ಬೆಂಗಳೂರು: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಉದ್ಯಮಿ, ದೂರು ದಾಖಲು

|

Updated on: Mar 20, 2023 | 10:32 PM

ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರು ಹನಿಟ್ರ್ಯಾಪ್ ಜಾಲದಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಂಗಳೂರು: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಉದ್ಯಮಿ, ದೂರು ದಾಖಲು
ಬೆಂಗಳೂರಿನಲ್ಲಿ ಹನಿಟ್ರ್ಯಾಪ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ನಗರದಲ್ಲಿ ಮತ್ತೊಂದು ಹನಿಟ್ರ್ಯಾಪ್ (Honeytrap) ಜಾಲ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರು ಹನಿಟ್ರ್ಯಾಪ್ ಜಾಲದಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಉದ್ಯಮಿಗೆ ಟೆಲಿಗ್ರಾಂ ಮೂಲಕ ಮೆಹರ್ ಎಂಬ ಮಹಿಳೆಯೊಬ್ಬಳ ಪರಿಚಯವಾಗಿದೆ. ಸಲುಗೆಯಿಂದ ಮಾತನಾಡುತ್ತಿದ್ದ ಆಕೆ, ಗಂಡ ದುಬೈನಲ್ಲಿ ಇದ್ದಾನೆ ಅಂತಾ ಉದ್ಯಮಿಯನ್ನ ಮನೆಗೆ ಆಹ್ವಾನಿಸಿದ್ದಾಳೆ. ಅಲ್ಲದೆ, ತನ್ನ ಫೋಟೋ ಮತ್ತು ಲೋಕೇಷನ್ ಕಳುಹಿಸಿ ಜೆಪಿ ನಗರಕ್ಕೆ ಕರೆಸಿಕೊಂಡಿದ್ದಾಳೆ. ಲೊಕೆಷನ್ ನೋಡಿಕೊಂಡು ಮಹಿಳೆ ಮನೆಗೆ ಹೋಗುತ್ತಿದ್ದಂತೆ ಮೂವರು ಯುವಕರು ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ ಉದ್ಯಮಿಗೆ ತಾನು ಹನಿಟ್ರ್ಯಾಪ್​ ಜಾಲದ ಕೈಗೆ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ತಿಳಿದುಬಂದಿದೆ.

ಮಹಿಳೆಯ ಮನೆಗೆ ಹೋಗುತ್ತಿದ್ದಂತೆ ಏಕಾಏಕಿ ಕೊಠಡಿಗೆ ನುಗ್ಗಿದ ಮೂವರು ಯುವಕರು, ಯಾರು ನೀನು? ಇಲ್ಲಿ ಯಾಕೆ ಬಂದಿದ್ದೀಯಾ ಎಂದು ಉದ್ಯಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅರೆಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುವುತ್ತೇವೆ, ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿ ಹಣ ಸುಲಿಗೆಗೆ ಮುಂದಾಗಿದ್ದಾರೆ. ಮೂರು ಲಕ್ಷ ಕೊಟ್ಟರೆ ಬಿಟ್ಟು ಕಳಿಸುತ್ತೇವೆ ಎಂದು ಹಾಕಿದ ಬೆದರಿಕೆಗೆ ಬೆದರಿದ ಉದ್ಯಮಿ, ಫೋನ್ ಪೇ ಮೂಲಕ 21 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಬೇಗೂರು ಪೊಲೀಸರಿಂದ ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​​ ಅರೆಸ್ಟ್​​: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

21 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡ ನಂತರ ಹನಿಟ್ರ್ಯಾಪ್ ಗ್ಯಾಂಗ್ ಉದ್ಯಮಿಯನ್ನು ರಾತ್ರಿ 8 ಗಂಟೆವರೆಗೂ ತಮ್ಮ ಜೊತೆಯಲ್ಲಿರಿಸಿಕೊಂಡಿತ್ತು. ಅಲ್ಲದೆ, ಮನೆಯಿಂದ ಕ್ರೆಡಿಟ್ ಕಾರ್ಡ್ ತರುವಂತೆ ಉದ್ಯಮಿಗೆ ಸೂಚಿಸಿದ್ದಾರೆ. ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡ ಉದ್ಯಮಿ, ಹನಿಟ್ರ್ಯಾಪ್ ಗ್ಯಾಂಗ್​ನಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಹಿಂದೆ ನಗರದ ಬೇಗೂರು ಪೊಲೀಸರು, ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನೊಳಗೊಂಡ ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್​ ಅನ್ನು ಬಂಧಿಸಿತ್ತು. ಯುವತಿಯರ ಅರೆನಗ್ನ ಫೋಟೋ ಕಳಿಸಿ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದರು, ಬಳಿಕ ಬೇಗೂರಿನ ಬಾಡಿಗೆ ಕೋಣೆಗೆ ಕರೆಸಿಕೊಳ್ಳುತ್ತಿದ್ದರು. ನಂತರ ಅರೆನಗ್ನಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅದರಂತೆ ವ್ಯಕ್ತಿಗೆ 10 ಲಕ್ಷ ಹಣಕ್ಕೆ ಗ್ಯಾಂಗ್​ ಬೇಡಿಕೆಯಿಟ್ಟಿದ್ದು, 3 ಲಕ್ಷ ರೂ. ನೀಡಲು ಮುಂದಾಗಿದ್ದಾಗ ಟ್ರ್ಯಾಪ್ ಆಗಿದ್ದ. ಈ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದ. ದೂರು ದಾಖಲಿಸಿಕೊಂಡು ಆರೋಪಿಗಳನ್ನು  ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Mon, 20 March 23