ಕೂಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ-ಓರ್ವನ ಹತ್ಯೆ

ಕೂಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೆ ಏರಿ ಓರ್ವನು ಕೊಲೆಯಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಬೊಮ್ಮೇಪಲ್ಲಿಯಲ್ಲಿ ನಡೆದಿದೆ.

ಕೂಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ-ಓರ್ವನ ಹತ್ಯೆ
ಸಾಂಧರ್ಬಿಕ ಚಿತ್ರ
Edited By:

Updated on: Jul 19, 2022 | 10:23 PM

ಚಿಕ್ಕಬಳ್ಳಾಪುರ: ಕೂಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೆ ಏರಿ ಓರ್ವನು ಕೊಲೆಯಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಬೊಮ್ಮೇಪಲ್ಲಿಯಲ್ಲಿ ನಡೆದಿದೆ. ಬಿ.ವಿ.ರಾಜು(28) ಕೊಲೆಯಾದ ದುರ್ದೈವಿ. ಆರೋಪಿ ನಾರಾಯಣಸ್ವಾಮಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.  ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮನೆಯ ಮೇಲೆ ಗಾಂಜಾ ಬೆಳೆದು ಸಿಕ್ಕಿ ಬಿದ್ದ ಆರೋಪಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಎಸ್ ರಮೇಶ್ (40) ಎಂಬುವನ ಮನೆ ಮೇಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ ನೇತ್ರತ್ವದಲ್ಲಿ  ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ಮನೆಯ ಮೇಲೆ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಆರೋಪಿ ಎಸ್ ರಮೇಶ್​ನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಆರ್ ಸಿಸಿ ಮನೆಯ ಮೇಲೆ ಕುಂಡದಲ್ಲಿ ಗಾಂಜಾ ಬೆಳೆದಿದ್ದನು. ಅಬಕಾರಿ ಅಧಿಕಾರಿಗಳು 30ಕ್ಕೂ ಹೆಚ್ಚು ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.

ಕುರಿಗಾಹಿ ಮೇಲೆ ಚಿರತೆ ದಾಳಿ

ವಿಜಯನಗರ: ಕುರಿಗಾಹಿ ಯುವಕನ ಮೇಲೆ ಚಿರತೆ ದಾಳಿ ಮಾಡಿದ್ದು, ಯುವಕ ಕೈಯಲ್ಲಿದ್ದ ಕೊಡಲಿಯಿಂದ ರಕ್ಷಣೆ ಪಡೆದುಕೊಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕೂಗಾರ್ ಕರಿಬಸಪ್ಪ (21) ನಿಗೆ ಗಾಯಗಳಾಗಿವೆ.

ಕುರಿ ಮೇಯಿಸುವಾಗ ಇದ್ದಕ್ಕಿದ್ದಂತೆ ಚಿರತೆ ದಾಳಿ ಮಾಡಿದೆ. ಕೂಡಲೆ ಕುರಿಗಾಹಿ ಕೊಡಲಿಯನ್ನ ಚಿರತೆ ಕಡೆ ಬಿಸಿದ ಹಿನ್ನೆಲೆ ಬಚಾವ್ ಆಗಿದ್ದಾನೆ. ಗಾಯಗೊಂಡ ಕುರಿಗಾಹಿಗೆ ತೆಲಗಿ ಹಾಗೂ ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹಲವಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ‘

ದರೋಡೆ ಹೊಂಚು ಹಾಕಿದ್ದ ಆರೋಪಿಗಳ ಬಂಧನ

ರಾಮನಗರ: ಚನ್ನಪಟ್ಟಣ ತಾಲೂಕಿನ ಮುಳ್ಳಿಕೆರೆ ಗ್ರಾಮದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಗಳನ್ನು ಅಕ್ಕೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯರಾಮು, ಅಶೋಕ್, ಮಂಜು, ಅರುಣ್ ಕುಮಾರ್, ಸುರೇಶ್, ಕೆಂಪೇಗೌಡನನ್ನು ಬಂಧಿತ ಆರೋಪಿಗಳು. ಬಂಧಿತರಿಂದ ಲಾಂಗ್, ಡ್ಯಾಗರ್​, ದೊಣ್ಣೆ, ಖಾರದ ಪುಡಿ ಪ್ಯಾಕೆಟ್, ಒಂದು ಕಾರನ್ನು ಪೊಲೀಸ್​ರು ಜಪ್ತಿ ಮಾಡಿದ್ದಾರೆ.

ಢಾಬಾ ಮಾಲೀಕನ ಮೇಲೆ ಪೊಲೀಸ ಪೇದೆಯಿಂದ ಹಲ್ಲೆ

ವಿಜಯನಗರ: ಢಾಬಾ ಮಾಲೀಕನ ಜೊತೆ ಜಗಳವಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಢಾಬಾ ಮಾಲೀಕ ಹಲ್ಲೆ ಪ್ರಕರಣದ ಬಗ್ಗೆ ದೂರು ನೀಡಲು ಬಂದ ವೇಳೆಯೂ ಪೊಲೀಸ್​ ಪೇದೆ ಅಸಭ್ಯವಾಗಿ ವರ್ತಿಸಿ ಹಾಗೂ ಹಲ್ಲೆ ಮಾಡಿದ್ದನು. ಸದ್ಯ ಪೇದೆಯನ್ನು ಅಮಾನತು ಮಾಡಿ‌ ಎಸ್​​ಪಿ ಡಾ. ಕೆ ಅರುಣ್ ಆದೇಶ ಹೊರಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಠಾಣೆಯ ಪೊಲೀಸ್​ ಪೇದೆ ಕಲ್ಲೇಶಗೌಡ ಮೈಲಾರ ಗ್ರಾಮದ ಗುತ್ತಲ ಕ್ರಾಸ್ ಬಳಿಯ ಹಸಿರು ಮನೆ ಢಾಬಾ ಮಾಲೀಕನ ಜೊತೆ ಜಗಳವಾಡಿದ್ದನು. ತನಿಖೆ ವೇಳೆ ಹಲ್ಲೆ ಹಾಗೂ ಅಸಭ್ಯ ವರ್ತನೆ ಬೆಳಕಿಗೆ ಬಂದ ಪರಿಣಾಮ ಪೇದೆ ಅಮಾನತಾಗಿದ್ದಾನೆ.

ಲಾರಿಗೆ ಖಾಸಗಿ ಬಸ್​ ಡಿಕ್ಕಿ, ಸ್ವಾಮೀಜಿ ಸೇರಿ ಐವರಿಗೆ ಗಾಯ

ಬಾಗಲಕೋಟೆ:  ಲಾರಿಗೆ ಖಾಸಗಿ ಬಸ್​ ಡಿಕ್ಕಿಯಾದ ಪರಿಣಾಮ ಸ್ವಾಮೀಜಿ ಸೇರಿ ಐವರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣ ಹೊರವಲಯದಲ್ಲಿ  ನಡೆದಿದೆ. ಚಿತ್ರದುರ್ಗದ ಗಾಣಿಗ ಗುರುಪೀಠದ ಬಸವಪ್ರಭು ಸ್ವಾಮೀಜಿ ಅವರಿಗೆ ಗಾಯವಾಗಿದ್ದು, ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಚಾಲಕ ಸೇರಿ ನಾಲ್ವರಿಗೆ ಇಳಕಲ್ ಖಾಸಗಿ​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು (ಜುಲೈ 19) ಮುಂಜಾನೆ 3 ಗಂಟೆಗೆ  ಲಾರಿಗೆ ಹಿಂಬದಿಯಿಂದ ಬರುತ್ತಿದ್ದವಿಆರ್​​ಎಲ್ ಬಸ್​​ ಡಿಕ್ಕಿ ಹೊಡೆದಿದೆ.  ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನೋವಾ ಕಾರು ಡಿಕ್ಕಿ, ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರ ದುರ್ಮರಣ
ಹಾಸನ : ಚಲಿಸುತ್ತಿದ್ದ ಬೈಕ್​​ಗೆ ಹಿಂಬದಿಯಿಂದ ಇನೋವಾ ಕಾರು ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಆಂದಲೆ ಗ್ರಾಮದ ಬಳಿ  ನಡೆದಿದೆ. ಚಿಕ್ಕಮಗಳೂರು ಮೂಲದ ಪ್ರದೀಪ್(30), ಮೂರ್ತಿ(33) ಮೃತ ದುರ್ದೈವಿಗಳು. ಅಪಘಾತದ ನಂತರ ಸ್ಥಳದಲ್ಲೇ ಕಾರು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.  ಹಳೆಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

Published On - 10:23 pm, Tue, 19 July 22