ಟ್

ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಅಯ್ಯಪ್ಪ ದೊರೆ, ಮಾರನೆಯ ದಿನ ಎಚ್‌ಎಂಟಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ಈಗ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ. ಮಧುಕರ್ ಅಂಗೂರ್ ಹತ್ಯೆಗೂ ಹೊಂಚು ಹಾಕಿದ್ದರು: ಅಯ್ಯಪ್ಪ ಹತ್ಯೆಗೆ ಸುಧೀರ್ ಎಂಬಾತ ಸೂರಜ್ ಎಂಬಾತನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. 2017ರಲ್ಲಿ ಅಲಯನ್ಸ್ ವಿವಿಯಲ್ಲಿ ಸುಧೀರ್ ಅಂಗೂರ್ ಹಾಗೂ […]

'ಅಲಯನ್ಸ್  ಅಯ್ಯಪ್ಪ' ಹತ್ಯೆ ಪ್ರಕರಣ: ಡಬಲ್​ ಮರ್ಡರ್​ ಜಸ್ಟ್​ ಮಿಸ್, ಸದ್ಯಕ್ಕೆ ಇಬ್ಬರ ಅರೆಸ್ಟ್
Follow us
ಸಾಧು ಶ್ರೀನಾಥ್​
|

Updated on:Oct 25, 2019 | 6:02 PM

ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಅಯ್ಯಪ್ಪ ದೊರೆ, ಮಾರನೆಯ ದಿನ ಎಚ್‌ಎಂಟಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ಈಗ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.

ಮಧುಕರ್ ಅಂಗೂರ್ ಹತ್ಯೆಗೂ ಹೊಂಚು ಹಾಕಿದ್ದರು: ಅಯ್ಯಪ್ಪ ಹತ್ಯೆಗೆ ಸುಧೀರ್ ಎಂಬಾತ ಸೂರಜ್ ಎಂಬಾತನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. 2017ರಲ್ಲಿ ಅಲಯನ್ಸ್ ವಿವಿಯಲ್ಲಿ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು.

ಗಲಾಟೆಯಲ್ಲಿ ಅಯ್ಯಪ್ಪ, ಮಧುಕರ್ ಅಂಗೂರ್ ಜೊತೆ ಸೇರಿದ್ದರು. ಈ ಘಟನೆಯ ಬಳಿಕ ಸುಧೀರ್ ಅಂಗೂರ್, ಸೂರಜ್ ಗೆ ಒಂದು ಕೋಟಿ ಹಣ ನೀಡಿ ಹತ್ಯೆ ಮಾಡುವಂತೆ ಸುಪಾರಿ ಕೊಟ್ಟಿದ್ದ. ಸೋದರ ಮಧುಕರ್ ಅಂಗೂರ್ ಹತ್ಯೆಗೆ ಇದೇ ಸುಧೀರ್ ಅಂಗೂರ್ ಸುಪಾರಿ ನೀಡಿದ್ದಎಂದು ತಿಳಿದುಬಂದಿದೆ. ಅಲ್ಲಿಗೆ ಡಬಲ್​ ಮರ್ಡರ್​ ಜಸ್ಟ್​ ಮಿಸ್ ಆಗಿದೆ.

ಅಲಯನ್ಸ್ ವಿವಿ ಎಕ್ಸಿಕ್ಯೂಟಿವ್ ಹಾಗೂ ಶಿವಸೇನೆಯ ಕಾರ್ಯಕರ್ತನಾಗಿದ್ದ ಸೂರಜ್ ಸುಪಾರಿ ಪಡೆದ ನಂತರ ಗ್ಯಾಂಗ್ ರಚನೆ ಮಾಡಿ ಮಧುಕರ್ ಅಂಗೂರ್ ಹಾಗೂ ಅಯ್ಯಪ್ಪ ದೊರೆ ಇಬ್ಬರ ನಡಾವಳಿ ಬಗ್ಗೆ, ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ. ಹಂತಕರು ಕಳೆದ ಆರು ತಿಂಗಳಿಂದ ನಿಗಾ ಇಟ್ಟಿದ್ದರು. ಅ. 15ರಿಂದ ಪ್ಲಾನ್ ಮಾಡಿ ಮಂಗಳವಾರ ವಾಕಿಂಗ್‌ಗೆ ಬಂದಿದ್ದ ಅಯ್ಯಪ್ಪ ದೊರೆ ಹತ್ಯೆ ಮಾಡಿದ್ದಾರೆ.

ಪ್ರಕರಣದ ಇಂಚಿಂಚು ಮಾಹಿತಿ ಇಲ್ಲಿದೆ  ಮೃತರ ಪತ್ನಿ ಭಾವನರಿಂದ ದೂರು ಪಡೆಯಲಾಗಿತ್ತು. ಮೊದಲಿಗೆ ಮೂರು ತಂಡ ರಚನೆ ಮಾಡಲಾಗಿತ್ತು. ನಂತರದಲ್ಲಿ 8 ತಂಡಗಳಿಗೆ ಏರಿಸಲಾಯಿತು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ನಂತರ ತನಿಖೆ ನಡೆಸಿದಾಗ ಯೂನಿವರ್ಸಿಟಿ ವಿವಾದ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ, ಸುಧೀರ್ ಅಂಗೂರ್ ವಿಚಾರಣೆ ಮಾಡಿದಾಗ ಸೂರಜ್ ಸಿಂಗ್ ವಿಚಾರ ಹೇಳಿದ. ಮುಂದೆ, ಸೂರಜ್ ಸಿಂಗ್ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಪ್ರಕಾರ ಮರಣ ಮೃದಂಗ ಹೀಗಿತ್ತು: 17 ಬಾರಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಸೂರಜ್ ಸಿಂಗ್ ಗೆ ಇನ್ನೂ ಕೆಲವರು ಜೊತೆಯಾಗಿ ಕುತ್ತಿಗೆ ಹಾಗೂ ಕೈ ಸೇರಿದಂತೆ ಕೆಲವು ಕಡೆ ಹಲ್ಲೆ ಮಾಡಿದಾಗ ಅಯ್ಯಪ್ಪ, ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ, ಸುಧೀರ್ ಅಂಗೂರ್ ಬಂಧನ ಮಾಡಲಾಗಿದೆ. ಆತನ ಜೊತೆಗೆ ಸೂರಜ್ ನನ್ನು ಸಹ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.

Published On - 1:05 pm, Thu, 17 October 19

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ