ನ್ಯೂ ಇಯರ್ ಗುರಿಯಾಗಿಸಿಕೊಂಡು ಡ್ರಗ್ಸ್​ ದಂಧೆ: ಸಿಸಿಬಿ ಬಲೆಗೆ ಸಿಕ್ಕಿ ಬಿದ್ದ ಮಿಕಗಳು

ನ್ಯೂ ಇಯರ್ ಸೆಲೆಬ್ರೇಷನ್​ನಲ್ಲಿ ಬೆಂಗಳೂರನ್ನು ಡ್ರಗ್ಸ್ ಅಲೆಯಲ್ಲಿ ತೇಲಿಸಲು ಡ್ರಗ್ಸ್ ಪೆಡ್ಲರ್​ಗಳು ಮುಂದಾಗಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದಾರೆ

ನ್ಯೂ ಇಯರ್ ಗುರಿಯಾಗಿಸಿಕೊಂಡು ಡ್ರಗ್ಸ್​ ದಂಧೆ: ಸಿಸಿಬಿ ಬಲೆಗೆ ಸಿಕ್ಕಿ ಬಿದ್ದ ಮಿಕಗಳು
Follow us
shruti hegde
|

Updated on:Dec 16, 2020 | 11:09 AM

ಬೆಂಗಳೂರು: ನ್ಯೂ ಇಯರ್ ವೇಳೆ ಬೆಂಗಳೂರನ್ನು ಮಾದಕ ಅಲೆಯಲ್ಲಿ ತೇಲಿಸಲು ಸಜ್ಜಾಗಿದ್ದ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. 4 ಕುಖ್ಯಾತ  ಡ್ರಗ್ ಪೆಡ್ಲರ್​ರನ್ನು ಸಿಸಿಬಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಎಂ. ತುರುಪಾಲ್, ಕಮಲೇಶ್, ಸತೀಶ್ ಕುಮಾರ್ ಹಾಗೂ ಏಜಾಜ್ ಪಾಶಾ ಬಂಧಿತ ಆರೋಪಿಗಳು.

ಆರೋಪಿಗಳು ಅಮೃತ ಹಳ್ಳಿಯ ಮನೆಯೊಂದರಲ್ಲಿ ಮಾದಕ ದಂಧೆ ನಡೆಸುತ್ತಿದ್ದರು. ಬರೋಬ್ಬರಿ 1 ಕೋಟಿ 15 ಲಕ್ಷ ಮೌಲ್ಯದ ಮಾದಕ ಪದಾರ್ಥಗಳೊಂದಿಗೆ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಹ್ಯಾಶ್ ಆಯಿಲ್ ಮತ್ತು ಗಾಂಜಾ ಸಮೇತವಾಗಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಬಂಧಿತರಿಂದ 5ಕೆ.ಜಿ 600ಗ್ರಾಂ ಹ್ಯಾಶ್ ಆಯಿಲ್ ಹಾಗೂ 3 ಕೆಜಿ 300ಗ್ರಾಂ ಗಾಂಜಾ, ಅವರಲ್ಲಿದ್ದ ಕಾರ್ ಮತ್ತು ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟೆಡ್ಡಿ ಬೇರ್​ನಲ್ಲಿ ಡ್ರಗ್ಸ್.. ಅಸ್ಸಾಂ ಮೂಲದ ಡ್ರಗ್​ ಪೆಡ್ಲರ್ ಕೊತ್ತನೂರಿನಲ್ಲಿ ಅರೆಸ್ಟ್

Published On - 10:59 am, Wed, 16 December 20