ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ: 65 ಲಕ್ಷ ಮೌಲ್ಯದ ಚಿನ್ನ ಸಮೇತ ಓರ್ವ ವ್ಯಕ್ತಿ ವಶಕ್ಕೆ
ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್ಪೋರ್ಟ್ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ: ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ (smuggling) 65 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್ಪೋರ್ಟ್ನಲ್ಲಿ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮಾಡಿ ಬಹ್ರೇನ್ನಿಂದ ಬೆಂಗಳೂರಿಗೆ G280 ವಿಮಾನದಲ್ಲಿ ಬಂದಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕ ವಿದೇಶದಿಂದ ಸೋಪ್ ಮಾದರಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಕಸ್ಟಮ್ಸ್ ಅಧಿಕಾರಿಗಳ ತಂಡ 65 ಲಕ್ಷ ಮೌಲ್ಯದ 1 ಕೆಜಿ 171 ಗ್ರಾಂ ಚಿನ್ನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ನೈಸ್ ರಸ್ತೆಯಲ್ಲಿ ಲೇಡಿ ಬೈಕ್ ರೈಡರ್ಸ್ ಮತ್ತು ಸ್ಥಳೀಯನ ನಡುವೆ ಕಿರಿಕ್
ಬೆಂಗಳೂರು: ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್ ತೆರಳಿದ ಯುವತಿಯರ ತಂಡ ಮತ್ತು ಸ್ಥಳೀಯನೊಂದಿಗೆ ಕಿರಿಕ್ ನಡೆದ ಘಟನೆ ಇಂದು (ಮಾರ್ಚ್ 5) ಮಧ್ಯಾಹ್ನ ಬೆಂಗಳೂರಿನ ನೈಸ್ ರೋಡ್ನಲ್ಲಿ ನಡೆದಿದ್ದು, ದೂರು-ಪ್ರತಿ ದೂರು ದಾಖಲಾಗಿದೆ. ಯುವತಿಯರ ತಂಡವೊಂದು ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್ ಆರಂಭಿಸಿದ್ದಾರೆ. ಅದರಂತೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ತೆರಳುತ್ತಿದ್ದಾಗ ಒಂದೆಡೆ ಬೈಕ್ ನಿಲ್ಲಿಸಿದ್ದು, ಈ ವೇಳೆ ಬಳಿ ಬಂದ ಸ್ಥಳೀಯ, ಗಾಡಿಗಳನ್ನು ತೆಗೆದುಕೊಂಡು ಹೋಗುವಂತೆ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಉಂಟಾದ ಕಿರಿಕ್ ಕೋಣನಕುಂಟೆ ಠಾಣೆ ಮೆಟ್ಟಿಲೇರಿದೆ.
ಇದನ್ನೂ ಓದಿ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ವಂಚನೆ ಆರೋಪ: ನ್ಯಾಯಕ್ಕಾಗಿ ಇಂಟೀರಿಯರ್ ಡಿಸೈನರ್ ಅಳಲು
ಬೈಕ್ಗಳನ್ನು ತೆಗೆದುಕೊಂಡು ಹೋಗುವಂತೆ ನಿಂದಿಸಿದ್ದಲ್ಲದೆ ಯುವತಿಯೊಬ್ಬಳ ಬೈಕ್ ಕೀಯನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಯುವತಿಯರು ಕೋಣನಕುಂಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಆರೊಪಕ್ಕೊಳಗಾದ ವ್ಯಕ್ತಿಯೂ ಠಾಣೆಗೆ ತೆರಳಿ ಪ್ರತಿದೂರು ದಾಖಲಿಸಿದ್ದು, ಪೊಲೀಸರು ಎರಡನೇ ಎಫ್ಐಆರ್ ದಾಖಲಿಸಿದ್ದಾರೆ.
ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ; ಆರೋಪಿ ಅರೆಸ್ಟ್
ದಾವಣಗೆರೆ: ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ಮುಡಗೋಡು ಮಳಲಿ ಗ್ರಾಮದ ನಿವಾಸಿ ಮಂಜುನಾಥ (32) ಬಂಧಿತ ಆರೋಪಿಯಾಗಿದ್ದು, ಈತನಿಂದ ಚಿಂಕೆಯ ಒಂದು ಕೊಂಬನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!
ದಾವಣಗೆರೆ ಜಿಲ್ಲೆಯ ಚನ್ಮಗಿರಿ ಪಟ್ಟಣದಲ್ಲಿ ಜಿಂಕೆ ಕೊಂಬು ಮಾರಾಟ ಮಾಡುವಾಗ ಮಂಜುನಾಥ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈ ಹಿಂದೆ ಕೂಡಾ ಹಲವಾರು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈಜಲು ಹೋಗಿ ಸಮುದ್ರದ ಅಲೆಗೆ ಸಿಲುಕಿದ್ದ ಐವರು ಪ್ರವಾಸಿಗರ ರಕ್ಷಣೆ
ಉತ್ತರ ಕನ್ನಡ: ಈಜಲು ಹೋಗಿ ಸಮುದ್ರದ ಅಲೆಗೆ ಸಿಲುಕಿದ್ದ ಐವರು ಪ್ರವಾಸಿಗರ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ನಲ್ಲಿ ನಡೆದಿದೆ. ಹಾವೇರಿ ಮೂಲದ ಅಮನ್(32), ನವಾಜ್(31), ಅಭಿಷೇಕ್(30), ಹುಬ್ಬಳ್ಳಿ ಮೂಲದ ವರದರಾಜ್(22), ಸಂಜಯ್ ಕುಮಾರ್(22) ರಕ್ಷಣೆ ಮಾಡಲಾದ ಪ್ರವಾಸಿಗರು. ಶೇಖರ್ ಪೂಜಾರಿ, ನವೀನ್ ಅಂಬಿಗ, ನಾಗೇಂದ್ರ ಎಂಬುವರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:18 pm, Thu, 9 March 23