ಬೇಗೂರು ಪೊಲೀಸರಿಂದ ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​​ ಅರೆಸ್ಟ್​​: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

ಇಬ್ಬರು ಮಹಿಳೆಯರು ಸೇರಿ ನಾಲ್ವರು ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್​ನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತರು.

ಬೇಗೂರು ಪೊಲೀಸರಿಂದ ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​​ ಅರೆಸ್ಟ್​​: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ
ಪ್ರಾತಿನಿಧಿಕ ಚಿತ್ರImage Credit source: oneindia.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 09, 2023 | 9:25 PM

ಬೆಂಗಳೂರು: ಇಬ್ಬರು ಮಹಿಳೆಯರು ಸೇರಿ ನಾಲ್ವರು ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್​ನ್ನು (honeytrap gang) ಬೇಗೂರು ಪೊಲೀಸರು ಬಂಧಿಸಿದ್ದಾರೆ. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತರು. ವೆಬ್​ಸೈಟ್ ಮೂಲಕ ಯುವತಿಯರ ಅರೆನಗ್ನ ಫೋಟೋ ಕಳಿಸಿ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದರು. ಬಳಿಕ ಬೇಗೂರಿನ ಬಾಡಿಗೆ ಕೋಣೆಗೆ ಕರೆಸಿಕೊಳ್ಳುತ್ತಿದ್ದರು. ಅರೆನಗ್ನಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ದೂರುದಾರ ವ್ಯಕ್ತಿಗೆ 10 ಲಕ್ಷ ಹಣಕ್ಕೆ ಗ್ಯಾಂಗ್​ ಬೇಡಿಕೆಯಿಟ್ಟಿದ್ದು, 3 ಲಕ್ಷ ರೂ. ನೀಡಲು ಮುಂದಾಗಿದ್ದ ವ್ಯಕ್ತಿ ಟ್ರ್ಯಾಪ್ ಆಗಿದ್ದಾನೆ. ವ್ಯಕ್ತಿ ಓರ್ವನ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಆರೋಪಿಗಳನ್ನು  ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಅಕ್ರಮ ಚಿನ್ನ ಸಾಗಾಟ: 65 ಲಕ್ಷ ಮೌಲ್ಯದ ಚಿನ್ನ ಸಮೇತ ಓರ್ವ ವ್ಯಕ್ತಿ ವಶಕ್ಕೆ

ಬೆಂಗಳೂರು ಗ್ರಾಮಾಂತರ: ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​ನಲ್ಲಿ ನಡೆದಿದೆ.​​ ಕಸ್ಟಮ್ಸ್​ ಅಧಿಕಾರಿಗಳ ಕಾರ್ಯಾಚರಣೆ ಮಾಡಿ ಬಹ್ರೇನ್​​ನಿಂದ ಬೆಂಗಳೂರಿಗೆ G280 ವಿಮಾನದಲ್ಲಿ ಬಂದಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕ ವಿದೇಶದಿಂದ ಸೋಪ್ ಮಾದರಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಕಸ್ಟಮ್ಸ್​ ಅಧಿಕಾರಿಗಳ ತಂಡ 65 ಲಕ್ಷ ಮೌಲ್ಯದ 1 ಕೆಜಿ 171 ಗ್ರಾಂ ಚಿನ್ನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ವಂಚನೆ ಆರೋಪ: ನ್ಯಾಯಕ್ಕಾಗಿ ಇಂಟೀರಿಯರ್ ಡಿಸೈನರ್ ಅಳಲು

ನೈಸ್ ರಸ್ತೆಯಲ್ಲಿ ಲೇಡಿ ಬೈಕ್ ರೈಡರ್ಸ್ ಮತ್ತು ಸ್ಥಳೀಯನ ನಡುವೆ ಕಿರಿಕ್

ಬೆಂಗಳೂರು: ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್ ತೆರಳಿದ ಯುವತಿಯರ ತಂಡ ಮತ್ತು ಸ್ಥಳೀಯನೊಂದಿಗೆ ಕಿರಿಕ್ ನಡೆದ ಘಟನೆ ಇಂದು (ಮಾರ್ಚ್ 5) ಮಧ್ಯಾಹ್ನ ಬೆಂಗಳೂರಿನ ನೈಸ್​ ರೋಡ್​ನಲ್ಲಿ ನಡೆದಿದ್ದು, ದೂರು-ಪ್ರತಿ ದೂರು ದಾಖಲಾಗಿದೆ. ಯುವತಿಯರ ತಂಡವೊಂದು ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್​ ಆರಂಭಿಸಿದ್ದಾರೆ. ಅದರಂತೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್​ ರಸ್ತೆ ಬಳಿ ತೆರಳುತ್ತಿದ್ದಾಗ ಒಂದೆಡೆ ಬೈಕ್ ನಿಲ್ಲಿಸಿದ್ದು, ಈ ವೇಳೆ ಬಳಿ ಬಂದ ಸ್ಥಳೀಯ, ಗಾಡಿಗಳನ್ನು ತೆಗೆದುಕೊಂಡು ಹೋಗುವಂತೆ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಉಂಟಾದ ಕಿರಿಕ್ ಕೋಣನಕುಂಟೆ ಠಾಣೆ ಮೆಟ್ಟಿಲೇರಿದೆ.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!

ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರಿಂದಲೇ ಅತ್ಯಾಚಾರ

ಹುಬ್ಬಳ್ಳಿ: ಮೊಬೈಲ್ ಫೋನ್ ಕೊಡಿಸುವ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಪರಿಚಿತ ಸ್ನೇಹಿತರಿಂದಲೇ ಗ್ಯಾಂಗ್​​ರೇಪ್ ನಡೆದಿರುವಂತಹ ಘಟನೆ ಹುಬ್ಬಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಡೆದಿದೆ. ದೇವರಾಜ್, ಪಕ್ಕಿರೇಶ್ ಮತ್ತು ಇಬ್ಬರು ಅಪರಿಚಿತರಿಂದ ಕೃತ್ಯವೆಸಗಲಾಗಿದೆ. ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಸ್ನೇಹಿತರು ಬಾಕಿಯನ್ನು ಹುಬ್ಬಳಿಗೆ ಕರೆತಂದಿದ್ದಾರೆ. ಜೀವ ಬೆದರಿಕೆ ಹಾಕಿ ಬಲವಂತವಾಗಿ ಯುವಕರು ಅತ್ಯಾಚಾರವೆಸಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:20 pm, Thu, 9 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ